Advertisement

ಮೊಟ್ಟೆಕಾಸು ಭರಿಸಿ ಸಾಲಗಾರರಾದ ಕಾರ್ಯಕರ್ತೆಯರು

07:17 PM Jul 16, 2021 | Team Udayavani |

ನಂಜನಗೂಡು: ಅಂಗನವಾಡಿ ವ್ಯಾಪ್ತಿಯಲ್ಲಿಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳಿಗೆಕೋಳಿ ಮೊಟ್ಟೆ ವಿತರಿಸಲು ಕಾರ್ಯಕರ್ತೆಯರುಕೈಯಿಂದ ಸ್ವಂತ ಹಣ ಭರಿಸಿ ಇದೀಗ ಸಾಲದ ಶೂಲಕ್ಕೆಸಿಲುಕಿದ್ದಾರೆ.

Advertisement

ಫ‌ಲಾನುಭವಿಗಳಿಗೆ ಸಕಾಲದಲ್ಲಿ ಮೊಟ್ಟೆಸಿಗುತ್ತಿದೆ. ಆದರೆ, ಅದರ ವೆಚ್ಚವನ್ನೂ ಸರ್ಕಾರ ಇನ್ನೂನೀಡಿಲ್ಲ. ಕಳೆದ 4 ತಿಂಗಳಿನಿಂದ ಕಾರ್ಯಕರ್ತೆಯರುಸ್ವಂತ ಹಣದಲ್ಲಿ ಸಾಲ ಮಾಡಿ ಮೊಟ್ಟೆ ಖರೀದಿಸಿ,ಫ‌ಲಾನುಭವಿಗಳಿಗೆ ವಿತರಿಸುವಂತಹ ಪರಿಸ್ಥಿತಿನಿರ್ಮಾಣವಾಗಿದೆ.

ಏನಾದರೂ ಮಾಡಿ ಮೊಟ್ಟೆ ವಿತರಿಸಲೇಬೇಕು ಎಂದು ಇಲಾಖೆ ಅಧಿಕಾರಿಗಳುಕಟ್ಟಾಜ್ಞೆ ವಿಧಿಸಿರುವುದರಿಂದ ಇದಕ್ಕಾಗಿಅಂಗನವಾಡಿ ನೌಕರರೇ ಸ್ವಂತ ಹಣಬಳಸುವಂತಾಗಿದೆ. ಮೊಟ್ಟೆಗೂ ಕಾಸುನೀಡದ ಸರ್ಕಾರದ ವಿರುದ್ಧಕಾರ್ಯಕರ್ತೆಯರು ನಿತ್ಯ ಹಿಡಿಶಾಪಹಾಕುತ್ತಿದ್ದಾರೆ.ಸರ್ಕಾರ ಒಂದು ಮೊಟ್ಟೆಗೆ 5 ರೂ. ದರನಿಗದಿಪಡಿಸಿದೆ. ಆದರೆ, ಮಾರುಕಟ್ಟೆಯಲ್ಲಿ ಮೊಟ್ಟೆದರ 7 ರೂ. ಇದೆ. ಹೆಚ್ಚುವರಿ 2 ರೂ.ಗಳನ್ನುನೀಡಬೇಕಿರುವ ಸರ್ಕಾರವು ತಾನೇ ನಿಗದಿಪಡಿಸಿದ 5ರೂ. ದರವನ್ನು ಕೂಡ ಕಳೆದ ನಾಲ್ಕು ತಿಂಗಳಿನಿಂದಬಾಕಿ ಉಳಿಸಿಕೊಂಡಿದೆ.

ಅಂಗನವಾಡಿ ವ್ಯಾಪ್ತಿಯಗರ್ಭಿಣಿಯರು ಹಾಗೂ ಬಾಣಂತಿಯರಿಗೆದಿನಕ್ಕೊಂದು ಮೊಟ್ಟೆ ಹಾಗೂ 3ದಿಂದ 6 ವರ್ಷದಮಕ್ಕಳಿಗೆ ತಲಾ ವಾರಕ್ಕೆ 2 ಮೊಟ್ಟೆ ನೀಡಲೇಬೇಕಿದೆ.ಇದು ಸರ್ಕರದ ಕಟ್ಟಾಜ್ಞೆ. ಇದನ್ನು ಪಾಲಿಸದಿದ್ದರೆಕೆಲಸದಿಂದ ವಜಾಗೊಳಿಸುವ ಬೆದರಿಕೆಕೂಡ ಇದೆ.ಮೊಟ್ಟೆ ದರ ಏರಿಕೆ: ಸರ್ಕಾರ ತಲಾ ಒಂದು ಮೊಟ್ಟೆಗೆ5 ರೂ. ದರ ನಿಗದಿಪಡಿಸಿದೆ. ಮೊಟ್ಟೆ ದರಹೆಚ್ಚಳವಾಗಿದ್ದು, 7 ರೂ.ಆಗಿದೆ. ಹಾಗಾದರೆ ಈಹೆಚ್ಚುವರಿ ಹಣವನ್ನು ಯಾರು ನೀಡಬೇಕು ಎಂಬಗೊಂದಲದಲ್ಲೇ ಅಂಗನವಾಡಿ ನೌಕರರು ಕೋವಿಡ್‌ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮೊಟ್ಟೆನೀಡದಿದ್ದರೆ ಮಹಿಳಾ ಹಾಗೂ ಮಕ್ಕಳ ಇಲಾಖೆಯಅಧಿಕಾರಿಗಳು ಬಿಡುವುದಿಲ್ಲ. ಏನಾದರೂ ಮಾಡಿಸಾಲ ಸೋಲ ಮಾಡಿಯಾದರೂ ಫ‌ಲಾನುಭವಿಗಳಿಗೆಮೊಟ್ಟೆ ನೀಡಿ ಎಂಬುದು ಇಲಾಖೆಯ ತಾಕೀತು.ಹೆಚ್ಚುವರಿ ಹಣವಿರಲಿ , ತಾನೇ ನಿಗದಿಪಡಿಸಿದದರವನ್ನೂ ಸಹ ಕಾರ್ಯಕರ್ತರಿಗೆ ಸರ್ಕಾರ ಕಳೆದನಾಲ್ಕು ತಿಂಗಳಿಂದ ನೀಡಿಲ್ಲ.

