Advertisement

ಎಲೆಕ್ಟ್ರಿಕ್‌ ಕುಕ್ಕರ್‌ನಿಂದ ಎನ್‌ 95 ಮಾಸ್ಕ್ ಶುದ್ಧಿ ಸಾಧ್ಯ

11:38 PM Aug 10, 2020 | mahesh |

ವಾಷಿಂಗ್ಟನ್‌: ಪರಿಣಾಮಕಾರಿ ಮಾಸ್ಕ್ ಅಂತಲೇ ಕರೆಯ ಲ್ಪಡುವ ಎನ್‌- 95 ಮಾಸ್ಕ್ಗಳ ಶುದ್ಧೀಕರಣ, ಮರುಬಳಕೆ ದೊಡ್ಡ ಸವಾಲು. ಆದರೆ, ಇದಕ್ಕೆ ಹೆಚ್ಚು ಚಿಂತಿಸಬೇಕಿಲ್ಲ. ಮನೆಯಲ್ಲಿನ ಎಲೆಕ್ಟ್ರಿಕ್‌ ಕುಕ್ಕರ್‌ಗಳು ಈ ಮಾಸ್ಕ್ಗಳನ್ನು ಸಮರ್ಥವಾಗಿ ಶುದ್ಧೀಕರಿಸಬಲ್ಲವು.

Advertisement

ಸೋಂಕಿತರನ್ನು ಆರೈಕೆ ಮಾಡುವ ಆರೋಗ್ಯ ಸಿಬ್ಬಂದಿ ಎನ್‌-95 ಮಾಸ್ಕ್ಗಳನ್ನು ಹೆಚ್ಚಾಗಿ ಬಳಸುತ್ತಾರೆ. ಉಸಿರಾಟದ ಹನಿಗಳ ಮೂಲಕ ಅಶುಚಿಗೊಂಡ ಈ ಮಾಸ್ಕ್ ಗಳನ್ನು ಮತ್ತೆ ಬಳಸುವುದು ಕೂಡ ಆತಂಕದ ವಿಚಾರ. ಇದಕ್ಕೆ ಪರಿಹಾರವಾಗಿ ಕುಕ್ಕರ್‌ ಮೂಲಕ ನೈರ್ಮ ಲಿಕರಣದ ಮಾರ್ಗವನ್ನು ಇಲಿನಾಯ್ಸ ವಿವಿ ಸಂಶೋಧಕರು ಕಂಡುಹಿಡಿದಿದ್ದಾರೆ.

ಶುದ್ಧೀಕರಣ ಹೇಗೆ?: ಎಲೆಕ್ಟ್ರಿಕ್‌ ಕುಕ್ಕರ್‌ಗೆ ನೀರನ್ನು° ಸೇರಿ ಸದೆ, ಶಾಖವು ಶುಷ್ಕವಾಗಿರುವಂತೆ ನೋಡಿಕೊಳ್ಳ ಬೇಕು. ಕುಕ್ಕರ್‌ನಲ್ಲಿ ಉಷ್ಣತೆ 100 ಡಿಗ್ರಿ ಸೆಲ್ಸಿಯಸ್‌ ಇರುವಂತೆ, 50 ನಿಮಿಷ ತಾಪಮಾನ ಕಾಯ್ದುಕೊಳ್ಳಬೇಕು. ಏಕಕಾಲಕ್ಕೆ ಹಲವು ಎನ್‌-95 ಮಾಸ್ಕ್ಗಳನ್ನು ಈ ವಿಧಾನದಿಂದ ಶುದ್ಧೀಕರಿಸಬಹುದಾಗಿದೆ. ಕೊರೊನಾ ಸೇರಿದಂತೆ 4 ರೀತಿಯ ವೈರಸ್‌ಗಳನ್ನು ಈ ವಿಧಾನದಲ್ಲಿ ಕೊಲ್ಲಬಹುದು ಎನ್ನುತ್ತಾರೆ ತಜ್ಞರು.

Advertisement

Udayavani is now on Telegram. Click here to join our channel and stay updated with the latest news.

Next