Advertisement

ಸಂಗೀತ ಸಂಜೆ: ಕಲಾವಿದರಿಗೆ ಸನ್ಮಾನ

01:14 PM Jan 05, 2018 | |

ಬೀದರ: ನಗರದ ಜಯಪ್ರಕಾಶ ಬಡಾವಣೆ (ಜೆಪಿ ನಗರ)ಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಜಾನಪದ ಕಲಾವಿದರ ಬಳಗ ಮತ್ತು ಸಾಯಿ ಗಣೇಶ ಮಂಡಳ ಟ್ರಸ್ಟ್‌ ವತಿಯಿಂದ ಸಂಗೀತ ಸಂಜೆ ಮತ್ತು ಕಲಾವಿದರ ಅಭಿನಂದನಾ ಸಮಾರಂಭ ನಡೆಯಿತು.

Advertisement

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಡಾವಣೆಯಲ್ಲಿ ಸಂಗೀತ ಸಂಜೆ ಆಯೋಜಿಸಿರುವುದು ಸಂತಸದ ವಿಷಯ. ಪ್ರತಿಭೆ ಪ್ರತಿಯೊಬ್ಬರಲ್ಲಿ ಸುಪ್ತವಾಗಿರುತ್ತದೆ. ಎಲ್ಲ ಕ್ಷೇತ್ರಗಳಲ್ಲೂ ಪ್ರತಿಭಾವಂತರಿದ್ದಾರೆ. ಅಂಥವರಿಗೆ ಸಮಾಜ ಮತ್ತು ಕುಟುