ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆಗೆ ಕ್ಷಣಗಣನೆ ಶುರುವಾಗಿದೆ. ಈ ಬಾರಿಯ ಸರಳ ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿರುವ ಅಭಿಮನ್ಯು, ಕಾವೇರಿ, ವಿಜಯ, ಗೋಪಿ, ವಿಕ್ರಮ ಆನೆಗಳು ಬಣ್ಣಗಳ ಚಿತ್ತಾರದಿಂದ ಕಂಗೊಳಿಸುತ್ತಿವೆ.
ಜಂಬೂ ಸವಾರಿಯ ಪ್ರಮುಖ ಆಕರ್ಷಣೆಯಾದ ಗಜಪಡೆ ಮೆರವಣಿಗೆಗೆ ಸಿದ್ಧಗೊಳ್ಳುತ್ತಿದೆ. ಅರಮನೆ ಆವರಣದಲ್ಲಿ ವೃತ್ತಾಕಾರದ ಮಜ್ಜನ ಜಾಗದಲ್ಲಿ ಆನೆಗಳಿಗೆ ಸ್ನಾನ ಮಾಡಿಸಿ ಸಿಂಗರಿಸಲಾಗುತ್ತಿದೆ.
ಕಲಾವಿದ ನಾಗಲಿಂಗಪ್ಪ ನೇತೃತ್ವದ ಹುಣಸೂರು ಮೂಲದ 5 ಮಂದಿ ಕಲಾವಿದರು ಗಜಪಡೆಗೆ ಬಣ್ಣ ಹಚ್ಚಿ ಸಿಂಗರಿಸುತ್ತಿದ್ದಾರೆ. ನಾಗಲಿಂಗಪ್ಪನವರು ಕಳೆದ 30 ವರ್ಷಗಳಿಂದ ದಸರಾ ಆನೆಗಳಿಗೆ ಬಣ್ಣ ಬಿಡಿಸುತ್ತಿದ್ದಾರೆ
ಇದನ್ನೂ ಓದಿ:401ನೇ ಜಂಬೂ ಸವಾರಿ; ಅಭಿಮನ್ಯುಗೆ ಚೊಚ್ಚಲ ಅಂಬಾರಿ
ಆನೆಗಳ ಕಿವಿ ಮೇಲೆ ಶಂಖ, ಚಕ್ರ, ಸೊಂಡಿಲ ಮೇಲೆ ಗಂಡಭೇರುಂಡ, ಹೂವು, ಎಲೆ, ದಂತದ ಹಿಂಭಾಗ ಗಿಳಿ, ಎಲೆ, ಕೆನ್ನೆಯ ಮೇಲೆ ಹೂವು, ಬಳ್ಳಿ, ಮೊಗ್ಗು, ಎಲೆ ಹಾಗೂ ಕಾಲುಗಳ ಮೇಲೆ ಪಕ್ಷಿ, ಎಲೆ, ಹೂವು, ಮೊಗ್ಗು, ಬಳ್ಳಿ ಚಿತ್ರಗಳನ್ನು ಬಿಡಿಸಲಾಗುತ್ತಿದೆ.