Advertisement

ಅಧಿಕಾರಿಗಳ ವಿರುದ್ಧ ನಾಡಗೌಡ ಗರಂ

12:01 PM Mar 05, 2019 | |

ಗೊರೇಬಾಳ: ಸಿಂಧನೂರು ತಾಲೂಕಿನ ಅಮರಾಪುರ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ ಪಶುಸಂಗೋಪನೆ ಹಾಗೂ ಮೀನುಗಾರಿಕೆ ಸಚಿವ ವೆಂಕಟರಾವ್‌ ನಾಡಗೌಡ ಅಧಿಕಾರಿಗಳ ವಿರುದ್ಧ ಹರಿಹಾಯ್ದ ಪ್ರಸಂಗ ನಡೆಯಿತು.

Advertisement

ಭೂಮಿಪೂಜೆ ಮಾಡಿದ ಕಾಮಗಾರಿಗಳ ಮಾಹಿತಿ ನೀಡಬೇಕಾದ ಅಧಿಕಾರಿಗಳೇ ಸ್ಥಳದಲ್ಲಿರಲಿಲ್ಲ. ಇದರಿಂದಾಗಿ ಅಧಿಕಾರಿಗಳ ವಿರುದ್ಧ ಸಚಿವರು ಗರಂ ಆದರು. ಯಾವುದೇ ಕಾಮಗಾರಿಗೆ ಚಾಲನೆ ನೀಡುವ ವೇಳೆ ಸಂಬಂಧಿಸಿದ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು. ಅಧಿಕಾರಿಗಳ ಹಾಗೂ ಆಪ್ತ ಸಹಾಯಕರ ವಿರುದ್ಧ ಗರಂ ಆಗಿ, ಕಾಮಗಾರಿಗಳ ಭೂಮಿಪೂಜೆ ವೇಳೆ ಸ್ಥಳದಲ್ಲಿದ್ದು ಮಾಹಿತಿ ನೀಡದೇ ಏನು ಮಾಡುತ್ತಿದ್ದಿರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಮಗಾರಿಯ ಸಂಪೂರ್ಣ ಮಾಹಿತಿಯ ಕಿರುಹೊತ್ತಿಗೆ ತರಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಚಾಲನೆ: ತಾಲೂಕಿನ ಅಮರಾಪುರ ಗ್ರಾಮದಲ್ಲಿ ಪ್ರಧಾನಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯ 27 ಲಕ್ಷ ರೂ.ಗಳಲ್ಲಿ ಅಮರಾಪುರದಿಂದ ಹೊಸಳ್ಳಿ ಕ್ಯಾಂಪ್‌ವರೆಗೆ ರಸ್ತೆ ಡಾಂಬರೀಕರಣ, ಕೆಐಡಿಎಲ್‌ ಯೋಜನೆಯ 38 ಲಕ್ಷ ವೆಚ್ಚದ ಪಶು ಚಿಕಿತ್ಸಾಲಯ ನಿರ್ಮಾಣ, ಎಸ್‌ಇಪಿ, ಟಿಎಸ್‌ಪಿ ಯೋಜನೆಯಡಿ 25 ಲಕ್ಷ ರೂ.ಗಳಲ್ಲಿ ಸಿಸಿ ರಸ್ತೆ ನಿರ್ಮಾಣ, ಸಾಸಲಮರಿ ಕ್ಯಾಂಪ್‌ನಲ್ಲಿ ಕೆಐಡಿಎಲ್‌ ಯೋಜನೆಯ 38 ಲಕ್ಷ ರೂ.ಗಳಲ್ಲಿ ಪಶು ಚಿಕಿತ್ಸಾಲಯ ಕಟ್ಟಡ ನಿರ್ಮಾಣ, ಪಿಡಬ್ಲ್ಯೂಡಿ ಇಲಾಖೆಯ 25 ಲಕ್ಷ ರೂ.ಗಳಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ, ಜಿ.ಪಂ.ನಿಂದ ಎಚ್‌ಕೆಆರ್‌ಡಿಬಿ ಅನುದಾನದಡಿ 57.56 ಲಕ್ಷ ರೂ. ಗಳಲ್ಲಿ ಸಿಸಿ ರಸ್ತೆ ನಿರ್ಮಾಣ ಹಾಗೂ ನೂತನ ಕೆರೆ ನಿರ್ಮಾಣಕ್ಕೆ ಚಾಲನೆ ನೀಡಿದರು.

