ಪಲ್ಲೆಕಿಲೆ: ವಿಶ್ವ ವಿಖ್ಯಾತ ಸ್ಪಿನ್ನರ್ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಸದಾ ಹಸನ್ಮುಖೀ. ವಿಶ್ವ ಕ್ರಿಕೆಟ್‌ನಲ್ಲಿ ಹಲವಾರು ದಾಖಲೆ ಬರೆದ ವೀರ. ಸಾಧನೆಗಳ ಮೇರುಪರ್ವತವೇ ಆಗಿರುವ ಮುತ್ತಯ್ಯಗೆ ಹತ್ತಿರಕ್ಕೂ “ಅಹಂ’ ಸುಳಿದಿಲ್ಲ. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಮುತ್ತಯ್ಯ ಮುರಳೀಧರನ್ ಕಥೆ.
ಇವರ ತಂದೆ ಇವರಿಗಿಂತಲೂ ಸರಳ ವ್ಯಕ್ತಿ. ಇಂದಿಗೂ ಸಣ್ಣದೊಂದು ಬಿಸ್ಕತ್, ಕ್ಯಾಂಡಿ ತಯಾರಿಸುವ ಫ್ಯಾಕ್ಟರಿ ನಡೆಸುತ್ತಿದ್ದಾರೆ. 200ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿ ಅವರ ಬದುಕಿಗೆ ಆಸರೆಯಾಗಿದ್ದಾರೆ. ಇದರ ಸುತ್ತಲಿನ ಕುತೂಹಲದ ವರದಿ ಇಲ್ಲಿದೆ.
ಮಗನ ದುಡ್ಡಿಗೆ ಕೈಚಾಚದ ಸಿನ್ನಸ್ವಾಮಿ ಮುತ್ತಯ್ಯ: ಮುರಳಿಧರನ್ ತಂದೆ ಹೆಸರು ಸಿನ್ನಸ್ವಾಮಿ ಮುತ್ತಯ್ಯ. ಅವರಿಗೆ 73 ವರ್ಷ. ಇಳಿವಯಸ್ಸಿನಲ್ಲೂ ಬದುಕುವ ಉತ್ಸಾಹ ಬತ್ತಿಲ್ಲ. ಮಗನ ಸಂಪಾದನೆಯೆ ಸಾವಿರಾರು ಕೋಟಿ ರೂ.ಗೂ ಹೆಚ್ಚಿದೆ. ಸಿನ್ನಸ್ವಾಮಿಗೆ ಈಗ ದುಡಿದು ಏನೂ ಆಗಬೇಕಾಗಿಲ್ಲ. ಹಾಗಂತ ಮಗನ ದುಡ್ಡಿಗೆ ಕೈಚಾಚುವ ಜಾಯಮಾನ ಸಿನ್ನಸ್ವಾಮಿ ಅವರದ್ದಲ್ಲ.
ಸ್ವಾಭಿಮಾನದ ಬದುಕು ಅವರದು. ಶ್ವೇತ ವರ್ಣದ ಬಿಳಿಪಂಚೆ ಒಂದು ಅಂಗಿಯಷ್ಟೇ ಧರಿಸುತ್ತಾರೆ. ಕಾರ್ಮಿಕರ ಜತೆ ಕಾರ್ಮಿ
ಕರಂತೆ ದುಡಿಯುತ್ತಾರೆ. ಸಿಂಪಲ್ ಆಗಿ ಸ್ವಾವಲಂಬಿ ಬದುಕು ಸಾಗಿಸುತ್ತಿದ್ದಾರೆ.
ಮಗನ ಸ್ಟಾರ್‌ಗಿರಿಯಿಂದ ಲಾಭ ಮಾಡಿಕೊಳ್ಳದ ತಂದೆ: ಮಕ್ಕಳು ಸ್ಟಾರ್‌ಗಳಾಗಿದ್ದರೆ ಎಷ್ಟೋ ಮಂದಿ ದುರುಪ ಯೋಗ ಮಾಡುತ್ತಾರೆ. ತಂದೆಯಂದಿರು ವ್ಯಾಪಾರಕ್ಕೋಮತ್ಯಾವುದಕ್ಕೋ ಮಕ್ಕಳ ಹೆಸರನ್ನು ನೇರವಾಗಿ ಅಥವಾ ಪರೋಕ್ಷವಾಗಿ ಬಳಸುವುದನ್ನು ಮಾಧ್ಯಮಗಳಲ್ಲಿ ನೋಡಿ ದ್ದೇವೆ.ಆದರೆ ಸಿನ್ನಸ್ವಾಮಿ ಮುತ್ತಯ್ಯ ಒಂದೇ ಒಂದು ಬಿಸ್ಕತ್ ಪ್ಯಾಕೆಟ್‌ನಲ್ಲೂ ಮುತ್ತಯ್ಯ ಮುರಳೀಧರನ್ ಹೆಸರು ಅಥವಾ ಫೋಟೋ ಬಳಸಿಕೊಂಡಿಲ್ಲ. ತಮ್ಮದೇ ಬ್ರ್ಯಾಂಡ್‌ನಲ್ಲಿ ಬಿಸ್ಕತ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ. ಲಂಕಾದಲ್ಲೇ ತಮ್ಮ ಸಂಸ್ಥೆ ಸದ್ಯ ಮೂರನೇ ಸ್ಥಾನ ಹೊಂದಿದೆ.