ಹಾಸನ: ಮಾಧ್ಯಮಗಳು ಪ್ರಾಮಾಣಿಕವಾಗಿ ಮತ್ತು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಹೇಳಿದರು. ನಗರದ ಕರೀಗೌಡ ಕಾಲೋನಿಯಲ್ಲಿರುವ ಖಾಸಗಿ ಟಿವಿ ಕಚೇರಿಗೆ ಭೇಟಿ ನೀಡಿ ಮಾತನಾಡಿದ ಅವರು, ಸಂವಿ ಧಾನದ ನಾಲ್ಕನೇ ಅಂಗ ಎಂದೇ ಕರೆ ಯಲ್ಪಡುವ ಮಾಧ್ಯಮ ಕ್ಷೇತ್ರ ಇಂದು ಹಣಕ್ಕಾಗಿ ವೃತ್ತಿಧರ್ಮವನ್ನು ಕಡೆಗಣಿಸುತ್ತಿದೆ.
ನಮ್ಮ ಹಾಸನ ಟಿವಿ ತಂಡವು ಪ್ರಾಮಾಣಿಕವಾಗಿ ಮತ್ತು ನಿಷ್ಪಕ್ಷವಾಗಿರಲಿ ಎಂದು ಹಾರೈಸಿದರು. ನಿವೃತ್ತ ಅರಣ್ಯಾಧಿಕಾರಿ ಲಕ್ಷ್ಮೀನಾರಾ ಯಣ ಮಾತನಾಡಿ, ಸಂತೋಷ್ ಹೆಗಡೆ ಅವರು ರಾಷ್ಟ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.
ಕರ್ನಾಟಕ ಲೋಕಾಯುಕ್ತದ ಘನತೆಯನ್ನು ರಾಷ್ಟ್ರಕ್ಕೆ ಪರಿಚಯಿಸಿದ್ದಾರೆ ಎಂದು ಶ್ಲಾ ಸಿದರು. ಹಿರಿಯ ಪತ್ರಕರ್ತ ಆರ್.ಪಿ.ವೆಂಕಟೇಶ್‌ಮೂರ್ತಿ ಮಾತನಾಡಿ, ಸಂತೋಷ್ ಹೆಗಡೆಯವರು ರಾಜ್ಯದಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆಯನ್ನು ತಡೆದು ಗಣಿ- ಧಣಿಗಳ ಪಾಲಿಗೆ ಸಿಂಹಸ್ವಪ್ನರಾಗಿದ್ದರು.
ಇದನ್ನೂ ಓದಿ;- ಆರ್‌ಎಸ್‌ಎಸ್ ವಿರೋಧಿಗಳು ಸಮಾಜಕ್ಕೆ ಹೊರೆ
ಇಂದು ಸಮಾಜದಲ್ಲಿ ಕೆಟ್ಟವರನ್ನು ಬಿಂಬಿ ಸುವ ಕೆಟ್ಟ ಪರಿಸ್ಥಿತಿ ಎದುರಾಗಿದೆ, ಕಾಡುಗಳ್ಳ ವೀರಪ್ಪನ್ ಎಲ್ಲರಿಗೂ ಗೊತ್ತು, ಆದರೆ ಸಾವಿರಾರು ಕೆರೆಗಳನ್ನು ನಿರ್ಮಿಸಿ ಪರಿಸರ ಸಂಕ್ಷಣೆಗೆ ಹೋರಾಟ ನಡೆಸುವುವವರ ಬಗ್ಗೆ ಜನರಿಗೆ ತಿಳಿದಿಲ್ಲ. ಇದಕ್ಕೆ ಮಾಧ್ಯಮಗಳ ನಕಾರಾತ್ಮಕ ಧೋರಣೆಯೇ ಕಾರಣ ಎಂದು ವಿಷಾದಿಸಿದರು. ಈ ಸಂದರ್ಭದಲ್ಲಿ ಹಾಸನ ಟಿವಿಯ ಮುಖಂಡ ತೌಫಿಕ್ ಅಹ್ಮದ್, ಮಲ್ನಾಡ್ ಮೆಹಬೂಬ್, ಜಿಲ್ಲಾ ಕೇಬಲ್ ಆಪರೇಟರ್‌ಗಳ ಸಂಘದ ಅಧ್ಯಕ್ಷ ಚಂದ್ರಶೇಖರ್, ಹಿರಿಯಾಳು ಚಂದ್ರೇ ಗೌಡ ನಗರಸಭೆ ಅಧ್ಯಕ್ಷ ಮೋಹನ್ ಕುಮಾರ್, ಪತ್ರಕರ್ತ ಪ್ರಸನ್ನ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.