Advertisement

ಮಂಗಳೂರು: ಯೋಧ ಮುರಳೀಧರ್‌ ರೈ ಹೃದಯಾಘಾತದಿಂದ ಸಾವು

12:35 AM Jan 25, 2023 | Team Udayavani |

ಮಂಗಳೂರು : ಸಶಸ್ತ್ರ ಸೀಮಾಬಲ್‌ನಲ್ಲಿ ಭೋಪಾಲ್‌ನಲ್ಲಿ ಸೇವಾ ನಿರತರಾಗಿದ್ದ ಮಂಗಳೂರು ಶಕ್ತಿನಗರದ ನಿವಾಸಿ ಹವಾಲ್ದಾರ್‌ ಮುರಳೀಧರ್‌ ರೈ (37) ಅವರು ಸೋಮವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

Advertisement

ರವಿವಾರ ಭೋಪಾಲ್‌ನಲ್ಲಿ ಮಲಗಿದಲ್ಲೇ ಅವರಿಗೆ ಹೃದಯಾಘಾತವಾಗಿದ್ದು, ಸೋಮವಾರ ಬೆಳಗ್ಗೆ ಜತೆಗಿದ್ದವರು ಕರೆದಾಗ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ವೈದ್ಯರು ಪರೀಕ್ಷಿಸಿದಾಗ ಹೃದಯಾಘಾತದಿಂದ ಮೃತಪಟ್ಟಿರುವುದು ದೃಢಪಟ್ಟಿದೆ.

ಊರಿಗೆ ಬರುವವರಿದ್ದರು
ಮುರಳೀಧರ್‌ ರೈ ಅವರು 2007ರಲ್ಲಿ ಕಾನ್‌ಸ್ಟೆಬಲ್‌ ಆಗಿ ಸಶಸ್ತ್ರ ಸೀಮಾ ಬಲ್‌ಗೆ ಸೇರಿದ್ದರು. ರವಿವಾರ ರಾತ್ರಿ ವೀಡಿಯೋ ಕಾಲ್‌ ಮೂಲಕ ಪತ್ನಿ ಜತೆ ಮಾತನಾಡಿದ್ದರು. ಫೆ. 5ರಂದು ನಡೆಯಲಿದ್ದ ತಾಯಿಯ ನಿಧನದ ಮೊದಲ ವರ್ಷದ ಕಾರ್ಯಕ್ರಮಕ್ಕಾಗಿ ಎರಡು ವಾರದ ರಜೆಯಲ್ಲಿ ಮಂಗಳವಾರ ಹೊರಟು ಬುಧವಾರ ಊರಿಗೆ ಬರುವವರಿದ್ದರು. ಅವರು ಪತ್ನಿ ಹಾಗೂ ಏಳು ತಿಂಗಳ ಮಗುವನ್ನು ಅಗಲಿದ್ದಾರೆ.

ಇಂದು ಅಂತ್ಯಸಂಸ್ಕಾರ
ಭೋಪಾಲ್‌ನಿಂದ ವಿಮಾನದ ಮೂಲಕ ಮುರಳೀಧರ ಅವರ ಮೃತದೇಹವನ್ನು ಮಂಗಳೂರು ವಿಮಾನ ನಿಲ್ದಾಣಕ್ಕೆ ತರಲಾಯಿತು. ಡಿಸಿ ರವಿ ಕುಮಾರ್‌ ಎಂ.ಆರ್‌., ಜಿ.ಪಂ. ಸಿಇಒ ಡಾ| ಕುಮಾರ್‌, ಸಹಾಯಕ ಆಯುಕ್ತ ಮದನ್‌ ಮೋಹನ್‌ ಮೊದಲಾದವರು ಅಂತಿಮ ನಮನ ಸಲ್ಲಿಸಿದರು. ಮೃತದೇಹವನ್ನು ಖಾಸಗಿ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದ್ದು ಬುಧವಾರ ಶಕ್ತಿನಗರದಲ್ಲಿ ಅಂತಿಮ ವಿಧಿ ವಿಧಾನಗಳು ನೆರವೇರಲಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next