Advertisement
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಅವರು ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳ ಕುರಿತಂತೆ ಪರಿಶೀಲನೆ ಸಭೆ ನಡೆಸಿ ಸುದ್ದಿಗಾರ ರೊಂದಿಗೆ ಮಾತನಾಡಿ ದರು. ಜ. 9ರಂದು ಈ ಕುರಿತು ಉನ್ನತ ಮಟ್ಟದ ವಿವಿಧ ಇಲಾಖೆ ಪ್ರಧಾನ ಕಾರ್ಯ ದರ್ಶಿಗಳನ್ನೊಳಗೊಂಡ ಸಮಾಲೋಚನೆ ನಡೆಯಲಿದೆ ಎಂದರು.
ಮಕ್ಕಳ ರಕ್ಷಣೆ ಗ್ರಾಮ ಮಟ್ಟದಲ್ಲೇ ಎಲ್ಲರ ಹೊಣೆಯಾಗಬೇಕು. ಆ ನಿಟ್ಟಿನಲ್ಲಿ ಗ್ರಾಮದಿಂದ ತೊಡಗಿ ಜಿಲ್ಲಾ ಮಟ್ಟದ ಸಮಿತಿಗಳಿದ್ದರೂ ಅವುಗಳಿಗೆ ಸಾಂವಿಧಾನಿಕ ಶಕ್ತಿ ತುಂಬುವ ಕೆಲಸ ಮಾಡುವ ಉದ್ದೇಶವಿದೆ. ಗ್ರಾಮ ಮಟ್ಟದ ಸಮಿತಿಯನ್ನು ಗ್ರಾ.ಪಂ. ಮಟ್ಟದ ಸಮಿತಿ ಪರಿಶೀಲಿಸಬೇಕು, ಇವುಗಳಿಂದ ಫಾರಂ 1, 2 ಆ ಬಳಿಕ ತಾಲೂಕು, ಜಿಲ್ಲಾ ಮಟ್ಟದ ಸಮಿತಿಗಳ ಪರಿಶೀಲನೆಗೊಳಪಟ್ಟು ಜಿಲ್ಲಾ ಕೆಡಿಪಿ ಸಭೆಗಳಲ್ಲೂ ಚರ್ಚೆಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ಸೂಕ್ತ ನಿಯಮ ಬದಲಾವಣೆ ಮಾಡಲಾಗುವುದು ಎಂದರು.
Related Articles
Advertisement
ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶೋಭಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಾಪಾ ಭೋವಿ, ಎಎಸ್‌ಪಿ ಕುಮಾರ್‌ಚಂದ್ರ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಆನಂದ್ ಹಾಜರಿದ್ದರು.
ಉಡುಪಿಯಲ್ಲೂ ಸಭೆಮಣಿಪಾಲ: ನಾಗಣ್ಣ ಗೌಡ ಅವರು ಉಡುಪಿ ಜಿ.ಪಂ. ಸಭಾಂಗಣದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿ ದರು. ಹಿರಿಯ ಸಿವಿಲ್ ನ್ಯಾಯಾಧೀಶೆ ಶರ್ಮಿಳಾ, ಡಿಸಿ ಕೂರ್ಮಾರಾವ್ ಎಂ., ಜಿ.ಪಂ. ಸಿಇಒ ಪ್ರಸನ್ನ ಎಚ್., ಅಧಿಕಾರಿಗ ಳಾದ ಯತೀಶ್, ವೀಣಾ ಬಿ.ಎನ್., ಸಿದ್ದಲಿಂಗಪ್ಪ, ಶಿವಕುಮಾರಯ್ಯ, ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್ ಮತ್ತು ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಆಯೋಗದ ಅಧ್ಯಕ್ಷರ ಸೂಚನೆ
– ಮಹಿಳಾ ಹಾಸ್ಟೆಲ್‌ಗಳಿಗೆ ಮಹಿಳೆ ಯರೇ ವಾರ್ಡನ್ ಆಗಿರಬೇಕು. ಹಿಂದುಳಿದ ವರ್ಗಗಳ ವಸತಿ ನಿಲಯ ಗಳಲ್ಲಿ ವಾರ್ಡನ್‌ಗಳು ಮಕ್ಕಳಿಗೆ ಅವರ ಹಕ್ಕು ಕರ್ತವ್ಯಗಳನ್ನು ಹೇಳಿಕೊಡ ಬೇಕು, ಮಕ್ಕಳಿಗೆ “ಹಾಸ್ಟೆಲ್ ತಮ್ಮ ಮನೆಯಂತೆ’ ಅನ್ನಿಸುವ ವಾತಾವರಣ ರೂಪಿಸಬೇಕು.
– ವಸತಿ ನಿಲಯ ಹಾಗೂ ಶಾಲೆಗ ಳಲ್ಲಿ ನುಗ್ಗೆ, ಪಪ್ಪಾಯಿ, ನಿಂಬೆ ಗಿಡ, ತರಕಾರಿ ಕೃಷಿ ಮಾಡಬೇಕು. ಚಿಕ್ಕಂದಿನಲ್ಲೇ ಮರ ಉಳಿಸುವ ಬಗ್ಗೆ ಅರಿವು ಹೊಂದಲು ಇದು ಪೂರಕ.
– ಗ್ರಾ.ಪಂ.ಗಳಲ್ಲಿ ಮಕ್ಕಳ ಜಾಗೃತಿ ಜಾಥಾ ಆಯೋಜಿಸಬೇಕು. ಮಕ್ಕಳ ಹಕ್ಕುಗಳ ರಕ್ಷಣೆ, ಬಾಲ್ಯವಿವಾಹ, ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಇರುವ ಕಠಿನ ಕಾನೂನುಗಳ ಬಗ್ಗೆ ಜಾಥಾದಲ್ಲಿ ಜನರಿಗೆ ಮುಟ್ಟುವಂತಹ ಘೋಷಣೆ ಕೂಗಬೇಕು, ಆ ಕುರಿತು ಪ್ರದರ್ಶನವೂ ಇರಬೇಕು.
– ಬಾಲ್ಯವಿವಾಹ ತಡೆ ಸಮಿತಿಯಲ್ಲಿ ತಹಶೀಲ್ದಾರ್, ತಾ.ಪಂ. ಇಒಗಳು, ಬಿಇಒ, ವೈದ್ಯರು, ಪೊಲೀಸ್ ಮತ್ತಿತರ ರನ್ನು ಸೇರಿಸಿಕೊಂಡು ಸಮಗ್ರವಾಗಿ ಆಗಾಗ ಸಭೆ ನಡೆಸುತ್ತಿರಬೇಕು. ಬಾರ್, ಪಬ್‌ಗ ಮಕ್ಕಳು ಬೇಡ
ಬಾರ್, ಪಬ್‌ಗ ಹೆತ್ತವರು ಮಕ್ಕಳನ್ನು ಕರೆದುಕೊಂಡು ಹೋದರೆ ಋಣಾತ್ಮಕ ಪರಿಣಾಮ ಉಂಟಾಗುತ್ತದೆ. ಮಕ್ಕಳ ಪ್ರವೇಶಕ್ಕೆ ನಿರ್ಬಂಧ ಕಾನೂನು ಈಗಾ ಗಲೇ ಇದ್ದು, ಕಟ್ಟುನಿಟ್ಟಾಗಿ ಪಾಲಿಸುವಂತೆ ಅಬಕಾರಿ ಅಧಿಕಾರಿಗಳಿಗೂ ಸೂಚಿಸು ವುದಾಗಿ ನಾಗಣ್ಣ ಗೌಡ ತಿಳಿಸಿದರು.