Advertisement

UV Fusion: ನನ್ನ ದೇಶ ನನ್ನ ಮಣ್ಣು, ದೆಹಲಿ ಕಂಡಂತೆ ನನ್ನ ಕಣ್ಣು

03:53 PM Nov 19, 2023 | Team Udayavani |

ಕೇಂದ್ರ ಸರಕಾರದ ಮಹತ್ತರವಾದ ಕಾರ್ಯಕ್ರಮ ಮೇರಾ ಮಾಟಿ ಮೇರಾ ದೇಶ್‌ (ನನ್ನ ಮಣ್ಣು ನನ್ನ ದೇಶ) ಸರಳವಾಗಿ ಕಾರ್ಯಕ್ರಮದ ಬಗ್ಗೆ ಹೇಳ್ಳೋದಾದರೆ ಈ ದೇಶದ ಸ್ವಾತಂತ್ರ ಹೋರಾಟ ಮಾಡಿದ ವೀರ ಯೋಧರ ನೆನಪಿನಲ್ಲಿ ದೇಶದ ಎಲ್ಲ ಕಡೆ ಗ ಳಿಂಂದಲೂ ಮಣ್ಣನ್ನ ಸಂಗ್ರಹಿಸಿಕೊಂಡು ಬಂದು ದೆಹಲಿಯಲ್ಲಿ ಆ ಮಣ್ಣನ್ನು ಸ್ಮಾರಕವಾಗಿ ನಿರ್ಮಿಸಿ ಮುಂದಿನ ಪೀಳಿಗೆಗೆ ಮಹತ್ತರವಾದ ಉಡುಗೊರೆಯನ್ನು ನೀಡುವಂತದ್ದು.

Advertisement

ಶಿರಹಟ್ಟಿಯ ಮಣ್ಣಿನೊಂದಿಗೆ ದೆಹಲಿಗೆ ಹೋಗಲು ಶಿರಹಟ್ಟಿಯ ಪುರಸಭೆಯಿಂದ ನನಗೆ ಕರೆ ಬಂತು ಅಮೃತ ಕಲಶಯಾತ್ರೆ ದೆಹಲಿಯ ವಿಶೇಷ ರೈಲಿನಲ್ಲಿ ನಮ್ಮ ಪ್ರಯಾಣ ಆರಂಭವಾಯಿತು.

ನಾನು ಗದಗ್‌ ಜಿಲ್ಲೆಯನ್ನು ಪ್ರತಿನಿಧಿಸಿದ್ದರಿಂದ ನನ್ನೊಂದಿಗೆ ಗದಗ್‌ ಜಿಲ್ಲೆಯ ಉದಯ, ಮೈನುದ್ದಿನ್‌, ಉದಯ, ಮಲ್ಲು, ಅಭಿಷೇಕ್‌ ನಾಗರಾಜ್, ಇವರು ವಿವಿಧ ತಾಲೂಕುಗಳನ್ನು ಪ್ರತಿನಿಧಿಸುತ್ತಿದ್ದವರು ಜತೆಯಾಗಿದ್ದರು. ಮೊದಲಿಗೆ ಪರಿಚಯವಿಲ್ಲದಿದ್ದರೂ ಅನಂತರ ತೀರ ಹತ್ತಿರವಾಗಿ ಬಿಟ್ಟರು. ರೈಲಿನಲ್ಲಿ ಮೂರು ದಿನಗಳ ಕಾಲ ಪಯಣ ಇವರೊಂದಿಗಿನ ಮಾತುಗಳಲ್ಲಿ ದಾರಿ ಸಾಗಿದ್ದೆ ಗೊತ್ತಾಗಲಿಲ್ಲ.

ಊರಿನಲ್ಲಿ ನಡೆಯುತ್ತಿದ್ದ ಸೀಗಿ ಹುಣ್ಣಿಮೆಯ ನೆನಪು ಪಯಣದಲ್ಲಿ ಕಾಡುತ್ತಿತ್ತು. ದೆಹಲಿಯ ನಿಜಾಮುದ್ದೀನ್‌ ರೈಲ್ವೆ ನಿಲ್ದಾಣದಲ್ಲಿ ನಮ್ಮನ್ನು ಸ್ವಾಗತ ಕೋರಿದರು.ಅ ನಂತರ ನಮಗಾಗಿ ಅಲ್ಲಿದ್ದ ಬಸ್‌ಗಳನ್ನೇರಿ ನಾವು ಉಳಿಯಬೇಕಾದ ಅದ್ಭುತ ಲೋಕವಾದ ರಾಧಾ ಸ್ವಾಮಿ ಸತ್ಸಂಗ ಬಿಯಾಸ (RSSB) ಸ್ಥಳಕ್ಕೆ ಎರಡು ಮೂರು ತಾಸುಗಳ ಪಯಣದ ಅನಂತರ ಟ್ರಾಫಿಕ್‌ ಕಿರಿಕಿರಿಯ ನಡುವೆ ತಲುಪಿದೆವು. ದೇಶದ ಎಲ್ಲ ಪ್ರತಿನಿಧಿಗಳು ತಮ್ಮ ತಮ್ಮ ಪ್ರಾಂತ್ಯಗಳಿಂದ ತಂದಿದ್ದ ಮಣ್ಣನ್ನ ಬೃಹತ್‌ ಕಳಸದಲ್ಲಿ ಒಬ್ಬೊಬ್ಬರೇ ಹಾಕಿ ತಮಗೆ ಸೂಚಿಸಲಾಗ ಸ್ಥಳದಲ್ಲಿ ಕುಳಿತುಕೊಂಡರು. ಒಂದಿಷ್ಟು ಶಾಸ್ತ್ರೀಯ ನೃತ್ಯಗಳನ್ನು ಕಣ್ತುಂಬಿಕೊಂಡು, ಕರ್ತವ್ಯ ಪಥದಲ್ಲಿಯೇ ಇದ್ದ ಇಂಡಿಯಾ ಗೇಟ್‌ ನೋಡಲು ನಾವೆಲ್ಲರೂ ಹೊರಟೆವು.

