Advertisement

ಘಟಿಕೋತ್ಸವಕ್ಕೆ ಶತಕದ ಸಂಭ್ರಮ

03:39 PM Oct 17, 2020 | Suhan S |

ಮೈಸೂರು: ರಾಜ್ಯದ ಮೊದಲ ವಿಶ್ವವಿದ್ಯಾಲಯ ಮೈಸೂರು ವಿವಿಯ ಶತಮಾನೋತ್ಸವದ ಘಟಿ ಕೋತ್ಸವವು ಅ.19ರಂದು ನಡೆಯಲಿದ್ದು, ಈ  ಬಾರಿಯ ಗೌರವ ಡಾಕ್ಟರೆಟ್‌ ಪದವಿಯನ್ನು ಇನ್ಫೋಸಿಸ್‌ ಪ್ರತಿಷ್ಠಾನದ ಸಂಸ್ಥಾಪಕಿ ಸುಧಾ ಮೂರ್ತಿ ಅವರಿಗೆ ಪ್ರದಾನ ಮಾಡಲಾಗುತ್ತಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತಕುಮಾರ್‌ ತಿಳಿಸಿದರು.

Advertisement

ಮೈಸೂರು ವಿವಿಯ ಕ್ರಾಫ‌ರ್ಡ್‌ ಭವನದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮವಾರ ಮೈಸೂರುವಿಶ್ವವಿದ್ಯಾಲಯದ 100ನೇ ಘಟಿಕೋತ್ಸವಜರುಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಘಟಿಕೋತ್ಸವ ಉದ್ದೇಶಿಸಿ 11.15ರಿಂದ 11.40ರವರೆಗೆ ಆನ್‌ಲೈನ್‌ ಮೂಲಕ ಭಾಷಣ ಮಾಡಲಿ¨ªಾರೆ ಎಂದು ಮಾಹಿತಿ ನೀಡಿದರು.

ಆನ್‌ಲೈನ್‌ ಕಾರ್ಯಕ್ರಮ: 100ನೇ ಘಟಿಕೋತ್ಸವ ಮಾರ್ಚ್‌ನಲ್ಲಿ ನಡೆಸಲು ಉದ್ದೇಶಿಸಲಾಗಿತ್ತು.ಆದರೆ ಕೋವಿಡ್‌-19 ಕಾರಣದಿಂದ ಅ.19ರಂದು ನಡೆಸಲಾಗುತ್ತಿದೆ. ಘಟಿಕೋತ್ಸವದಲ್ಲಿ ಇನ್ಫೋಸಿಸ್‌ ಪ್ರತಿಷ್ಠಾನದ ಸಂಸ್ಥಾಪಕಿ ಸುಧಾಮೂರ್ತಿ ಅವರಿಗೆ ಗೌರವ ಡಾಕ್ಟರೆಟ್‌ ಪ್ರದಾನ ಮಾಡಲಾಗುತ್ತದೆ. ಸರಳ ಕಾರ್ಯಕ್ರಮದಲ್ಲಿ ನಿಯಮಿತ ಜನರನ್ನು ಮಾತ್ರ ಆಹ್ವಾನಿಸಲಿದ್ದು, ಆನ್‌ಲೈನ್‌ನಲ್ಲಿಯೂ ಕಾರ್ಯಕ್ರಮ ನೇರಪ್ರಸಾರವಾಗಲಿದೆ ಎಂದು ಮಾಹಿತಿ ನೀಡಿದರು.

