ಹುಣಸೂರು: ತಾಲೂಕಿನಲ್ಲಿ ಜಲಮರುಹೂರಣ (ಇಂಜಕ್ಷನ್‌ವೆಲ್)ಕ್ಕೆ ಹೆಚ್ಚುಆದ್ಯತೆ ನೀಡಿ 2 ಸಾವಿರ ವೆಲ್‌ಗಳನ್ನು ನಿರ್ಮಿಸುವ ಮೂಲಕ ಅಂತರ್ಜಲ ವೃದ್ಧಿಸಬೇಕು.2022ರ ಮಾರ್ಚ್‌ನೊಳಗೆ ಹೆಚ್ಚು ಇಂಜಕ್ಷನ್‌ವೆಲ್ ನಿರ್ಮಿಸುವ ಗ್ರಾಪಂಗೆ ಬಹುಮಾನನೀಡುವುದಾಗಿ ಶಾಸಕ ಎಚ್.ಪಿ.ಮಂಜುನಾಥ್‌ಪ್ರಕಟಿಸಿದರು.
ತಾಪಂ ಸಭಾಂಗಣದಲ್ಲಿ ಶಾಲೆ,ಅಂಗನವಾಡಿ ಹಾಗೂ ಜಲಶಕ್ತಿ ಅಭಿಯಾನಯೋಜನೆಯ ಕಾಮಗಾರಿಗಳ ಪ್ರಗತಿಪರಿಶೀಲನೆ ನಡೆಸಿದ ಶಾಸಕರು, ಮುಂದಿನಮಾರ್ಚ್‌ನೊಳಗೆ ಹೆಚ್ಚು ಇಂಜಕ್ಷನ್ ವೆಲ್‌ನಿರ್ಮಿಸುವ ಗ್ರಾಪಂಗೆ ಶಾಸಕರ ನಿಧಿಯಿಂದ20 ಲಕ್ಷ (ಪ್ರಥಮ), 15 ಲಕ್ಷ (ದ್ವಿತೀಯ), 10ಲಕ್ಷ ರೂ. (ತƒತೀಯ) ಬಹುಮಾನ ನೀಡಲಾಗುವುದೆಂದರು.
ಜಲ ಮರುಹೂರಣಯೋಜನೆಯಡಿತಾಲೂಕಿನಾದ್ಯಂತ 2ಸಾವಿರ ವೆಲ್ ನಿರ್ಮಿಸುವ ಮೂಲಕ ಅಂತರ್ಜಲ ವೃದ್ಧಿಸಬೇಕು.ಜಲಶಕ್ತಿ ಯೋಜನೆಯಡಿ ಸಕಾಲದಲ್ಲಿ ನೀರುಪೂರೈಸುವ ಸಂಬಂಧ ಮೊದಲ ಹಂತದ 28ಗ್ರಾಮಗಳಲ್ಲಿ ಕಾಮಗಾರಿ ಮುಗಿಸಬೇಕೆಂದುಎಂಜಿನಿಯರ್‌ಗೆ ಸೂಚಿಸಿದರು.
ನರೇಗಾದಲ್ಲಿ ಜಿಲ್ಲೆಯಲ್ಲೇ ಹೆಚ್ಚುಕಾಮಗಾರಿ ನಡೆಸಿ ಕಳೆದ ವರ್ಷ 29.25ಕೋಟಿ ರೂ. ಬಳಕೆ ಮಾಡಿ ಶೇ.180ರಷ್ಟುಸಾಧನೆ ಮಾಡಲಾಗಿದೆ ಎಂಬ ಇಒ ಗಿರೀಶ್‌ರಮಾಹಿತಿಗೆ ಅಭಿನಂದಿಸಿದ ಶಾಸಕರು, ಮುಂದೆಜಲ ಮರು ಹೂರಣಕ್ಕೆ ನರೇಗಾ ಯೋಜನೆಬಳಸಿಕೊಂಡು ಹೆಚ್ಚು ಕಾಮಗಾರಿ ನಡೆಸಿ,ನರೇಗಾ ಇಂಜಿನಿಯರ್‌ಗಳು ದೂರು ಬಾರದಂತೆ ಕಾರ್ಯ ನಿರ್ವಹಿಸಿರೆಂದು ಎಚ್ಚರಿಸಿದರು.
ತಹಶೀಲ್ದಾರ್ ಬಸವರಾಜು, ಮಳೆಹಾನಿಯ ಅನುದಾನವನ್ನು ಬಳಕೆ ಮಾಡದಿರುವುದು ಸರಿಯಲ್ಲ, ಹೀಗೆ ಆದಲ್ಲಿ ಈಬಾರಿಯಮಳೆಯಲ್ಲಿ ಮತ್ತೆ ಹಾನಿಗೊಂಡಲ್ಲಿ ಅನುದಾನಸಿಗುವುದಿಲ್ಲವೆಂದು ಎಚ್ಚರಿಸಿದರು. ಸಭೆಯಲ್ಲಿಡಾ.ಕೀರ್ತಿಕುಮಾರ್, ಸಿಡಿಪಿಒ ರಶ್ಮಿ,ಸಹಾಯಕ ನಿರ್ದೇಶಕ ಲೋಕೇಶ್, ಬಿಇಒನಾಗರಾಜ್, ಎಇಇ.ಮಹೇಶ್ ಇತರರಿದ್ದರು.