Advertisement

ಕೊಳ್ಳೇಗಾಲದಲ್ಲಿ ಪ್ರಾಬಲ್ಯ ತೋರಿದ ಎನ್.ಮಹೇಶ್ : ಬಿಜೆಪಿ ಜಯಭೇರಿ

03:13 PM Oct 31, 2022 | Team Udayavani |

ಕೊಳ್ಳೇಗಾಲ: ನಗರ ಸಭೆಯ ಏಳು ವಾರ್ಡುಗಳಿಗೆ ನಡೆದ ಉಪ ಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಬಿಜೆಪಿ ಏಳು ವಾರ್ಡುಗಳ ಪೈಕಿ ಆರು ಸ್ಥಾನಗಳಲ್ಲಿ ಗೆದ್ದು ಬೀಗಿದೆ. ಕ್ಷೇತ್ರದ ಶಾಸಕ, ಮಾಜಿ ಸಚಿವ ಎನ್.ಮಹೇಶ್ ಪ್ರಾಬಲ್ಯ ತೋರುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಬಿಜೆಪಿ ಅಭ್ಯರ್ಥಿಗಳಾದ ಪ್ರಕಾಶ್, ಮಾನಸ, ರಾಮಕೃಷ್ಣ, ನಾಸಿರ್ ಷರೀಫ್, ಪವಿತ್ರಾ, ನಾಗಸುಂದ್ರಮ್ಮ ಜಯಭೇರಿ ಬಾರಿಸಿದ್ದಾರೆ.

ಗೆಲುವಿನ ಬಳಿಕ ಬಿಜೆಪಿ ಸದಸ್ಯರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.ಶಾಸಕ ಎನ್.ಮಹೇಶ್ ಮಾತನಾಡಿ ಎಲ್ಲಾ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.  ಕಾಂಗ್ರೆಸ್ ಒಂದು ಸ್ಥಾನ ಮಾತ್ರ ಗಳಿಸಿದ್ದು, 2ನೇ ವಾರ್ಡ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭಾಗ್ಯ ಮಾತ್ರ ಜಯ ಸಾಧಿಸಿದ್ದಾರೆ.

ಶಾಸಕ ಎನ್.ಮಹೇಶ್ ಅವರನ್ನು ಬೆಂಬಲಿಸಿದ್ದ 7 ಮಂದಿ ನಗರಸಭೆ ಸದಸ್ಯರು ಅನರ್ಹಗೊಂಡಿದ್ದರು. ಎನ್.ಮಹೇಶ್ ಬಿಎಸ್‌ಪಿಯಿಂದ ಉಚ್ಚಾಟನೆಯ ಬಳಿಕ ಬಿಜೆಪಿ ಸೇರಿದ್ದರು. ಈ ವೇಳೆ ಬಿಎಸ್‌ಪಿ ವಿಪ್ ಉಲ್ಲಂಘಿಸಿ ಮತ ನೀಡಿದ ಹಿನ್ನೆಲೆಯಲ್ಲಿ ನಗರಸಭಾಧ್ಯಕ್ಷರ ಚುನಾವಣೆಯಲ್ಲಿ 7 ಮಂದಿ ಅನರ್ಹಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next