Advertisement
ಕಳೆದ ಮೇಯರ್ ಚುನಾವಣೆಯಲ್ಲಿ ಅನಿರೀಕ್ಷಿತ ಬೆಳವಣಿಗೆಯಿಂದ ಮೇಯರ್ ಸ್ಥಾನದಿಂದ ವಂಚಿತವಾಗಿ ಕಂಗಾಲಾಗಿದ್ದ ಬಿಜೆಪಿಗೆ ಈಗ ಮತ್ತೊಂದು ಅವಕಾಶ ಲಭಿಸಿದ್ದು, ಹೇಗಾದರು ಮಾಡಿ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ಮೇಯರ್ ಸ್ಥಾನಕ್ಕೇರಲು ಇನ್ನಿಲ್ಲದ ಕಸರತ್ತು ಆರಂಭಿಸಿದೆ.
Related Articles
Advertisement
ನಂತರದ ಬೆಳವಣಿಗೆಯಲ್ಲಿ ರುಕ್ಮಿಣಿ ಮಾದೇಗೌಡರ ಸದಸ್ಯತ್ವ ರದ್ದಾದ ಕಾರಣ ಮೇಯರ್ ಸ್ಥಾನವನ್ನು ಕಾಂಗ್ರೆಸ್‌ಗೆ ನೀಡಲು ಜೆಡಿಎಸ್ ಒಪ್ಪಿದ್ದರಿಂದ ಹಿರಿಯ ಸದಸ್ಯೆ ಶಾಂತಕುಮಾರಿ ಅವರನ್ನು ಅಭ್ಯರ್ಥಿಯನ್ನಾಗಿಸಲು ಕಾಂಗ್ರೆಸ್‌ನಲ್ಲಿ ನಿರ್ಧಾರವಾಗಿತ್ತು. ಆದರೆ ಅವರದೇ ಪಕ್ಷದ ಸದಸ್ಯ ನ್ಯಾಯಾಲಯ ಮೆಟ್ಟಿಲೇರಿದ್ದರಿಂದ ಚುನಾವಣೆಗೆ ತಡೆಬಿದ್ದಿತು. ಇದೀಗ ಮತ್ತೆ ಚುನಾವಣಾ ದಿನಾಂಕ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಪಾಳಯದಲ್ಲಿ ಅಧಿಕಾರಕ್ಕೆ ತಂತ್ರ ರೂಪಿಸಲಾಗುತ್ತಿದೆ.
ಪಾಲಿಕೆಯಲ್ಲಿ ಪಕ್ಷಗಳ ಬಲಾಬಲಶಾಸಕ ಜಿ.ಟಿ.ದೇವೇಗೌಡರು, ವಿಧಾನಪರಿಷತ್ ಸದಸ್ಯರಾದ ಸಂದೇಶ್ ನಾಗರಾಜ್, ಮರಿತಿಬ್ಬೇಗೌಡ,ಕೆ.ಟಿ. ಶ್ರೀಕಂಠೇಗೌಡ ಹಾಗೂ 16 ಮಂದಿ ಪಾಲಿಕೆ ಸದಸ್ಯರು ಸೇರಿ ಜೆಡಿಎಸ್‌ನಲ್ಲಿ 21 ಹಾಗೂ ಶಾಸಕ ತನ್ವೀರ್ ಸೇಠ್ ಹಾಗೂ 19 ಕಾರ್ಪೊರೇಟರ್‌ಗಳು ಸೇರಿ ಕಾಂಗ್ರೆಸ್ ನಲ್ಲಿ 20 ಮತ್ತು ಸಂಸದ ಪ್ರತಾಪ್‌ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಎಲ್. ನಾಗೇಂದ್ರ ಹಾಗೂ 23 ಕಾರ್ಪೊರೇಟರ್‌ಗಳು ಸೇರಿ ಬಿಜೆಪಿಯಲ್ಲಿ26 ಮತ ಬಲವಿದೆ. ಜೊತೆಗೆ ನಾಲ್ವರು ಪಕ್ಷೇತರರು, ಓರ್ವ ಬಿಎಸ್ಪಿ ಸದಸ್ಯೆ ಸೇರಿ ಒಟ್ಟು72 ಮತದಾರರಿದ್ದಾರೆ. 4 ತಿಂಗಳು ಬಿಜೆಪಿಗೆ, 2 ವರ್ಷ ಜೆಡಿಎಸ್‌ಗೆ ಮೇಯರ್ ಸ್ಥಾನ?
