Advertisement
ಕೊರೊನಾ ಸೋಂಕು ಹರಡುವ ಭೀತಿಯಿಂದಾಗಿಚಾ.ಬೆಟ್ಟಕ್ಕೆ ಭಕ್ತರಿಗೆ ಪ್ರವೇಶ ನಿರ್ಭಂದಿಸಿರುವುದರಿಂದಪೂಜೋತ್ಸವದಲ್ಲಿ ಭಾಗಿಯಾಗಲು ಮತ್ತು ಸಂಭ್ರಮದಕ್ಷಣವನ್ನು ಕಣ್ತುಂಬಿಕೊಳ್ಳಲು ಭಕ್ತರಿಗೆ ಸಾಧ್ಯವಾಗಲಿಲ್ಲ.
Related Articles
Advertisement
ಬೆಳಗ್ಗೆ 4 ಗಂಟೆಗೆದೇವಸ್ಥಾನದ ಬಾಗಿಲು ತೆರೆದು ವಿಶೇಷ ಪೂಜೆ,ಅಭಿಷೇಕವನ್ನು ಅರ್ಪಿಸಲಾಯಿತು. ಬಳಿಕರುದ್ರಾಭಿಷೇಕ, ಅರ್ಚನೆ ಮತ್ತು ಮಹಾ ಮಂಗಳಾರತಿಮಾಡಲಾಯಿತು. ಪ್ರತಿವರ್ಷ ಆಷಾಢ ಮಾಸದಶುಕ್ರವಾರದಂದು ಬೆಳಗಿನ ಜಾವ 7 ರಿಂದ ರಾತ್ರಿ10ರವರೆಗೂ ಶಕ್ತಿ ದೇವತೆಯ ದರ್ಶನಕ್ಕೆ ಅವಕಾಶ ಇರುತ್ತಿತ್ತು.
ಆದರೆ, ಇಂದು ಬೆಳಗ್ಗೆ 7 ಕ್ಕೆ ಧಾರ್ಮಿಕ ವಿಧಿವಿಧಾನಗಳನ್ನು ಮುಗಿಸಿದ ಅರ್ಚಕರು, ಬೆಳಗ್ಗೆ 9ಗಂಟೆ ವರಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಿದರು.ಇದೇ ಸಂದರ್ಭ ಚಾಮುಂಡೇಶ್ವರಿಯ ಉತ್ಸವಮೂರ್ತಿ ಮೆರವಣಿಗೆ ದೇವಸ್ಥಾನದ ಆವರಣದೊಳಗೆ ನೆರವೇರಿತು.
ಚಾಮುಂಡಿಬೆಟ್ಟದ ಗ್ರಾಮಸ್ಥರಿಗೆ ಮಾತ್ರ ದೇವಿಯದರ್ಶನಕ್ಕೆ ಅವಕಾಶ ನೀಡಲಾಯಿತು. ಸುಮಾರು200ಗ್ರಾಮಸ್ಥರು ಸರದಿ ಪ್ರಕಾರ ಒಬ್ಬರೇ ಬಂದು ದರ್ಶನ ಪಡೆದರು. ಶಾಸಕರಾದ ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್, ಅಖಂಡ ಶ್ರೀನಿವಾಸಮೂರ್ತಿ ಚಾಮುಂಡಿಬೆಟ್ಟಕ್ಕೆ ಆಗಮಿಸಿ ದೇವರ ದರ್ಶನಪಡೆದರು.ಇನ್ನುಭಕ್ತರಿಗೆಬೆಟ್ಟಕ್ಕೆಪ್ರವೇಶನಿರ್ಬಂಧಿಸಿರುವುದುಹಾಗೂ ವೈರಸ್ ಹರಡುವ ಭೀತಿಯಿಂದ ಈ ಬಾರಿಪ್ರಸಾದ ವಿತರಣೆಗೆ ಅವಕಾಶ ಇರಲಿಲ್ಲ. ಪ್ರತಿವರ್ಷಸಾವಿರಾರು ಸಂಖ್ಯೆಯಲ್ಲಿ ಪ್ರಸಾದ ಸ್ವೀಕರಿಸುತ್ತಿದ್ದರು.
ಕೇವಲ ಬೆಟ್ಟದಲ್ಲಿ ಮಾತ್ರವಲ್ಲದೆ ನಗರದ ವಿವಿಧೆಡೆತಾಯಿ ಚಾಮುಂಡೇಶ್ವರಿಯ ಪ್ರತಿಮೆ ಪ್ರತಿಷ್ಠಾಪಿಸಿಪೂಜೆ ಸಲ್ಲಿಸಿದ ನಂತರ ಪ್ರಸಾದ ಹಂಚಿಕೆಮಾಡಲಾಗುತಿತ್ತು.ಆದರೆ, ಈ ಬಾರಿ ಯಾವುದೇ ಕಾರಣಕ್ಕೂ ಪ್ರಸಾದಹಂಚಿಕೆ ಮಾಡಬಾರದೆಂದು ಜಿಲ್ಲಾಡಳಿತ ಕಟ್ಟುನಿಟ್ಟಿನಸೂಚನೆ ನೀಡಿದ ಹಿನ್ನೆಲೆಯಲ್ಲಿ ಭಕ್ತರುಮನೆಯಲ್ಲಿಯೇ ಉಳಿದು ದೇವಿಯನ್ನು ಮನದಲ್ಲಿನೆನೆಯುವಂತಾಯಿತು.
ಬೆಟ್ಟಕ್ಕೆ ಮುಗಿಲ ಮುತ್ತು: ಬೆಟ್ಟದಲ್ಲಿ ಸುರಿದಮಳೆಯಿಂದ ಆಹ್ಲಾದಕರ ವಾತಾವರಣ ನಿರ್ಮಾಣಗೊಂಡಿತ್ತಲ್ಲದೆ ಮುಂಜಾನೆ ಚಾ.ಮುಂಡಿ ಬೆಟ್ಟವನ್ನುಮುಗಿಲು ಮುತ್ತಿಕ್ಕುವಂತೆ ಆವರಿಸಿದ್ದರಿಂದ ಇಡೀಬೆಟ್ಟದಲ್ಲಿ ಮಂಜಿನ ವಾತಾವರಣ ಕಂಡುಬಂದಿತು. ಬೆಟ್ಟದ ಕೆಳಭಾಗದಿಂದ ನೋಡುವವರಿಗೆಬೆಟ್ಟಕ್ಕೆ ಮೋಡಗಳು ಬಂದು ಅಪ್ಪಳಿಸಿದ ರೀತಿಯದೃಶ್ಯಗಳು ಮುತ್ತಿಕ್ಕುವಂತೆ ಕಾಣುವ ಸುಂದರ ದೃಶ್ಯಕಂಡುಬಂದಿತು.