Advertisement

ತಿದ್ದುಪಡಿಗೆ ಮಾಡಲಾದ ಶಿಫಾರಸು ಸರಕಾರಕ್ಕೆ ಸಲ್ಲಿಕೆ: ಮಹೇಶ ಜೋಷಿ

09:18 PM Oct 27, 2022 | Team Udayavani |

ಬೆಂಗಳೂರು: ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆ-2022ರಲ್ಲಿ ತಿದ್ದುಪಡಿಗಾಗಿ ಮಾಡಲಾದ ಶಿಫಾರಸುಗಳನ್ನು ಸರಕಾರಕ್ಕೆ ಸಲ್ಲಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಷಿ ಹೇಳಿದ್ದಾರೆ.

Advertisement

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆ -2022ರ  ಕುರಿತು ನ್ಯಾಯಮೂರ್ತಿಗಳು, ಸಾಹಿತಿಗಳು, ಕೈಗಾರಿಕೋದ್ಯಮಿಗಳು, ಕನ್ನಡಪರ ಚಿಂತಕರು, ಕನ್ನಡಪರ ಮಠಾಧೀಶರು, ಶಿಕ್ಷಣ ತಜ್ಞರು, ಕಾನೂನು ತಜ್ಞರು, ಮಾಧ್ಯಮ ಪ್ರಮುಖರು, ಕನ್ನಡ ಹೋರಾಟಗಾರರು ಹಾಗೂ ವಿವಿಧ ಗಣ್ಯರೊಂದಿಗೆ ನಡೆಸಲಾಗಿದ್ದ ಚಿಂತನಾ ಗೋಷ್ಠಿಯಲ್ಲಿ  ಸ್ವೀಕರಿಸಿದ ಸಲಹೆ-ಸೂಚನೆಗಳನ್ನು ಪರಿಶೀಲಿಸಿ  ಮಾಡಲಾದ ಶಿಫಾರಸುಗಳನ್ನು  ಮುಖ್ಯಮಂತ್ರಿಗಳಿಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಮಸೂದೆ ಅನುಷ್ಠಾನ ಕಾರ್ಯವ್ಯವಸ್ಥೆಯಲ್ಲಿ ಅಧಿಕಾರಿಗಳದ್ದೇ ಪಾರುಪತ್ಯ ಕಂಡುಬರುತ್ತಿದ್ದು, ಕೇವಲ ಅಧಿಕಾರಿಗಳಿಂದ ಸಮಗ್ರ ಕನ್ನಡ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ, ಜಿಲ್ಲಾ, ತಾಲೂಕು ಘಟಕಗಳ ಅಧ್ಯಕ್ಷರನ್ನು ಆಯಾ ಕಾರ್ಯಕ್ರಮ ಅನುಷ್ಠಾನ ಸಮಿತಿಗಳಲ್ಲಿ ಸೇರಿಸಬೇಕು, ಇಲ್ಲದಿದ್ದರೆ ಈ ಕಾಯ್ದೆಗೆ ಸ್ಪಷ್ಟತೆ ಇರುವುದಿಲ್ಲ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ ಎಂದು ಹೇಳಿದ್ದಾರೆ.

ಎಲ್ಲ ಕನ್ನಡ ಸಂಘ-ಸಂಸ್ಥೆಗಳಿಗೆ ಮಾತೃ ಸಂಸ್ಥೆಯಾದ ಮತ್ತು ಸರಕಾರದಿಂದ ರಾಜ್ಯ ಸಚಿವ ಸ್ಥಾನಮಾನ ಗೌರವವನ್ನು ಹೊಂದಿರುವಂತಹ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾಯಿತ ಅಧ್ಯಕ್ಷರನ್ನು ರಾಜ್ಯಮಟ್ಟದ ಸಮಿತಿಗೆ ಉಪಾಧ್ಯಕ್ಷರಾಗಬೇಕು ಎಂಬ ಆಗ್ರಹ ಕೇಳಿಬಂದಿದೆ ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next