ಈ ಬಾರಿ ಒಟ್ಟು 29,018 ವಿದ್ಯಾರ್ಥಿಗಳಿಗೆವಿವಿಧ ಪದವಿಗಳನ್ನು ಪ್ರದಾನ ಮಾಡಲಾಗುತ್ತಿದ್ದು, ಈ ಪೈಕಿ 18,344 ಮಹಿಳೆಯರು ಮತ್ತು 10,674 ಪುರುಷರು ಇದ್ದಾರೆ. 20,393 ವಿದ್ಯಾರ್ಥಿಗಳಿಗೆ (13,598 ಮಹಿಳೆಯರು) ಸ್ನಾತಕ ಪದವಿ ಹಾಗೂ 7971 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿಯನ್ನು ಪ್ರದಾನ ಮಾಡಲಾಗುತ್ತದೆ. ಕೇವಲ ಒಬ್ಬ ವಿದ್ಯಾರ್ಥಿ ಆಗ್ರಿ ಬ್ಯುಸಿನೆಸ್‌ ವಿಷಯದಲ್ಲಿ ಎಂಬಿಎ ಪದವಿ ಪಡೆದಿದ್ದಾರೆ ಎಂದು ತಿಳಿಸಿದರು.

ಇನ್ನು 654 (264 ಮಹಿಳೆಯರು, 390 ಪುರುಷರು) ಮಂದಿಗೆ ಪಿಎಚ್‌ಡಿ ಪದವಿ ಪ್ರದಾನ ಮಾಡಲಾಗುತ್ತಿದೆ. ಜೊತೆಗೆ ಒಟ್ಟು 392 ಪದಕಗಳನ್ನು ನೀಡಲಾಗುತ್ತಿದೆ. 230 ಅಭ್ಯರ್ಥಿಗಳು 198 ಬಹುಮಾನಗಳನ್ನು ಪಡೆದಿದ್ದು, ಈ ಪೈಕಿ 156 ಮಂದಿ ಮಹಿಳೆಯರು ಎಂದು ಮಾಹಿತಿ ನೀಡಿದರು.

Advertisement

ಕೋವಿಡ್ ಮಾರ್ಗಸೂಚಿ ಪಾಲನೆ: ಹೆಚ್ಚು ಜನರು ಸೇರಬಾರದು ಎಂಬ ನಿಯಮ ಇರುವ ಕಾರಣ ಕಾರ್ಯಕ್ರಮವನ್ನು ಯೂಟ್ಯೂಬ್‌, ಫೇಸ್‌ಬುಕ್‌ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ. ವಿಜ್ಞಾನಭವನ, ಸೆನೆಟ್‌ ಭವನ ಹಾಗೂ ಶತಮಾನೋತ್ಸವ ಭವನದಲ್ಲಿ ಎಲ್‌ಇಡಿ ಸ್ಕ್ರೀನ್‌ಗಳನ್ನು ಅಳವಡಿಸಿರಲಾಗುತ್ತದೆ. ಪೋಷಕರಿಗೆ ಒಳಗೆ ಪ್ರವೇಶ ಇರದ ಕಾರಣ ಅವರು ಅಲ್ಲಿಂದಲೇ ಕಾರ್ಯಕ್ರಮ ವೀಕ್ಷಿಸಬಹುದು. 100 ಮಂದಿ ಮಾತ್ರ ಕಾರ್ಯಕ್ರಮದಲ್ಲಿ ಹಾಜರಿರುತ್ತಾರೆ. ವಿದ್ಯಾರ್ಥಿಗಳನ್ನು 25 ಮಂದಿಯಂತೆ ಒಳಗೆ ಕರೆಸಿ ಪದಕ ಪ್ರದಾನ ಮಾಡಲಾಗುತ್ತದೆ. ಒಟ್ಟಿಗೆ ಹೆಚ್ಚು ಜನರನ್ನು ಸೇರಿಸುವುದಿಲ್ಲ ಎಂದು ತಿಳಿಸಿದರು.

ನೂರನೆಯ ಘಟಿಕೋತ್ಸವದ ಅಂಗವಾಗಿವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ನಡೆಸುವ ಯೋಚನೆ ಇತ್ತು. ಆದರೆ ಕೋವಿಡ್ ಕಾರಣದಿಂದಾಗಿ ಯಾವುದೂ ಸಾಧ್ಯವಾಗಿಲ್ಲ. ಇನ್ನು ಮುಂದೆ ಜನವರಿಯಿಂದ ವಿವಿಧ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕುಲಸಚಿವ ಪ್ರೊ.ಆರ್‌. ಶಿವಪ್ಪ, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಎಂ. ಮಹದೇವನ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next