ಕೆಂಗಲ್‌ ಗ್ರಾಮದಲ್ಲಿ ಪಿಡಬ್ಲ್ಯೂಡಿ ಇಲಾಖೆಯ 30 ಲಕ್ಷ ರೂ.ಗಳಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ, ದಢೇಸೂಗುರು ಗ್ರಾಮದಲ್ಲಿ ಕೆಐಡಿಎಲ್‌ ಯೋಜನೆಯ 38 ಲಕ್ಷ ರೂ.ಗಳಲ್ಲಿ ಪಶು ಚಿಕಿತ್ಸಾಲಯ ಕಟ್ಟಡ ನಿರ್ಮಾಣ, ಬೊಮ್ಮನಾಳ ಗ್ರಾಮದಲ್ಲಿ ಕೆಐಡಿಎಲ್‌ ಯೋಜನೆಯ 38 ಲಕ್ಷ
ರೂ.ಗಳಲ್ಲಿ ಪಶು ಚಿಕಿತ್ಸಾಲಯ ಕಟ್ಟಡ ನಿರ್ಮಾಣಕ್ಕೆ ಸಚಿವ ನಾಡಗೌಡ ಚಾಲನೆ ನೀಡಿದರು.

ವಾಗ್ವಾದ: ತಾಲೂಕಿನ ಸಾಸಲಮರಿ ಕ್ಯಾಂಪ್‌ ಹೊರವಲಯದಲ್ಲಿ ಕೆರೆ ನಿರ್ಮಾಣಕ್ಕೆ ಜಮೀನು ಖರೀದಿ ವಿಚಾರವಾಗಿ ಸಚಿವರು ಹಾಗೂ ನಿವಾಸಿಗಳ ಮಧ್ಯೆ ವಾಗ್ವಾದ ನಡೆಯಿತು.

Advertisement

ಸರ್ಕಾರದ ಅನುದಾನ ಯಾವಾಗ ಬರುತ್ತದೋ ಗೊತ್ತಿಲ್ಲ. ನಮಗೆ ಮುಂಗಡವಾಗಿ ನೀವು ಹಣ ನೀಡಿ ನಂತರ ಕಾಮಗಾರಿ ಪ್ರಾರಂಭಿಸಿ ಎಂದು ಜಮೀನು ನೀಡಿದವರು ಸಚಿವರಿಗೆ ಆಗ್ರಹಿಸಿದರು. ಇದರಿಂದಾಗಿ ಕೆಲಕಾಲ ವಾಗ್ವಾದ ನಡೆಯಿತು.

ನಂತರ ಸ್ಥಳದಲ್ಲೇ ಜಮೀನು ಖರೀದಿಗೆ ಮುಂದಾದ ಸಚಿವರು ಜಮೀನು ಮಾಲೀಕರಿಗೆ ಮುಂಗಡು ಹಣ ನೀಡಿ, ಕೆರೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು. ಜೆಡಿಎಸ್‌ ಅಧ್ಯಕ್ಷ ಲಿಂಗಪ್ಪ ದಡೇಸ್ಗೂರು, ಗ್ರಾಪಂ ಅಧ್ಯಕ್ಷೆ ಜ್ಯೋತಿ ದೊರೆಸ್ವಾಮಿ ನಾಯ್ಡು, ಮುಖಂಡರಾದ ರಾಮಣ್ಣ ಸಾಸಲಮರಿ, ಅಶೋಕ ಗದ್ರಟಗಿ, ಎಸ್‌ .ದೇವೇಂದ್ರಗೌಡ, ಜಿ.ಸತ್ಯನಾರಾಯಣ, ನಾಗೇಶ ಹಂಚಿನಾಳಕ್ಯಾಂಪ್‌, ಹನುಮೇಶ, ಚಂದ್ರಶೇಖರ ಮೈಲಾರ, ಬಸವರಾಜ ಬಡಿಗೇರ, ನರೇಶ ಚೌಧರಿ, ಮಲ್ಲನಗೌಡ ಮಾವಿನಮಡಗು, ಆಸೀಫ್‌, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next