Advertisement

ವರ್ಲ್ಡ್ ಪ್ಯಾರಾ ಸ್ವಿಮ್ಮಿಂಗ್‌ ಚಿನ್ನ ಗೆದ್ದ ಕಾಂಚಾನಮಾಲಾ ಪಾಂಡೆ

11:33 AM Dec 09, 2017 | Team Udayavani |

ಮೆಕ್ಸಿಕೊ: ಭಾರತದ ಕಾಂಚನಮಾಲಾ ಪಾಂಡೆ “ವರ್ಲ್ಡ್ ಪ್ಯಾರಾ ಸ್ವಿಮ್ಮಿಂಗ್‌ ಚಾಂಪಿಯನ್‌ಶಿಪ್‌’ನಲ್ಲಿ ಚಿನ್ನದ ಪದಕ ಗೆದ್ದು ಹೊಸ ಇತಿಹಾಸ ನಿರ್ಮಿಸಿದ್ದಾರೆ. ಭಾರತದ ಸ್ಪರ್ಧಿಯೊಬ್ಬರು ವಿಶ್ವ ಪ್ಯಾರಾ ಈಜು ಕೂಟದಲ್ಲಿ ಚಿನ್ನ ಗೆಲ್ಲುತ್ತಿರುವುದು ಇದೇ ಮೊದಲೆಂಬುದು ವಿಶೇಷ.

Advertisement

ದೃಷ್ಟಿ ದೋಷ ಸಮಸ್ಯೆಗೆ ಒಳಗಾಗಿರುವ 26ರ ಹರೆಯದ ಕಾಂಚನಮಾಲಾ ಎಸ್‌-11 ವಿಭಾಗದ 200 ಮೀ. ಮೆಡ್ಲೆ ಸ್ಪರ್ಧೆಯಲ್ಲಿ ಮೊದಲಿಗರಾಗಿ ಬಂದು ಬಂಗಾರದ ಪದಕದೊಂದಿಗೆ ಸಂಭ್ರಮಿಸಿದರು.

“ವಿಶ್ವ ಚಾಂಪಿಯನ್‌ಶಿಪ್‌ಗೊàಸ್ಕರ ನಾನು ಕಠಿನ ಅಭ್ಯಾಸ ನಡೆಸಿದ್ದೆ. ಈ ಸ್ಪರ್ಧೆಯಲ್ಲಿ ಪದಕ ಗೆಲ್ಲುವ ವಿಶ್ವಾಸವಿತ್ತು. ಆದರೆ ಮೊದಲ ಸ್ಥಾನ ಪಡೆದು ಚಿನ್ನ ಗೆಲ್ಲುವ ನಿರೀಕ್ಷೆ ಇರಲಿಲ್ಲ. ಹೀಗಾಗಿ ಅಚ್ಚರಿಯಾಗಿದೆ. ಅಷ್ಟೇ ಸಂತೋಷವಾಗಿದೆ. ಇದನ್ನು ಯಾವ ಶಬ್ದಗಳಲ್ಲಿ ಬಣ್ಣಿಸಬೇಕೆಂದು ತೋಚುತ್ತಿಲ್ಲ…’ ಎಂದು ಕಾಂಚನಮಾಲಾ ಪ್ರತಿಕ್ರಿಯಿಸಿದ್ದಾರೆ.

ಕಾಂಚನಮಾಲಾ ಪಾಂಡೆ ಈ ಕೂಟಕ್ಕೆ ಅರ್ಹತೆ ಸಂಪಾದಿಸಿದ್ದೇ ಒಂದು ದೊಡ್ಡ ಕತೆ. ಕಳೆದ ಜುಲೈಯಲ್ಲಿ ಬರ್ಲಿನ್‌ನಲ್ಲಿ ನಡೆದ ಪ್ಯಾರಾ ಸ್ವಿಮ್ಮಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಕಾಂಚನಮಾಲಾ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next