ನೆಲಮಂಗಲ: ಅಡಕಮಾರನಹಳ್ಳಿ ಆಂಜನೇಯಸ್ವಾಮಿ ದೇವಾಲಯದ ಪಕ್ಕದ ರಸ್ತೆಯಲ್ಲಿ ನಿರ್ಮಿಸಲಾಗಿದ್ದ ಹೆಬ್ಟಾಗಿಲು ಬಿದ್ದು, ಬೈಕ್ ಸವಾರ ಸ್ಥಳದಲ್ಲೇ ಮೃತನಾದರೆ, ಮೂರು ಜನರು ಪ್ರಾಣಾಪಾಯದಿಂದ ಪಾರಾದ ಘಟನೆ ಶನಿವಾರ ನಡೆದಿದೆ.
ನರಸಪ್ಪ (30) ಮೃತ ದುರ್ದೈವಿ. ಈತ ಗಾರೆ ಕೆಲಸ ಮಾಡುತ್ತಿದ್ದು, ಹೆಂಡತಿ ಮಕ್ಕಳನ್ನು ಕರೆತರಲು ಹೋಗಿದ್ದಾಗ ಈ ಘಟನೆ ಸಂಭವಿಸಿ ಮೃತನಾಗಿದ್ದಾನೆ.
ರಾಷ್ಟ್ರೀಯ ಹೆದ್ದಾರಿ 4ರ ಸರ್ವಿಸ್ ರಸ್ತೆಯಿಂದ ಅಡಕಮಾರನಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಆಂಜನೇಯಸ್ವಾಮಿ ದೇವಾಲಯದ ಹೆಬ್ಟಾಗಿಲು ನಿರ್ಮಿಸಲಾಗಿತ್ತು. ಲಾರಿ ಚಾಲಕನ ತನ್ನ ನಿರ್ಲಕ್ಷ್ಯದಿಂದ ಎತ್ತರವಾಗಿ ಸರಕು ತುಂಬಿದ್ದ ಲಾರಿಯನ್ನು ಹೆಬ್ಟಾಗಿಲಿನ ಕೆಳಭಾಗದಲ್ಲಿ ತೆಗೆದುಕೊಂಡು ಹೋಗಿದ್ದಾನೆ. ಇದರ ಪರಿಣಾಮ ಹೆಬ್ಟಾಗಿಲಿಗೆ ತಗಲಿ ಅರ್ಧ ವೃತ್ತಾಕಾರವಾಗಿ ನಿರ್ಮಿಸಲಾಗಿದ್ದಹೆಬ್ಟಾಗಿಲಿನ ಪಿಲ್ಲರ್ ಕೆಳಗೆ ಬಿದ್ದಿದೆ. ಅದೇ ಸಮಯದಲ್ಲಿ ರಸ್ತೆಯಲ್ಲಿ ಚಲಿಸು ತ್ತಿದ್ದ ಬೈಕ್ ಸವಾರನ ಮೇಲೆ ಬಿದ್ದ ಪರಿಣಾಮ ಸ್ಥಳದಲ್ಲಿ ಮೃತನಾದರೆ, ಮತ್ತೆ ರಡು ಬೈಕ್ ಜಖಂ ಆಗಿವೆ.
ಇದನ್ನೂ ಓದಿ:ರಾಸಾಯನಿಕ ಕಾರ್ಖಾನೆಯಲ್ಲಿ ಅಗ್ನಿ ಆಕಸ್ಮಿಕ: 12 ಜನರ ಸಾವು!
ಮೂರು ಜನ ಪ್ರಾಣಾಪಾಯದಿಂದ ಪಾರಾಗಿದ್ದು, ಭಾರೀ ದುರಂತ ಕೈತಪ್ಪಿದೆ. ಲಾರಿ ಚಾಲಕ ಪರಾರಿ ಆಗಿದ್ದು, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.