Advertisement

ಮೈಸೂರು: ವಿದ್ಯಾರ್ಥಿನಿಯ ಅತ್ಯಾಚಾರ ಮಾಡಿ 3 ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿದ್ದ ಕಿರಾತಕರು!

10:11 AM Aug 26, 2021 | Team Udayavani |

ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಸ್ನೇಹಿತನೊಂದಿಗಿದ್ದ ಯುವತಿಯ ಮೇಲೆ ದುಷ್ಕರ್ಮಿಗಳ ಗುಂಪೊಂದು ದೆಹಲಿಯ ನಿರ್ಭಯಾ ಮಾದರಿಯಲ್ಲೇ ಸಾಮೂಹಿಕ ಅತ್ಯಾಚಾರ ಎಸಗಿರುವ ಪೈಶಾಚಿಕ ಕೃತ್ಯ ಸಾಂಸ್ಕೃತಿಕ ನಗರಿ ಮೈಸೂರನ್ನು ಬೆಚ್ಚಿ ಬೀಳಿಸಿದೆ.

Advertisement

ಮುಂಬೈ ಮೂಲದ ವಿದ್ಯಾರ್ಥಿನಿ ನಗರದ ಖಾಸಗಿ ಕಾಲೇಜೊಂದರಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದು, ಮಂಗಳವಾರ ಸಂಜೆ 7.30ರ ಸುಮಾರಿನಲ್ಲಿ ಚಾಮುಂಡಿ ಬೆಟ್ಟದ ತಪ್ಪಲಿನ ನಿರ್ಜನ ಪ್ರದೇಶಕ್ಕೆ ತೆರಳಿ, ಸ್ನೇಹಿತನೊಂದಿಗೆ ಕುಳಿತಿರುವಾಗ, ಪಾನಮತ್ತ ಗುಂಪೊಂದು ಏಕಾಏಕಿ ಯುವತಿಯನ್ನು ಹಿಡಿದುಕೊಂಡಿದೆ. ಈ ವೇಳೆ ಆಕೆಯ ಸ್ನೇಹಿತ ಪ್ರತಿರೋಧ ತೋರಿದ ವೇಳೆ ಮೂವರು ಸೇರಿಕೊಂಡು ಆತನ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಹಣಕ್ಕೆ ಡಿಮ್ಯಾಂಡ್: ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿದ್ದ ಕಿರಾತಕರು ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಯುವತಿಯ ವಿಡಿಯೊ ಮಾಡಿ ಮೂರು ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು. ಈ ವೇಳೆ ಹಣ ಕೊಡುವುದಾಗಿ ಸಂತ್ರಸ್ತೆ ಹಾಗೂ ಆತನ ಸ್ನೇಹಿತ ಹೇಳಿದ್ದರು. ಆದರೆ ಎರಡು ಗಂಟೆಯಾದರು ಹಣವನ್ನು ನೀಡಲು ಸಾಧ್ಯವಾಗದಾಗ ಸಂತ್ರಸ್ತೆ ಸ್ನೇಹಿತನ ಮೇಲೆ ಕಲ್ಲಿನಿಂದ ಹಲ್ಲೆ‌ ಮಾಡಿ ಇಬ್ಬರ ಮೊಬೈಲ್ ಕಿತ್ತುಕೊಂಡು ಹೋಗಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ:ಬಿಸ್ಕೆಟ್ ಹಾಕಿದರೆ ಸಾಕು; ಹಾದಿ ಸಲೀಸು!ಕೊಡಚಾದ್ರಿ ಶ್ರೇಣಿಯ ಗೈಡ್‌ಗಳಾಗಿರುವ 3 ಶ್ವಾನಗಳು

ವಿಡಿಯೋ ಲೀಕ್ ಬೆದರಿಕೆ: ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿದ ಬಳಿಕ ಪೊಲೀಸರಿಗೆ ದೂರು ಕೊಡದಂತೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ದುಷ್ಕರ್ಮಿಗಳು ಅತ್ಯಾಚಾರ ದೃಶ್ಯಗಳನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದರು. ದೂರು ಕೊಟ್ಟರೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆಯೊಡ್ಡಿದ್ದರು ಎಂದು ವರದಿಯಾಗಿದೆ.

Advertisement

ಸಾಕ್ಷಿ ನುಡಿಯುತ್ತಿದೆ ಬಿಯರ್ ಬಾಟಲ್: ಘಟನೆಗೂ ಮುನ್ನ ದುಷ್ಕರ್ಮಿಗಳು ಕಂಠಪೂರ್ತಿ ಕುಡಿದಿದ್ದರು. ಸ್ಥಳದಲ್ಲಿದ್ದ ಬಿಯರ್ ಬಾಟಲ್ ಗಳು ಪೊಲೀಸರಿಗೆ ಸಾಕ್ಷ್ಯ ನುಡಿಯುತ್ತಿದೆ. ಕಾಮುಕರು ಕಂಠ ಪೂರ್ತಿ ಕುಡಿದಿದ್ದರು ಎಂದು ಸಂತ್ರಸ್ಥೆ ಮತ್ತು ಯುವಕ ಪೊಲೀಸರಿಗೆ ವಿವರಣೆ ನೀಡಿದ್ದಾರೆ. ಘಟನಾ ಸ್ಥಳದ ಸುತ್ತಮುತ್ತಲಿನ ಇರುವ ಬಾರ್ ಅಂಡ್ ರೆಸ್ಟೋರೆಂಟ್ ಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿದ್ದಾರೆ.

ಪ್ರಾಣಾಪಾಯದಿಂದ ಪಾರು: ಪ್ರಕರಣದಲ್ಲಿ ಹಲ್ಲೆಗೊಳಗಾಗಿದ್ದ ಸಂತ್ರಸ್ಥೆ, ಸ್ನೇಹಿತ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿದ್ಯಾರ್ಥಿನಿ ಮೈಯಲ್ಲಿ ಸಣ್ಣಪುಟ್ಟ ಗಾಯಗಳಾದ್ದವು. ಸ್ನೇಹಿತನ ಮುಖ, ತಲೆಗೆ ಗಾಯವಾಗಿದೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಬ್ಬರಿಗೂ ಚಿಕಿತ್ಸೆ ನೀಡಲಾಗಿದ್ದು, ಸದ್ಯ ಇಬ್ಬರೂ ಚೇತರಿಸಿಕೊಂಡಿದ್ದಾರೆ.

ಇಬ್ಬರು ಈಗಾಗಲೇ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಆರೋಪಿಗಳು ನಮ್ಮಿಬ್ಬರಿಗೂ ಅಪರಿಚಿತರು, ಸುಮಾರು ನಾಲ್ಕರಿಂದ ಐದು ಜನ ಇದ್ದರು ಎಂದು ತಿಳಿಸಿದ್ದಾರೆ. ನಮಗೆ ಒಂದಷ್ಟು ಸುಳಿವು ಸಿಕ್ಕಿದ್ದು ತನಿಖೆ ಮುಗಿಯುವವರೆಗೂ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಉನ್ನತ ಮೂಲಗಳಿಂದ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next