ಸೋಂಕು ತಗುಲಿರುವುದು ಧೃಡಪಟ್ಟಿದ್ದು, ಪ್ರಾಣಿಗಳು ಮತ್ತು ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಜನವರಿ 4 ರಿಂದ ಫೆಬ್ರವರಿ 2ರವರೆಗೆ ಮೃಗಾಲಯವನ್ನು ಬಂದ್ ಮಾಡಲು ಆಡಳಿತ ಮಂಡಳಿ ನಿರ್ಧರಿಸಿದೆ.
Advertisement
ಈ ಸಂಬಂಧ ಮಂಗಳವಾರ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಡಿಸೆಂಬರ್ 28ರಂದು ಮೃಗಾಲಯದಕೊಳದಲ್ಲಿ ಒಂದು ಸ್ಪಾಟ್ ಬಿಲ್ಡ್ ಫೆಲಿಕಾನ್, ಮೂರು ಗ್ರೇಲಾಗ್ ಗೂಸ್ ಸಾವನ್ನಪ್ಪಿದ್ದವು. ಬಳಿಕ ಬೆಂಗಳೂರಿನ ಪ್ರಾಣಿಗಳ ಆರೋಗ್ಯ ಮತ್ತು ಜಾನುವಾರು ಜೈವಿಕ ಸಂಸ್ಥೆಗೆ ಮೃತ ಪಕ್ಷಿಗಳ ಅಂಗಾಗ ಕಳುಹಿಸಿ ವರದಿ ಕೇಳಲಾಗಿತ್ತು.
ಜ.3ರಂದು ರಾಜ್ಯ ಪಶುಸಂಗೋಪನಾ ಇಲಾಖೆ ಆಯುಕ್ತರ ಮೂಲಕ ಮೃಗಾಲಯಕ್ಕೆ ಕಳುಹಿಸಲಾಗಿರುವ ವರದಿಯಲ್ಲಿ ಮೃಗಾಲಯದ ಪಕ್ಷಿಗಳ ಸಾವಿಗೆ ಅವೈನ್ ಇನ್‌ಫೂÉಯೆಂಜಾ(ಎಚ್ 5ಎನ್8) ಸೋಂಕು ಕಾರಣ ಎಂಬುದು
ಧೃಡಪಟ್ಟಿದ್ದು, ಮೃಗಾಲಯವನ್ನು ಸಾರ್ವಜನಿಕ ವೀಕ್ಷಣೆಗೆ ಬಂದ್ ಮಾಡಿ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಮುಂದಾಗಿದ್ದೇವೆ. ಮೃಗಾಲಯದ ಎಲ್ಲ ಕೊಳಗಳಲ್ಲಿ ಸೋಡಿಯಂ ಹೈಪೋಕ್ಲೋರೈಡ್ ಸಿಂಪಡಿಸಲಾಗುತ್ತಿದೆ. ಜತೆಗೆ ಮೃಗಾಲಯದ ಸಿಬ್ಬಂದಿಯ ಆರೋಗ್ಯ ತಪಾಸಣೆಯನ್ನೂ ಮಾಡಲಾಗುತ್ತಿದೆ ಎಂದು ಶ್ರೀ ಚಾಮರಾಜೇಂದ್ರ
ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಕೆ.ಕಮಲಾ ತಿಳಿಸಿದ್ದಾರೆ.