Advertisement

ಚೊಚ್ಚಲ ಅಂಬಾರಿ ಹೊರಲು ನಾನು ರೆಡಿ: ಅಭಿಮನ್ಯು

12:23 PM Oct 01, 2020 | sudhir |

ಹುಣಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಯಲ್ಲಿ ಪ್ರಪ್ರಥಮ ಬಾರಿ ಅಂಬಾರಿ ಹೊರಲು ಸಜ್ಜಾಗಿರುವ ಆಪರೇಷನ್‌ ಕಿಂಗ್‌ ಅಭಿಮನ್ಯು ನಾಗರಹೊಳೆ ಉದ್ಯಾನದ ಮತ್ತಿಗೋಡುಆನೆ ಶಿಬಿರದಲ್ಲಿ ವಿಶೇಷ ಆರೈಕೆ ಪಡೆದು ವೀರನಹೊಸಹಳ್ಳಿ ಹೆಬ್ಟಾಗಿಲಿಗೆ ಬಂದಿಳಿದಿದ್ದಾನೆ.

Advertisement

ಕೊರೊನಾ ಹಿನ್ನೆಯಲ್ಲಿಈಬಾರಿ ದಸರಾವನ್ನು ಸರಳವಾಗಿ ಆಚರಿಸಲು ಸರ್ಕಾರ ತೀರ್ಮಾನಿಸಿದ್ದು, ವಯಸ್ಸಿನ ಕಾರಣಕ್ಕಾಗಿ ಬಳ್ಳೆ ಆನೆ ಶಿಬಿರದ ಅರ್ಜುನನ ಬದಲಿಗೆ ಪ್ರತಿ ದಸರಾದಲ್ಲಿ ನೌಪತ್‌ ಹಾಗೂ ಗಾಡಿ ಆನೆಯಾಗಿದ್ದ 54 ವರ್ಷದ ಅಭಿಮನ್ಯುವನ್ನು ಆಯ್ಕೆ ಮಾಡಲಾಗಿದೆ. ಈ ಮೂಲಕ ಅಂಬಾರಿ ಹೊರುವ ಜವಾಬ್ದಾರಿ ಹೆಗಲಿಗೇರಿಸಿದ್ದು, ಕೋವಿಡ್‌-19 ಭೀತಿಯಿಂದಾಗಿ ನಿತ್ಯ ಶಿಬಿರದಲ್ಲೇ ಅಂಬಾರಿ ಹೊರುವ ತಾಲೀಮು ನಡೆಸಿದ್ದಾನೆ.

ನಿತ್ಯ ಎಣ್ಣೆಮಜ್ಜನ: ಶಿಬಿರದ ಸನಿಹವೇ ಇರುವ ಕಂಠಾಪುರ ಕೆರೆಯಲ್ಲಿ ಅಭಿಮನ್ಯುಗೆ ನಿತ್ಯ ಬೆಳಗ್ಗೆ-ಸಂಜೆ ಸ್ನಾನ ಮಾಡಿಸಲಾಗುತ್ತಿದೆ. ಮಾವುತ ವಸಂತ, ಕವಾಡಿ ರಾಜುವಿನಿಂದ ಮೈಯುಜ್ಜಿಸಿಕೊಂಡು ಸ್ನಾನ ಮಾಡಿಸಿಕೊಳ್ಳುವ ಅಭಿಮನ್ಯುವಿಗೆ ಶಿಬಿರದಲ್ಲಿ ಪ್ರತಿದಿನ ಎಣ್ಣೆ ಮಜ್ಜನ ನಡೆ‌ಸಲಾಗುತ್ತಿದೆ. ಹಣೆಗೆ ಹರಳೆಣ್ಣೆ ಮತ್ತು ಕಾಲುಗಳಿಗೆ ಬೇವಿನ ಎಣ್ಣೆ ಹಚ್ಚಿ ಅಭ್ಯಂಜನ ನಡೆಸಿ ಅಣಿಗೊಳಿಸಲಾಗುತ್ತಿದೆ. ನಂತರ ಕೆಲ ಹೊತ್ತು ಶಿಬಿರದ ಆವರಣದಲ್ಲೇ ತಾಲೀಮು ನಡೆಸಲಾಗಿದೆ.

