ದಾವಣಗೆರೆ: ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್ ನಿಧನಕ್ಕೆ ಜಿಲ್ಲಾ ಕಾಂಗ್ರೆಸ್, ಯುವ ಇಂಟಕ್ ಸೇರಿದಂತೆ ವಿವಿಧೆಡೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಗಿದೆ.
ಕಾಂಗ್ರೆಸ್….
ಧರ್ಮಸಿಂಗ್ ಸತತ 7 ಬಾರಿ ಶಾಸಕರಾಗಿ ಇತಿಹಾಸ ನಿರ್ಮಿಸಿ, ಸಚಿವರಾಗಿಯೂ ಉತ್ತಮ ಸೇವೆ ಮಾಡಿದ್ದರ ಫಲವಾಗಿ 2004ರಲ್ಲಿ ಮುಖ್ಯಮಂತ್ರಿ ಹುದ್ದೆ ಅವರನ್ನು ಹುಡುಕಿಕೊಂಡು ಬಂದಿತು. ಸಂಸದರೂ ಆಗಿ ಸೇವೆ ಸಲ್ಲಿಸಿದ್ದ ಧರ್ಮಸಿಂಗ್ ಅವರಂತ ಉತ್ತಮ ಮಾರ್ಗದರ್ಶಕರನ್ನು ಪಕ್ಷ ಕಳೆದುಕೊಂಡಂತಾಗಿದೆ ಎಂದು ಕಾಂಗ್ರೆಸ್‌ನ ಜಿಲ್ಲಾ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಶೋಕಿಸಿದ್ದಾರೆ. ಶುಕ್ರವಾರ ಬೆಳಿಗ್ಗೆ 9.30ಕ್ಕೆ ನಿಜಲಿಂಗಪ್ಪ ಬಡಾವಣೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಂತಾಪ ಸೂಚಕ ಸಭೆ
ನಡೆಯಲಿದೆ.
ಯುವ ಇಂಟಕ್: ಭಾರತ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್(ಇಂಟಕ್) ಯುವ ಘಟಕದ ಪದಾಧಿಕಾರಿಗಳು ಶ್ರೀ ಜಯದೇವ ವೃತ್ತದಲ್ಲಿ ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್ ಭಾವಚಿತ್ರಕ್ಕೆ ಪುಷ್ಪಾರ್ಚನೆ, ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ನಗರಪಾಲಿಕೆ ಮಾಜಿ ಸದಸ್ಯ ಕೆ.ಜಿ. ಶಿವಕುಮಾರ್, ಶುಭಮಂಗಳ, ನೌಷಿನ್ ತಾಜ್, ಲತಾ, ಜ್ಯೋತಿ, ಇಮ್ರಾನ್ ಜಾಲಿಕಟ್ಟೆ, ಜಬೀವುಲ್ಲಾಖಾನ್,ಪದ್ಮಾವತಿ, ಬಸವರಾಜ್, ಮೋಹನ್, ಶಾಹಿದ್, ಶಬೀºರ್ ಅಲಿ, ದಾದಾಪೀರ್, ಸಾದಿಕ್, ನೂರುಲ್ಲಾ, ಜೀವನ್ ಇತರರು ಇದ್ದರು.
ದಕ್ಷಿಣ ಯುವ ಕಾಂಗ್ರೆಸ್: ದಾವಣಗೆರೆ ದಕ್ಷಿಣ ಯುವ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ನಡೆದ ಸಂತಾಪ ಸೂಚಕ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಭಾರತರತ್ನ, ಮಾಜಿ ರಾಷ್ಟ್ರಪತಿ ಡಾ| ಎ.ಪಿ.ಜೆ. ಅಬ್ದುಲ್ ಕಲಾಂರವರ 2ನೇ ಪುಣ್ಯಸ್ಮರಣೆ ಅಂಗವಾಗಿ ಅವರಿಗೂ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.