ಇನ್ನು ಹೆಚ್ಚುವರಿ ಹಣಬರುವುದು ಯಾವಾಗ, ಯಾರಿಂದ ಎಂಬಗೊಂದಲಗಳ ಮಧ್ಯೆ ಅಂಗನವಾಡಿ ಕಾರ್ಯಕರ್ತೆಯರು ಹೈರಾಣಾಗಿದ್ದಾರೆ.ಸಾಲದ ಶೂಲ: ಸರ್ಕಾರನೀಡುವ ಗೌರವಧನದಆಸೆಗಾಗಿ ಮನೆಬಾಗಿಲಿನ ಕೆಲಸವೆಂದುಭಾವಿಸಿ ಕಾರ್ಯನಿರ್ವಹಿಸುತ್ತಿರುವಕಾರ್ಯಕರ್ತೆಯರ ುಇದೀಗ ಫ‌ಲಾನುಭವಿಗಳಿಗೆನೀಡಲಾಗುತ್ತಿರುವ ಮೊಟ್ಟೆಗಾಗಿಸಾಲ ಮಾಡಲಾರಂಭಿಸಿದ್ದಾರೆ. ನಾಲ್ಕು ತಿಂಗಳಿಂದಮೊಟ್ಟೆಯ ಬಾಪು¤ ಬಿಡಿಗಾಸು ಕೂಡ ಬಂದಿಲ್ಲ. ಇನ್ನುಹೆಚ್ಚುವರಿ ಹಣ ಯಾವಾಗ, ಯಾರಿಂದ ಬರುತ್ತದೆಎಂಬುದು ತಿಳಿಯುತ್ತಿಲ್ಲ. ತಿಂಗಳು ತಿಂಗಳು ಮೊಟ್ಟೆಅಂಗಡಿಯ ಸಾಲ ಮಾತ್ರ ಬೆಳೆಯುತ್ತಲೇ ಇದೆ.ಅಂಗನವಾಡಿ ಕಾರ್ಯಕರ್ತೆಯರೆಂಬ ಬಿರುದಿಗೆಮೊಟ್ಟೆ ಅಂಗಡಿಯ ಸಾಲಗಾರರು ನಾವಾಗಬೇಕಾಗಿದೆಎಂದು ಅಳಲು ತೋಡಿಕೊಂಡಿದ್ದಾರೆ.

Advertisement

ಸರ್ಕಾರ ಈಗಲಾದರೂ ಮೊಟ್ಟೆ ಹಣ ಬಿಡುಗಡೆಮಾಡಿ ಈ ಕಾರ್ಯಕರ್ತರನ್ನು ಸಾಲದ ಶೂಲದಿಂದಪಾರಮಾಡಬೇಕು. ಮೊಟ್ಟೆ ದರದ ಹೆಚ್ಚುವರಿಹಣವನ್ನು ಪಂಚಾಯ್ತಿ ಹೆಗಲಿಗೆ ವಹಿಸಿರುವುದುಸರಿಯಲ್ಲ. ಗ್ರಾಮ ಪಂಚಾಯ್ತಿಯಿಂದ ಹಣಬರುವುದುಕನಸಿನ ಮಾತು. ಆ ಹೆಚ್ಚುವರಿ ಹಣವನ್ನೂಸರ್ಕಾರವೇ ಭರಿಸಬೇಕು ಅಂಗನವಾಡಿ ನೌಕರರಸಂಘದ ತಾಲೂಕು ಅಧ್ಯಕ್ಷೆ ಮಂಜುಳಾಆಗ್ರಹಿಸಿದ್ದಾರೆ.

ಶ್ರೀಧರ್‌ ಆರ್‌.ಭಟ್‌

Advertisement

Udayavani is now on Telegram. Click here to join our channel and stay updated with the latest news.

Next