ಆಗಷ್ಟೇ ಪಿ.ಯು.ಸಿ ಮುಗಿಸಿ, ಡಿಗ್ರಿಗೆ ಅಡ್ಮಿಷನ್ ಆಗೋಣ ಅಂತ ನಿರ್ಧರಿಸಿದೆ. ಓದಿದ್ದು ಆರ್ಟ್ಸ್ ಆದ್ದರಿಂದ ಬಿ. ಎ. ಮಾಡುವಾ ಅನೋಕಂಡೆ. ನನ್ನ ಫ್ರೆಂಡ್ಸ್ ಬಿ. ಎ. ದಲ್ಲಿ ಹುಡಿಗರು ಕಡಿಮೆ, ಬಿ. ಕಾಂ ಮಾಡು. ಅಲ್ಲಿ ಫುಲ್ ಹುಡುಗೀರು ಇರ್ತಾರೆ ಅಂದ್ರು .
ಹೀಗಂದ್ರೆ ಯಾವ ಹುಡುಗನಿಗೆ ಇಷ್ಟ ವಾಗಲ್ಲ ಹೇಳಿ? ಕೊನೆಗೆ ಬಿ. ಕಾಂಗೆ ಅಡ್ಮಿಷನ್ ಆಗಿಯೇ ಬಿಟ್ಟೆ.
ಮೊದಲ ದಿನ ಕಾಲೇಜ್ ಒಳಗಡೆ ಕಾಲಿಟ್ಟರೆ, ಕೆಲ ಹುಡಗ್ರ ಗುಂಪು, ಹುಡುಗಿಯರು, ಲೆಕ್ಚರರ್‌ಗಳು ಇವರನ್ನೆಲ್ಲ ಬೆರಗಿನಿಂದ ನೋಡಿ,
ನನ್ನ ಕ್ಲಾಸ್ ರೂಮ್ ಎಲ್ಲಿ ಅಂತ ಹುಡುಕುವ ಹೊತ್ತಿಗೆ, ನನ್ನ ಮೊದಲ ಕ್ಲಾಸ್ ಮುಗಿದೇ ಹೋಗಿತ್ತು . ಕ್ಲಾಸ್ ರೂಮ್ ನಲ್ಲಿ ಹೆಜ್ಜೆ ಹಾಕಲೂ ಭಯ. ಆದ್ರೆ ಏನು ಮಾಡುವುದು ಅಂತ ನಿರ್ಧಾರ ಮಾಡಿ, ಒಳಗೆ ಕಾಲಿಟ್ಟರೆ, ಲೆಕ್ಚರರ್ ಒಳಗೆ ಬಾ ಅಂದ್ರು. ಲಾಸ್ಟ್ ಬೆಂಚ್‌ಗೆ ಹೋಗಿ ಕೂತೆ. ನನ್ನ ಪಕ್ಕದ ಬೆಂಚ್‌ನಲ್ಲಿದ್ದ ಒಂದು ಹುಡುಗಿ ನಾನು ಏನೋ ಮಾಡ್ತಾ ಇದ್ದೀನಿ ಗಮನಿಸುತ್ತಾ ಇದ್ದಳು. ನನಗೂ ಕೂಡಾ ಅವಳ ಹತ್ತಿರ ಮಾತಾಡ್ಬೇಕು ಅನ್ನಿಸಿ ಹಾಯ್ ಅಂದೆ. ಹಲೋ ಅಂದ್ಲು. ಇಬ್ಬರೂ ಪರಿಚಯವಾಗಿ ಕ್ಲಾಸ್ ರೂಂ ನಿಂದ ಹೊರಗೆ ಬಂದ್ವಿ.
ಅವ್ಳು “ನಿನ್ನ ನಂಬರ್ ಕೊಡು. ನಾನು ಫ್ರೀ ಇದ್ದಾಗ ಕಾಲ್ ಮಾಡ್ತೀನಿ’ ಅಂದಳು. ಅವಳ ಹತ್ತಿರ ಮೊಬೈಲ್ ಇರಲಿಲ್ಲ. ಅಪ್ಪ ನ ಫೊನ್ ತಗೊಂಡು ಮಾತಾಡ್ತಾ ಇದ್ದಳು. ಅಲ್ಲಿ ಸಾಲದು ಅಂತ ವ್ಯಾಟ್ಸಾಪ್‌ನಲ್ಲೂ ಚಾಟ್‌ಗೆ ಇಳಿದಳು.
ಹೀಗೆ, ಡೈಲಿ ನೈಟ್ ಒಂದು ಗಂಟೆ ಆದ್ರೂ ಇಬ್ಬರಿಗೂ ನಿದ್ದೇನೇ ಇಲ್ಲ. ಒಂದು ದಿನ ನಾನು ಮೊಬೈಲ್ ಅನ್ನು ಹಾಗೇ ಇಟ್ಟುಕೊಂಡು ನಿದ್ದೆ ಮಾಡಿಬಿಟ್ಟಿದ್ದೀನಿ. ಬೆಳಗ್ಗೆ ಅವಳು ಕಾಲ್. ನಾನು, “ಹಲೋ’ ಅಂತ ಅಂದರೆ, ” ಮೊದ್ಲು ನೀನು ಯಾರು? ನನ್ನ ಮಗಳ ಹತ್ತಿರ ಚಾಟ್ ಮಾಡುಕೇ? ಅಂದಿತು ಆಕಡೆಯಿಂದ. ವಾಯ್ಸ… ಕೇಳುತ್ತಲೇ ಎದ್ದು ಕುಂತೆ.
ನೀನು ಈ ಥರ ಮಾಡಿದ್ರೆ ನಿನ್ನ ಮನೆಯರಿಗೆ ಹೇಳಿ ನಿನ್ನ ಕಾಲು,ಕೈ ಮುರಿತೀನಿ ಅಂತ ಹೇಳಿ ಕಾಲ್ ಕಟ್ ಮಾಡಿದರು. ಅದು ಆ ಹುಡುಗಿಯ ತಂದೆ. ನನಗೆ ತಿಳಿಯಲಿಲ್ಲ ಅವರಿಗೆ ಹೇಗೆ ಗೊತ್ತಾಯಿತು ಅಂತ. ಕೊನೆಗೆ, ನನ್ನ ಮೊಬೈಲ್ ವ್ಯಾಟ್ಸ್ ಆ್ಯಪ್ ಚೆಕ್ ಮಾಡಿದಾಗ ನಾನು ಅವಿÛಗೆ ಚಾಟ್ ಮಾಡಿದ ಮೆಸ್ಸೇಜ್ ಎಲ್ಲವು ಸ್ಕ್ರೀನ್ ಶಾಟ್ ಆಗಿ ಬಂದಿದ್ದವು.
ಮುಂದೆ ಆ ಕಡೆಯಿಂದ ಕಾಲ್ ಮತ್ತು ಮೆಸೇಜ್ ಬರಲಿಲ್ಲ…
ಎಸ್ ಎರಿಸ್ವಾಮಿ