ಶಿಬಿರದಲ್ಲಿ ಆನೆಗಳಿಗೆ ಭತ್ತದ ಹುಲ್ಲಿನೊಳಗೆ ಭತ್ತ ಕಟ್ಟಿ ನೀಡುತ್ತಿದ್ದ ಕುಸರೆ ಪದ್ಧತಿಯನ್ನು ಅರಣ್ಯಇಲಾಖೆ ಕೈ ಬಿಟ್ಟಿದೆ. ಕುಸಲಕ್ಕಿ, ಹುರುಳಿಕಾಳು, ಹೆಸರುಕಾಳು, ಉದ್ದು, ರಾಗಿ ಹುಡಿ ಮತ್ತಿತರ ಕಾಳುಗಳನ್ನು ಬೇಯಿಸಿ ಮುದ್ದೆಮಾಡಿ ನೀಡುವುದಲ್ಲದೇ ಬೆಲ್ಲ ಮತ್ತು ತೆಂಗಿನಕಾಯಿಯನ್ನು ಪ್ರತ್ಯೇಕವಾಗಿ ನೀಡುವ ಮೂಲಕ ಅಭಿಮನ್ಯುವನ್ನು ಅಣಿಗೊಳಿಸಲಾಗುತ್ತಿದೆ. ಪಶುವೈದ್ಯ ಡಾ.ಮುಜೀಬ್‌ ರೆಹಮಾನ್‌ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ಆರ್‌ಎಫ್‌ಒ ಕಿರಣ್‌ಕುಮಾರ್‌ ಕಣ್ಗಾವಲಿನಲ್ಲಿ ಅಭಿಮನ್ಯು ಆರೈಕೆ ನಡೆಸಲಾಗುತ್ತಿದೆ.

ಅಭಿಮನ್ಯುಜೊತೆದುಬಾರೆಆನೆಶಿಬಿರದಪಟ್ಟದ ಆನೆ ವಿಕ್ರಂ (47), ಸಾಕಾನೆಗಳಾದ ವಿಜಯ (61), ಕಾವೇರಿ (42)ನೀರಾನೆಗೋಪಿ (38) ಸೇರಿದಂತೆನಾಲ್ಕುಆನೆಗಳು ಪಾಲ್ಗೊಳ್ಳುತ್ತಿದ್ದು, ದುಬಾರೆ ಶಿಬಿರದಲ್ಲಿ ಆರೈಕೆ ನಡೆಯುತ್ತಿದೆ.

Advertisement

ವೀರನಹೊಸಳ್ಳಿ ಗೇಟ್‌ನಲ್ಲಿ ಇಂದು ಗಜಪೂಜೆ: ಈ ಬಾರಿ ಗಜಪಯಣ ರದ್ದಾಗಿರುವುದರಿಂದ ಸಾಂಪ್ರದಾ ಯಿಕವಾಗಿ ಆ.1ರಂದು ಗುರುವಾರ ಬೆಳಗ್ಗೆ 10 ರಿಂದ 11ರೊಳಗೆ ಉದ್ಯಾನದ ವೀರನಹೊಸಳ್ಳಿ ಗೇಟ್‌ ಬಳಿಯಿಂದ ಅಭಿಮನ್ಯು ಸೇರಿದಂತೆ ವಿಕ್ರಂ, ವಿಜಯ, ಗೋಪಿ ಮತ್ತು ಕಾವೇರಿ ಆನೆಗಳಿಗೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು, ಸ್ಥಳೀಯರ ಸಮ್ಮುಖದಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಅಲ್ಲಿಂದ ಲಾರಿಗಳ ಮೂಲಕ ಮೈಸೂರಿನಅರಣ್ಯಭವನಕ್ಕೆಕರೆತರಲಾಗುವುದು.

ಆ.2ರಂದು ಶುಕ್ರವಾರ ಬೆಳಗ್ಗೆ ಪೂಜೆ ಬಳಿಕ ಲಾರಿಯಲ್ಲಿ ಜಯಮಾರ್ತಾಂಡ ದ್ವಾರದ ಮೂಲಕ ಗಜಪಡೆ ಮಧ್ಯಾಹ್ನ 12.18ರಿಂದ 12.40ರವರೆಗೆ ಧನುರ್‌ ಲಗ್ನದಲ್ಲಿ ಸಂಪ್ರದಾಯದಂತೆ ಆರಮನೆ ಪ್ರವೇಶಿಸಲಿವೆ.