ಹಿಂದಿನ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ವಿಫಲವಾಗಿದ್ದ ಸಚಿವ ಎಸ್ .ಟಿ.ಸೋಮಶೇಖರ್ ಈ ಬಾರಿ ಯಶಸ್ವಿ ಯಾಗುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದಾರೆ. ಮೇಯರ್ ಅವಧಿ ಕೇವಲ ನಾಲ್ಕು ತಿಂಗಳು ಮಾತ್ರ ಬಾಕಿ ಉಳಿದಿದ್ದು, ಈ ಅವಧಿಗೆ ಮೇಯರ್ ಆಗಲು ಜೆಡಿಎಸ್ ಆಸಕ್ತಿ ತೋರದೆ ಇರುವುದನ್ನೇ ಬಂಡವಾಳ ಮಾಡಿಕೊಂಡಿರುವ ಬಿಜೆಪಿ ಕೊನೆಯ ಎರಡು ವರ್ಷ ಮೇಯರ್ ಅವಧಿಯನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟು, ಈಗಿರುವ ನಾಲ್ಕು ತಿಂಗಳಕಾಲವಕಾಶದಲ್ಲಿ ಬಿಜೆಪಿ ಮೇಯರ್ ಸ್ಥಾನ ಬಿಟ್ಟುಕೊಡುವಂತೆ ಬಿಜೆಪಿ ನಾಯಕರು ಜೆಡಿಎಸ್ ಜೊತೆಗೆ ಮಾತಿಗಿಳಿದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿಗೆ ಮೇಯರ್ ಸ್ಥಾನ ಬಿಟ್ಟುಕೊಟ್ಟರೆ, ನಾವು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುತ್ತೇವೆ. ಈ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷರು, ಎಚ್.ಡಿ.ಕುಮಾರಸ್ವಾಮಿ ಜತೆ ಮಾತುಕತೆ ನಡೆಸುವ ಸಾಧ್ಯತೆ ಇದೆ. ಅವರು ಮಾತನಾಡಿದ ನಂತರ ಜೆಡಿಎಸ್ ಸ್ಥಳೀಯ ನಾಯಕರು ಹಾಗೂ ಶಾಸಕರ ಜೊತೆಗೆ ನಾವು ಚರ್ಚಿಸುತ್ತೇವೆ. 23 ಸ್ಥಾನಗಳೊಂದಿಗೆ ಅತಿ ಹೆಚ್ಚು ಸದಸ್ಯರು ನಮ್ಮ ಪಕ್ಷದಲ್ಲಿ ಇರುವಕಾರಣ ನಾವು ಮೇಯರ್ ಸ್ಥಾನಕೇಳುತ್ತಿದ್ದೇವೆ.ಕಳೆದ ಬಾರಿ ಮೇಯರ್ ಆಕಾಂಕ್ಷಿಯಾಗಿದ್ದ ಸುನಂದಾರನ್ನೇಕಣಕ್ಕಿಳಿಸುತ್ತೇವೆ. ಪ್ರಮೀಳಾ ಸಹ ಆಕಾಂಕ್ಷಿಯಾಗಿದ್ದಾರೆ.
-ಟಿ.ಎಸ್. ಶ್ರೀವತ್ಸ, ಬಿಜೆಪಿ ನಗರಾಧ್ಯಕ್ಷ. -ಸತೀಶ್ ದೇಪುರ