Advertisement
ತಾಲೂಕಿನ ಹೊನ್ನೆಸರದ ಶ್ರಮಜೀವಿ ಆಶ್ರಯದಲ್ಲಿ ಭೀಮನಕೋಣೆ ಕವಿಕಾವ್ಯ ಟ್ರಸ್ಟ್ ಹಾಗೂ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಸಹಯೋಗದೊಂದಿಗೆ ನಡೆದ ಎರಡು ದಿನಗಳ ಚರಕ ಉತ್ಸವ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕೊಡುಕೊಳ್ಳುವವರ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
Related Articles
ವಿಜಯಪುರದ ಬಂಜಾರ ಕಸೂತಿ ಒಕ್ಕೂಟದ ನಿರ್ದೇಶಕರಾದ ಆಶಾ ಪಾಟೀಲ್ ಮಾತನಾಡಿ, ಕೈಮಗ್ಗ ನಮ್ಮ ನಡುವಿನ ಪ್ರಮುಖ ಕರಕುಶಲ ಕಲೆ ಆಗಿದೆ. ಸಾಂಪ್ರದಾಯಿಕತೆಯನ್ನು ಉಳಿಸಿಕೊಂಡಿರುವ ಅಪ್ಪಟ ದೇಸಿತನದ ಈ ಕಲೆಗೆ ಅಗತ್ಯವಿರುವಷ್ಟು ಆಧುನಿಕತೆಯ ಸ್ಪರ್ಶ ನೀಡುವ ಮೂಲಕ ಮಾರುಕಟ್ಟೆಯಲ್ಲಿ ಎದುರಾಗುವ ಸವಾಲನ್ನು ಸಮರ್ಥವಾಗಿ ಎದುರಿಸಬೇಕಿದೆ ಎಂದರು.
Advertisement
ಇದನ್ನೂ ಓದಿ : ದಿಗ್ಗಾಂವ ಮಠದ ಬಾವಿಯಲ್ಲಿ ಬಿದ್ದು ಶಿಕ್ಷಕಿ ಸಾವು
ನಮ್ಮ ಯೋಚನಾ ಲಹರಿಯಲ್ಲಿ ಆಧುನಿತೆ ಇರಬೇಕು. ಆದರೆ ಕೇವಲ ಉಡುಗೆ ತೊಡುಗೆ, ಭಾಷೆ, ಆಹಾರ ಸೇವನೆಯಲ್ಲಿ ಆಧುನಿಕತೆಯನ್ನು ಅನುಸರಿಸಿದರೆ ಸಾಲದು. ಇಂತಹ ಸಂಸ್ಕೃತಿ ನಮ್ಮ ಮಾನವೀಯ ಸಂಬಂಧಗಳನ್ನು ದೂರ ಮಾಡುತ್ತದೆ. ಕೈಮಗ್ಗ ನೇಕಾರಿಕೆಯಂತಹ ಈ ನೆಲದ ಕಲೆಗೆ ಸಂಬಂಧಗಳನ್ನು ಒಗ್ಗೂಡಿಸುವ ಶಕ್ತಿ ಇದೆ ಎಂದು ಹೇಳಿದರು.ಸ್ವಾತಂತ್ರ್ಯ ಹೋರಾಟಗಾರ ಹಾಗೂ ಹಿರಿಯ ನೇಕಾರರಾದ ಸಂಗಪ್ಪ ಮಂಟೆ, ನೇಕಾರರು ಉಳಿದರೆ ಮಾತ್ರ ಕೈಮಗ್ಗ ಕ್ಷೇತ್ರ ಜೀವಂತವಾಗಿರಲು ಸಾಧ್ಯ. ಒಂದು ಮಗು ಮೃತಪಟ್ಟರೆ ಮತ್ತೊಂದು ಮಗು ಪಡೆಯಬಹುದು. ಆದರೆ ತಾಯಿಯೇ ಮೃತಪಟ್ಟರೆ ಮಗುವನ್ನು ಪಡೆಯುವುದು ಹೇಗೆ ಎಂದು ಪ್ರಶ್ನಿಸಿದರು. ಬಂಜಾರ ಕಸೂತಿ ಒಕ್ಕೂಟದ ಸೀಮಾ, ತುಲಾ ಸಂಸ್ಥೆಯ ಸುಷ್ಮಿತಾ, ಗುಜರಾತ್‌ನ ವಾರ್ಧಾದ ಮಗನ್ ಸಂಗ್ರಹಾಲಯದ ಸೋನು ತಮ್ಮ ಅನುಭವಗಳನ್ನು ಹಂಚಿಕೊಂಡರು. ವಿಧಾನ ಪರಿಷತ್ತಿನ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್, ಚರಕ ಸಂಸ್ಥೆಯ ಅಧ್ಯಕ್ಷೆ ಗೌರಮ್ಮ, ಕಾರ್ಯದರ್ಶಿ ರಮೇಶ್, ಇಂಧುಕುಮಾರ್, ಮಹಾಲಕ್ಷ್ಮಿ, ಪ್ರಸನ್ನ ಇದ್ದರು. ಪದ್ಮಶ್ರೀ ನಿರೂಪಿಸಿದರು.
ಚರಕ ಸಂಸ್ಥೆಯ ಉಡುಪುಗಳನ್ನು ಧರಿಸಿದವರಿಂದ ಆಕರ್ಷಕ ಪ್ರದರ್ಶನ ನಡೆಯಿತು. ನಿರಾಮಯ ಕಲಾತಂಡದ ರಾಮಚಂದ್ರ ಹೆಗಡೆ ಕೊಂಡದಕುಳಿ, ರಾಮಕೃಷ್ಣ ಹಿಲ್ಲೂರು, ಪ್ರಸನ್ನ ಶೆಟ್ಟಿಗಾರ್, ಅಶ್ವಿನಿ ಮುಂತಾದ ಕಲಾವಿದರಿಂದ ದಕ್ಷ ಯಜ್ಞ ಯಕ್ಷಗಾನ ಪ್ರದರ್ಶನ ನಡೆಯಿತು.