Advertisement

ರೈತರ ಹಿತಕಾಪಾಡುವುದೇ ನನ್ನಉದ್ದೇಶ: ಮಾಜಿ ಶಾಸಕ ಬಾಲಕೃಷ್ಣ

05:18 PM Sep 08, 2021 | Team Udayavani |

ಮಾಗಡಿ: ತಾಲೂಕಿನಲ್ಲಿ ಕೈಗಾರಿಕೆ ಸ್ಥಾಪನೆ ಸಂಬಂಧ ಶಾಸಕ ಎ. ಮಂಜುನಾಥ್‌ ಅವರು ಹೊಸ ಸೂತ್ರಕಂಡುಹಿಡಿದಿದ್ದಾರಂತೆ. ರೈತರಿಗೆ
ಅನುಕೂಲವಾಗುವುದಾದರೆ ಅದಕ್ಕೆ ನನ್ನ ಸಹ ಮತವಿದೆ ಎಂದು ಮಾಜಿ ಶಾಸಕ ಎಚ್‌.ಸಿ.ಬಾಲಕೃಷ್ಣ ತಿಳಿಸಿದ್ದಾರೆ.

Advertisement

ತಾಲೂಕಿನ ಕುದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತ ಮಕ್ಕಳ ನಿರುದ್ಯೋಗ ಸಮಸ್ಯೆ ಬಗೆಹರಿಸುವ ಮೂಲಕಎಲ್ಲರಿಗೂ ಕೆಲಸ ಕೊಡಿಸುತ್ತಿದ್ದೆ. ಇದಕ್ಕೆ ಮಾಜಿ ಶಾಸಕರೇ ಅಡ್ಡಿ ಪಡಿಸುತ್ತಿದ್ದಾರೆ ಎಂದು ಅಪಪ್ರಚಾರ ಮಾಡುತ್ತಾರೆ ಎಂದು ಹೇಳಿಕೊಂಡಿದ್ದಾರೆ.

ನಾನು ಅಪಪ್ರಚಾರ ಮಾಡುತ್ತಿಲ್ಲ, ರೈತರ ಹಿತಕಾಪಾಡುವುದೇ ನನ್ನ ಉದ್ದೇಶ. ಬಿಡದಿಯಲ್ಲಿ ಕೈಗಾರಿಕೆ ಇದೆ, ಶಾಸಕರು ಎಷ್ಟು ಮಂದಿ
ನಿರುದ್ಯೋಗಿಗಳಿಗೆ ಕೆಲಸ ಕೊಡಿಸಿ ಸಮಸ್ಯೆ ಬಗೆಹರಿಸಿದ್ದಾರೆ ಎಂದು ಶಾಸಕರು ಮನದಟ್ಟು ಮಾಡಿಕೊಡಬೇಕಿದೆ ಎಂದರು.

ಇದನ್ನೂ ಓದಿ:ಪ.ಬಂಗಾಳ ಉಪಚುನಾವಣೆ : ದೀದಿ ವಿರುದ್ಧ ಸ್ಪರ್ಧಿಸದಿರಲು ಕಾಂಗ್ರೆಸ್ ತೀರ್ಮಾನ  

ಬೋರು ತೋಟ, ವ್ಯವಸಾಯ ಭೂಮಿ ಇರುವೆಡೆ ಕೈಗಾರಿಕೆ ಮಾಡಬಾರದು. ತಿಪ್ಪಸಂದ್ರದಲ್ಲಿ 300 ಎಕರೆ ಗೋಮಾಳವಿದೆ. ಅಲ್ಲೇ ಬೃಹತ್‌ ಮಟ್ಟದ ಕೈಗಾರಿಕೆ ಸ್ಥಾಪನೆ ಮಾಡಬಹುದು. ಈ ಸ್ಥಳದಲ್ಲಿ ಕೈಗಾರಿಕೆ ಅಭಿವೃದ್ಧಿಯಾಗುವುದಾದರೆ ಮುಂದೆ ನಾವೇ ಬಂದು ರೈತರ
ಕೈಕಾಲು ಹಿಡಿದು ಒಪ್ಪಿಸುತ್ತೇನೆಂದು ತಿಳಿಸಿದರು.

Advertisement

ಉಳಿಕೆ ಭೂಮಿಯಲ್ಲೇ ಕೈಗಾರಿಕೆ ಸ್ಥಾಪಿಸಬಹುದು:ಅಲ್ಲದೇ, ಅವರು ಅಲ್ಲೇ ಬದುಕು ಕಟ್ಟಿಕೊಂಡಿರುವುದರಿಂದ ರೈತರು ಒಪ್ಪುತ್ತಾರೋ ಗೊತ್ತಿಲ್ಲ, ಶಿವೈಕ್ಯ ಡಾ.ಶಿವಕುಮಾರಾಸ್ವಾಮಿ ಹುಟ್ಟೂರು ವೀರಾಪುರದಲ್ಲಿ ಆಗುತ್ತಿರುವ ಶ್ರೀಗಳ ಪ್ರತಿಮೆ ಹತ್ತಿರ ಸಂಸ್ಕೃತ ವಿವಿಗೆ ಈಗಾಗಲೇ 100 ಎಕರೆ ಗುರುತಿಸಿ ಮೀಸಲಿಟ್ಟಿರುವ ಭೂಮಿಯ ಪೈಕಿ ಸುಮಾರು 25 ಎಕರೆ ಪ್ರದೇಶದಲ್ಲಿ ಸಂಸ್ಕೃತಿ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಿ. ಉಳಿಕೆ ಭೂಮಿಯಲ್ಲಿಯೇ ಕೈಗಾರಿಕೆ ಸ್ಥಾಪಿಸಬಹುದು ಎಂದು ಸಲಹೆ ನೀಡಿದರು. ರೈತ ಮುಖಂಡ ಜಾನಿಗೆರೆ ರವೀಶ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next