ಮರುದಿನ ಮತ್ತೆ ಅದೇ ಕರ್ತವ್ಯ ಪಥದಲ್ಲಿ ಮೇರಾ ಮಾಟಿ ಮೇರಾ ದೇಶ್‌ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಹಮ್ಮಿಕೊಂಡಿದ್ದರು. ಅಲ್ಲಿ ದೇಶದ ಪ್ರಧಾನ ಮಂತ್ರಿನರೇಂದ್ರ ಮೋದಿಜಿ, ಅಮಿತ್‌ ಶಾ ಇನ್ನಿತರ ಕೇಂದ್ರ ಸಚಿವರು ಭಾಗವಹಿಸಿದ್ದರು. ಕಾರ್ಯಕ್ರಮದ ಆರಂಭಕ್ಕೂ ಮೊದಲೇ ಖ್ಯಾತ ಗಾಯಕರಾದ ಕೈಲಾಸ್‌ ಕೇರ್‌ ಹಲವು ಗಾಯನಗಳನ್ನ ಕೇಳಿ ಅದರಲ್ಲಿ ಮಿಂದೆದ್ದೆವು.

Advertisement

ರೈಲನ್ನೇರಿ ಮತ್ತೆ ಮೂರು ದಿನಗಳ ಪಯಣ, ದೆಹಲಿಗೆ ಬರುವಾಗ ಅಪರಿಚಿತ ಮುಖಗಳು ಆತ್ಮೀಯವಾಗಿ ಹೃದಯದಲ್ಲಿ ಬೇರೂರಿದ್ದವೂ, ಮಾತುಕತೆಗಳು, ಸಿಟ್ಟು ಸೆಡವುಗಳು, ಹಾಸ್ಯ ವಿನೋದಗಳು, ಹಾಡುಗಳು ಕಥೆಗಳು,ಕೆಲವು ಜಗಳಗಳು ನಾವು ಬರುವಾಗ ನಮ್ಮವರೊಂದಿಗೆ ಇದ್ದ ಆತ್ಮಿಯತೆ ಇನ್ನೂ ಕೂಡ ಹೆಚ್ಚಾಗಿತ್ತು, ಇಡೀ ರೈಲ್ವೆ ಒಂದು ಕುಟುಂಬ ಎನ್ನುವಂತೆ ನಾವು ಮೂರು ದಿನಗಳ ಕಾಲ ಇದ್ದೆವು. ಪರಿಚಯವಿಲ್ಲದೆ ದೆಹಲಿಗೆ ತೆರಳಿದ್ದ ನಾವು ಮನಸ್ಸಿಗೆ ಹತ್ತಿರವಾಗುವಷ್ಟು ಪರಿಚಯವಾಗಿ ಅದೆಷ್ಟೋ ಅನುಭವಗಳನ್ನು ನಾವು ಹೊತ್ತುಕೊಂಡು, ಜೀವನದಲ್ಲಿ ಮುಗಿಯಲಾರದ ಸಂಬಂಧಗಳನ್ನು ಬೆಳೆಸಿಕೊಂಡು, ಹುಬ್ಬಳ್ಳಿಯ ರೈಲ್ವೆ ನಿಲ್ದಾಣಕ್ಕೆ ನಮಸ್ಕಾರ ಮಾಡಿ ನಮ್ಮೂರಿನ ಕಡೆಗೆ ಪ್ರಯಾಣವನ್ನ ಬೆಳೆಸಿದೆವು.

-ಅಮೋಘ ಸಾಂಬಾನುಸುತ

ಸರಕಾರಿ ಪ್ರಥಮ ದರ್ಜೆ ಕಾಲೇಜು,

ಶಿರಹಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next