Advertisement

Mysore ಮುಡಾ ಅಕ್ರಮ: ನಿವೇಶನ ಹಂಚಿಕೆ ರದ್ದು

12:54 AM Jul 02, 2024 | Team Udayavani |

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಡೆದಿರುವ ಬಹುಕೋಟಿ ರೂ. ಮೊತ್ತದ ಹಗರಣದ ಕುರಿತು ತುರ್ತುಸಭೆ ನಡೆಸಿದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಅವರು ಮುಡಾದಲ್ಲಿ 50-50 ಅನುಪಾತದಲ್ಲಿ ನಡೆದ ನಿಯಮಬಾಹಿರವಾದ ನಿವೇಶನ ಹಂಚಿಕೆಯನ್ನು ರದ್ದು ಮಾಡಿ ಆದೇಶಿಸಿದ್ದಾರೆ. ಅಲ್ಲದೆ ಮುಡಾ ಆಯುಕ್ತರ ವರ್ಗಾವಣೆಗೆ ಮೌಖಿಕ ಆದೇಶವನ್ನು ಹೊರಡಿಸಲಾಗಿದೆ.

Advertisement

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಅವಧಿಯಲ್ಲಿ ಯಾವುದೇ ಅಕ್ರಮಕ್ಕೆ ಅವಕಾಶ ಕೊಟ್ಟಿಲ್ಲ. ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಈ ನಿಯಮವನ್ನು ಜಾರಿಗೆ ತಂದಿದೆ. ಅಲ್ಲಿಂದ ಏನು ಆಗಿದೆ ಎಂಬುದನ್ನು ತಿಳಿಯಬೇಕಿದೆ ಎಂದು ಸ್ಪಷ್ಟನೆ ನೀಡಿದರು.

ಅಕ್ರಮ ತಿಳಿಯಲು ತನಿಖೆ
27-10-2023ರಲ್ಲಿ ಈ ಆದೇಶ ಮಾಡಲಾಗಿದ್ದರೂ 50:50 ಅನುಪಾತ ಜಾರಿಗೆ ಬಂದದ್ದು 2020ರಲ್ಲಿ. ಇದರಲ್ಲಿ ಎಷ್ಟು ಅಕ್ರಮ ಆಗಿದೆ ಎಂದು ತಿಳಿಯಲು ತನಿಖೆ ನಡೆಸಲಾಗುತ್ತಿದೆ ಎಂದರು.

ಅಕ್ರಮ ಕುರಿತು 4 ವಾರಗಳಲ್ಲಿ ವರದಿ ನೀಡುವಂತೆ ಆದೇಶಿಸಲಾಗಿದ್ದು, ಹಿರಿಯ ಐಎಎ ಸ್‌ ಅಧಿಕಾರಿಗಳಾದ ವೆಂಕಟಾಚಲಪತಿ, ಕವಳಗಿ ಅವರ ನೇತೃತ್ವದಲ್ಲಿ ತನಿಖೆ ನಡೆಯಲಿದೆ. ಪ್ರಕರಣ ಹಿನ್ನೆಲೆಯಲ್ಲಿ ಆಯುಕ್ತರೊಂದಿಗೆ ಕಾರ್ಯದರ್ಶಿ ಹಾಗೂ ಎಇಇಯನ್ನೂ ವರ್ಗಾವಣೆ ಮಾಡಲಾಗಿದೆ ಎಂದರು.

ಮುಡಾದಿಂದ ಮುಂದಿನ ಒಂದು ತಿಂಗಳು ಸೈಟ್‌ ಹಂಚಿಕೆ ಹಾಗೂ ಸಭೆ ಕೂಡ ಮಾಡುವಂತಿಲ್ಲ. ಈ ಹಿಂದೆ ಹಂಚಿಕೆಯಾಗಿರುವ ಎಲ್ಲ ಸೈಟುಗಳನ್ನು ಕೂಡ ತಡೆ ಹಿಡಿಯಲಾಗುತ್ತದೆ ಎಂದರು.

Advertisement

ಏನಿದು ಅಕ್ರಮ?
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿ ಯಿಂದ ಸುಮಾರು 5 ಸಾವಿರ ಕೋಟಿ ರೂ.ಗೂ ಹೆಚ್ಚು ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. 50:50 ಅನುಪಾತದಲ್ಲಿ ನಿವೇಶನ ಹಂಚಿಕೆ, ಪ್ರೋತ್ಸಾಹ ದಾಯಕ ನಿವೇಶನ, ಬದಲಿ ನಿವೇಶನ ಹಂಚಿಕೆಯಲ್ಲಿ ಈ ಅಕ್ರಮ ಎಸಗಲಾಗಿದೆ ಎನ್ನಲಾಗಿದೆ.

ಮುಡಾ ಹಗರಣದಲ್ಲಿ ಯತೀಂದ್ರ ಸಿದ್ದರಾಮಯ್ಯನವರ ಪಾತ್ರ ಈ ಕ್ಷಣದಲ್ಲಿ ಕಂಡುಬರುತ್ತಿಲ್ಲ. ಇದಕ್ಕೂ ಅವರಿಗೂ ಸಂಬಂಧವಿಲ್ಲ.
-ಬೈರತಿ ಸುರೇಶ್‌, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next