Advertisement

ಭಾರತಕ್ಕಾಗಮಿಸಿದ ಮ್ಯಾನ್ಮಾರ್ ಅಧ್ಯಕ್ಷ: ಹಲವು ಒಪ್ಪಂದಗಳ ವಿನಿಮಯ

09:26 AM Feb 28, 2020 | keerthan |

ಹೊಸದಿಲ್ಲಿ: ನೆರೆ ದೇಶ ಮ್ಯಾನ್ಮಾರ್ ನ ಅಧ್ಯಕ್ಷ ಯು ವಿನ್ ಮೈಂಟ್ ಭಾರತ ಪ್ರವಾಸಕ್ಕೆ ಆಗಮಿಸಿದ್ದು, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ.

Advertisement

ಹೊಸದಿಲ್ಲಿಯ ಹೈದರಾಬಾದ್ ಹೌಸ್ ನಲ್ಲಿ ಉಭಯ ದೇಶಗಳ ನಾಯಕರು ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ಇಂಧನ, ಮೂಲ ಸೌಕರ್ಯ, ಸಂವಹನ ಮತ್ತು ಆರೋಗ್ಯ ಸೇರಿದಂತೆ ಹಲವು ಕ್ಷೇತ್ರಗಳ ಒಟ್ಟು ಹತ್ತು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.

ಮ್ಯಾನ್ಮಾರ್ ಯು ವಿನ್ ಮೈಂಟ್ ಮತ್ತು ಪತ್ನಿ ಡಾ ಚೊ ಚೊ ಅವರು ನಾಲ್ಕು ದಿನಗಳ ಭಾರತ ಭೇಟಿಗಾಗಿ ಬುಧವಾರ ಭಾರತಕ್ಕೆ ಆಗಮಿಸಿದ್ದಾರೆ.

ಭಾರತ ಮ್ಯಾನ್ಮರ್ ನ ಐದನೇ ಅತಿದೊಡ್ಡ ವ್ಯಾಪಾರ ಪಾಲುದಾರ ದೇಶವಾಗಿದೆ. ಭಾರತ ಗಡಿಯಲ್ಲಿರುವ ಮ್ಯಾನ್ಮರ್ ಆಗ್ನೇಯ ಏಷ್ಯಾಗೆ ಹೆಬ್ಬಾಗಿಲು ಒದಗಿಸುವ ಏಕೈಕ ಆಸಿಯಾನ್ ರಾಷ್ಟ್ರವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next