ಶ್ರೀರಂಗಪಟ್ಟಣದಲ್ಲಿ ಅಂಬಾರಿಹೊತ್ತಿದ್ದ ಶ್ರೀರಂಗಪಟ್ಟಣದ ದಸರಾದಲ್ಲಿ ಅಭಿಮನ್ಯುವಿಗೆ ಅಂಬಾರಿ ಹೊತ್ತಿರುವ ಅನುಭವ ಇದೆ. ಈ ಬಾರಿ ನಾಡಹಬ್ಬಮೈಸೂರುದಸರಾದಲ್ಲಿಅಭಿಮನ್ಯುವಿಗೆ ಅಂಬಾರಿ ಹೊರುವ ಅವಕಾಶ ಸಿಕ್ಕಿರುವುದು ನಮ್ಮ ಪುಣ್ಯ. ಎಂಥ ಕಾರ್ಯಾಚರಣೆಯಲ್ಲೂ ಹಿಂಜರಿಯುವುದಿಲ್ಲ. ಗುರುವಾರ ಕವಾಡಿ ರಾಜುವಿನೊಂದಿಗೆ ಗಣಪಯಣದ ಮೂಲಕ ನಾಗರಹೊಳೆ ಹೆಬ್ಟಾಗಿಲಿನಿಂದ ಉದ್ಯಾನನಗರಕ್ಕೆ ಪಯಣ ಬೆಳೆಸುತ್ತಿದ್ದೇವೆ ಎಂದು ಅಭಿಮನ್ಯ ಮಾವುತ ವಸಂತ ತಿಳಿಸಿದ್ದಾರೆ.

ಆಪರೇಷನ್‌ ಕಿಂಗ್‌ ಅಭಿಮನ್ಯು
ನಾಗರಹೊಳೆ ಉದ್ಯಾನದ ಹೆಬ್ಬಳ್ಳದಲ್ಲಿ 1970ರಲ್ಲಿ ಸೆರೆ ಸಿಕ್ಕಿದ್ದ ಅಭಿಮನ್ಯು ಮೊದಲಿಗೆ ಮೂರ್ಕಲ್‌ ಆನೆ ಶಿಬಿರದಲ್ಲಿದ್ದ. ಅಲ್ಲಿಂದ 2012ರಲ್ಲಿ ಮತ್ತಿಗೋಡು ಶಿಬರಕ್ಕೆ ಸ್ಥಳಾಂತರಿಸಲಾಯಿತು.ಮೊದಲಿಗೆಸಣ್ಣಪ್ಪಮಾವುತನಾಗಿದ್ದು, ಈಗ ಆತನ ಪುತ್ರ ವಸಂತನೇ ಇದೀಗ ಮಾವುತನಾಗಿರುವುದು ವಿಶೇಷ. ಈ ಅಭಿಮನ್ಯು ಹೆಸರಿಗೆ ತಕ್ಕಂತೆ ಪುಂಡಾಟ ನಡೆಸುವ ಆನೆಗಳ ಎಡೆಮುರಿ ಕಟ್ಟಿ ಮತ್ತಿಗೋಡಿಗೆ ಕರೆತರುವಲ್ಲಿ ನಿಪುಣ. ಮಹಾರಾಷ್ಟ್ರ, ಮಧ್ಯಪ್ರದೇಶ, ಕನಕಪುರ, ಹಾಸನ, ಬಂಡೀಪುರ, ಗೋಪಿನಾಥಂ ಮತ್ತಿತರ ಕಡೆಗಳಲ್ಲಿ ತನ್ನ ನೈಪುಣ್ಯತೆಯಿಂದಲೇ ಪುಂಡಾನೆಗಳನ್ನು, ನಾಡಿಗೆ ಬರುವ ಕಾಡಾನೆಗಳನ್ನು ಹಿಮ್ಮೆಟ್ಟಿಸುವಲ್ಲಿ ಈ ಅಭಿಮನ್ಯು ಮಹತ್ವದ ಪಾತ್ರ ವಹಿಸಿದ್ದಾನೆ.ಕೇರಳ ಹಾಗೂ ಇತ್ತೀಚೆಗೆ ನೇರಳಕುಪ್ಪೆಯಲ್ಲಿ ಆದಿವಾಸಿಯೊಬ್ಬನನ್ನು ಕೊಂದು ತಿಂದಿದ್ದ ಹುಲಿಯನ್ನು ಕಾರ್ಯಾಚರಣೆಯಲ್ಲೂ ಪತ್ತೆ ಹಚ್ಚುವಲ್ಲಿ ಯಶಸ್ವಿಯಗಿದ್ದ. ಈ ಕಾರಣಕ್ಕಾಗಿಯೇ ಈ
ಅಭಿಮನ್ಯುಗೆ ಕೂಬಿಂಗ್‌ ಎಕ್ಸ್‌ಪರ್ಟ್‌, ಆಪರೇಷನ್‌ ಕಿಂಗ್‌ ಎಂಬ ಹೆಗ್ಗಳಿಕೆ ದೊರೆತಿದೆ. ಇದೀಗ ಅಂಬಾರಿ ಹೊರುವ ಅವಕಾಶ ಸಿಕ್ಕಿರುವುದು ಮತ್ತಿಗೋಡು ವಲಯಕ್ಕೆ ಹಿರಿಮೆಯಾಗಿದೆ.

– ಸಂಪತ್ ಕುಮಾರ್

Advertisement

Udayavani is now on Telegram. Click here to join our channel and stay updated with the latest news.

Next