Advertisement

ಜಿಲ್ಲೆಯಲ್ಲಿ 15 ತಿಂಗಳಲ್ಲಿ 56 ರೈತರು ಆತ್ಮಹತ್ಯೆ

07:05 PM Jun 23, 2021 | Team Udayavani |

ಸತೀಶ್‌ ದೇಪುರ

Advertisement

ಮೈಸೂರು: ಜಿಲ್ಲೆಯಲ್ಲಿ 2020-21 ಸಾಲಿನಲ್ಲಿ 56ಮಂದಿ ಅನ್ನದಾತರು ಆತ್ಮಹತ್ಯೆಗೆ ಶರಣಾಗಿದ್ದು, 20ಕುಟುಂಬಗಳಿಗಷ್ಟೇ ಪರಿಹಾರ ದೊರಕಿದ್ದು,ಉಳಿದವರು ಕಳೆದ 6 ತಿಂಗಳಿಂದ ಪರಿಹಾರಕ್ಕಾಗಿಎದುರು ನೋಡುವಂತಾಗಿದೆ.

ಅತಿವೃಷ್ಟಿ, ಕಡಿಮೆ ಇಳುವರಿಯಿಂದ ನಲುಗಿದ್ದರೈತರು, ಕಳೆದ ಬಾರಿ ಎದುರಾದ ಕೊರೊನಾ ಲಾಕ್‌ಡೌನ್‌ನಿಂದಾಗಿ ಮಾರುಕಟ್ಟೆ ವ್ಯವಸ್ಥೆ ಹಾಗೂ ಕೃಷಿಉತ್ಪನ್ನಗಳಿಗೆ ಬೇಡಿಕೆ ಇಲ್ಲದೆ ಸಂಕಷ್ಟಕ್ಕೀಡಾಗಿದ್ದರು.ನಿರಂತರ ನಷ್ಟದಿಂದ ಸಾಲದ ಹೊರೆ ತಾಳಲಾರದೆ2020-21 ಸಾಲಿನಲ್ಲಿ 56 ಮಂದಿ ರೈತರು ಆತ್ಮಹತ್ಯೆಮಾಡಿಕೊಂಡಿರುವುದು ಜಿಲ್ಲೆಯಲ್ಲಿವರದಿಯಾಗಿದೆ.56 ಮಂದಿ ರೈತರ ಆತ್ಮಹತ್ಯೆ ಸಂಬಂಧ ಪರಿಹಾಕ್ಕಾಗಿ 43 ಅರ್ಜಿಗಳನ್ನು ಸಮಿತಿ ಮುಂದೆ ಮಂಡಿಸಲಾಗಿದ್ದು, ಆತ್ಮಹತ್ಯೆ ಪರಿಹಾರ ಯೋಜನೆಗೆ 32 ಅರ್ಜಿಗಳನ್ನು ಸ್ವೀಕರಿಸಿ, 07 ಅರ್ಜಿಗಳನ್ನು ತಿರಸ್ಕರಿಸಲಾಗಿದೆ.

ಇದರಲ್ಲಿ, 20 ಕುಟುಂಬಗಳಿಗೆ ಮಾತ್ರ 5 ಲಕ್ಷ ರೂ.ಪರಿಹಾರ ನೀಡಲಾಗಿದ್ದು, ಉಳಿದ12ಕುಟುಂಬಗಳಿಗೆಪರಿಹಾರ ವಿತರಣೆಯಾಗಿಲ್ಲ. ಹಾಗೆಯೇ 13ಅರ್ಜಿಗಳನ್ನು ಸಮಿತಿ ಮುಂದೆ ಮಂಡಿಸದೇಇರುವುದರಿಂದಒಟ್ಟು25ಕುಟುಂಬಗಳಿಗೆ ಸರ್ಕಾರದಪರಿಹಾರ ಗಗನಕುಸುಮವಾಗಿದೆ.ಪ್ರಸಕ್ತ ಸಾಲಿನಲ್ಲಿಯೂ ಎಚ್‌.ಡಿ.ಕೋಟೆ, ಪಿರಿಯಾಪಟ್ಟಣ ತಾಲೂಕುಗಳಲ್ಲಿ ತಲಾ ಒಬ್ಬರಂತೆ ಇಬ್ಬರುರೈತರು ಆತ್ಮಹತ್ಯೆ ಮಾಡಿಕೊಂಡಿದ್ದು,

ಈ ಎರಡುಅರ್ಜಿಗಳು ಅಮಿತಿ ಮುಂದೆ ಮಂಡನೆಯೇ ಆಗಿಲ್ಲ.ಸರ್ಕಾರದ ಪ್ರೋತ್ಸಾಹ, ವಿವಿಧ ಯೋಜನೆಗಳನಡುವೆಯೂ ರೈತರ ಆತ್ಮಹತ್ಯೆ ಪ್ರಕರಣಗಳುಮುಂದುವರಿದಿದ್ದು, ಪ್ರತಿ ವರ್ಷ ಒಂದಲ್ಲೊಂದುಕಾರಣದಿಂದ ಸಂಕಷ್ಟ ಅನುಭವಿಸುತ್ತಿರುವಅನ್ನದಾತರು ಸಾವಿನ ಮನೆಯ ಕದ ತಟ್ಟುತ್ತಿರುವುದುಆತಂಕಕ್ಕೆಕಾರಣವಾಗುತ್ತಿದೆ.ನಿಲ್ಲದ ಆತ್ಮಹತ್ಯೆಗಳು: ಜಿಲ್ಲಾಡಳಿತದ ಮಾಹಿತಿಪ್ರಕಾರ 2017-18ರಲ್ಲಿ 81 ಪ್ರಕರಣಗಳು ವರದಿಯಾದರೆ,

Advertisement

2018-19ರಲ್ಲಿ 77 ಪ್ರಕರಣಗಳು ವರದಿಯಾಗಿದ್ದವು. ಬಳಿಕ 2019-20ರಲ್ಲಿ55 ಪ್ರಕರಣಗಳುವರದಿಯಾಗಿದ್ದು, ಅರ್ಹ ಕುಟುಂಬಗಳಿಗೆ ಪರಿಹಾರನೀಡಲಾಗಿದೆ. ಕಳೆದ ಐದು ವರ್ಷಗಳಿಂದ2019-20ನೇ ಸಾಲಿನವರೆಗೆ ರೈತ ಆತ್ಮಹತ್ಯೆಪ್ರಕರಣಗಳು ಇಳಿಕೆಯಾಗಿದೆ. ಆದರೆ, 2020-21ನೇ ಸಾಲಿನಲ್ಲಿ ಎದುರಾದ ಕೊರೊನಾ ಲಾಕ್‌ಡೌನ್‌ನಿಂದ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿದ್ದು, 56ಮಂದಿ ಪ್ರಕರಣಗಳು ವರದಿಯಾಗಿದೆ. ಈ ಮೂಲಕರೈತರ ಆತ್ಮಹತ್ಯೆ ಪ್ರಕರಣಗಳು ನಿರಂತರವಾಗಿಕಡಿಮೆಯಾಗಿವೆ ಹೊರತು ನಿಂತಿಲ್ಲ.

 

Advertisement

Udayavani is now on Telegram. Click here to join our channel and stay updated with the latest news.

Next