ಪಿರಿಯಾಪಟ್ಟಣ: ಮುಸುಕಿನ ಜೋಳದಬೆಳೆಯನ್ನು ಕೀಟಬಾಧೆ (ಸೈನಿಕ ಹುಳು)ಕಾಡುತ್ತಿದ್ದು, ಉತ್ತಮ ಫಸಲು ಹಾಗೂ ಇಳುವರಿ ನಿರೀಕ್ಷೆಯಲ್ಲಿದ್ದ ರೈತರು ಕಂಗಾಲಾಗಿದ್ದಾರೆ.
ಮೇ ತಿಂಗಳಲ್ಲಿ ಮುಂಗಾರು ಆರಂಭಕ್ಕೂಮುನ್ನ ಅಂದರೆ ಭರಣಿ ಮಳೆಗೆತಾಲೂಕಿನಾದ್ಯಂತ ಸುಮಾರು 12 ಸಾವಿರಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳಬಿತ್ತಲಾಗಿದೆ. ಆರಂಭದಲ್ಲಿ ಮಳೆ ಕೊರತೆಕಾಡುತ್ತಿದ್ದು, ಇದರ ನಡುವೆ ಸೈನಿಕ ಹುಳುವಿನಕಾಟ ಹೆಚ್ಚಾಗಿದೆ. ಜೋಳ ಬಿತ್ತನೆ ¤ ಮಾಡಿ ಈಗಾಗಲೇ50 ರಿಂದ 60 ದಿನಗಳುಕಳೆದಿರುವ ಮುಸುಕಿನ ಜೋಳ ಫಸಲು ಕಟ್ಟುವ ಹಂತದಲ್ಲಿರುವಾಗ ಸೈನಿಕ ಹುಳುವಿನ ದಾಳಿಗೆ ಸಿಲುಕಿರುವುದು ರೈತರನ್ನು ಚಿಂತೆಗೀಡು ಮಾಡಿದೆ.
ಈಗಾಗಲೇ ಮುಸುಕಿನ ಜೋಳ ತೆನೆಮೂಡುವ ಹಂತದಲ್ಲಿದ್ದು, ಈ ವೇಳೆ ಸೈನಿಕಹುಳುಗಳು ಬೆಳೆಗೆ ಲಗ್ಗೆ ಇಟ್ಟಿವೆ. ಹಗಲಿನಲ್ಲಿಸುಳಿ ಹಾಗೂ ಬುಡದ ಮಣ್ಣಿನ ಒಳಭಾಗಸೇರಿಕೊಳ್ಳುವ ಹುಳುಗಳು, ರಾತ್ರಿ ವೇಳೆಹೊರಬಂದು ಗರಿಗಳನ್ನು ತಿನ್ನುತ್ತಿವೆ.ಕೀಟಬಾಧೆ ತೀವ್ರಗೊಂಡು ಮುಸುಕಿನಜೋಳದ ಗರಿಗಳು ಹಾಳಾಗಿರುವ ಪರಿ ಣಾಮಬೆಳವಣಿಗೆಯಲ್ಲಿ ಕುಂಠಿತವಾಗಿದ್ದು, ಇದರಿಂದಜೋಳದ ತೆನೆ ಹುಲುಸಾಗಿ ಬರುವುದಿಲ್ಲ. ತೆನೆಬಂದರೂ ನಿರೀಕ್ಷೆಯಂತೆ ಫಸಲುಹಿಡಿಯುವುದು ಅನುಮಾನವಾಗಿದೆ ಎಂದುರೈತರು ಅಳಲು ತೋಡಿಕೊಂಡಿದ್ದಾರೆ.
ಕಳೆದ 2 ವಾರದಿಂದ ಮೋಡಕವಿದವಾತಾವರಣ ಹಾಗೂ ಶೀತಮಿಶ್ರಿಯ ಗಾಳಿಕೀಟಬಾಧೆಗೆ ಕಾರಣ ಎನ್ನಲಾಗಿದೆ. ರೈತರುಹೋಬಳಿಯ ರೈತ ಸಂಪರ್ಕ ಕೇಂದ್ರ ಹಾಗೂ ಖಾಸಗಿ ಔಷಧ ಅಂಗಡಿಗಳಲ್ಲಿ ಲಭ್ಯವಿರುವ ಕೀಟನಾಶಕಗಳನ್ನು ತಂದು ಬೆಳೆಗೆಸಿಂಪಡಿಸಿದರೂ ಕೀಟಬಾಧೆ ನಿಯಂತ್ರಣಕ್ಕೆಬಂದಿಲ್ಲ. ಕೆಲವರು ಬೆಳೆಗೆ ತಕ್ಷಣ ಕೀಟನಾಶಕಸಿಂಪಡಿಸಿದರೆ, ಇನ್ನೂ ಕೆಲವರು ಕೀಟನಾಶಕಸಂಪಡಿಸದೆ ಕೈಚೆಲ್ಲಿರುವ ಕಾರಣ ಹುಳುಗಳ ನಿಯಂತ್ರಣ ಸಾಧ್ಯವಾಗುತ್ತಿಲ್ಲ.
ಒಂದು ಎಕರೆ ಜಮೀನಿನಲ್ಲಿ ಮುಸುಕಿನಜೋಳ ಬೆಳೆಯಲು ಬಿತ್ತನೆಯಿಂದ ಕಟಾವಿನಹಂತದವರೆಗೆ 10 ಸಾವಿರ ರೂ. ಭರಿಸಬೇಕಾಗುತ್ತದೆ. ಕೀಟಬಾಧೆಗೆ ತುತ್ತಾಗಿರುವ ಮುಸುಕಿನ ಜೋಳದ ಬೆಳೆ ಜಾನುವಾರುಗಳಮೇವಿಗೂ ಬಳಕೆಯಾಗದ ಸ್ಥಿತಿ ತಲುಪಿದೆ.
ಮುಂಗಾರಿನಲ್ಲಿ ಬಿತ್ತನೆ ಮಾಡಿದ್ದ ಮುಸುಕಿನಜೋಳ ಮಳೆಯ ತೀವ್ರ ಕೊರತೆಯಿಂದಒಣಗಿಹೋಗಿರುವುದು,ರೈತರಿಗೆಆರ್ಥಿಕವಾಗಿಸಂಕಷ್ಟ ಎದುರಿಸುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ರೋಗಬಾಧೆತಡೆ, ಬೆಳೆ ಪರಿಹಾರಕ್ಕೆ ಕ್ರಮ ವಹಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.
ಪಿ.ಎನ್.ದೇವೇಗೌಡ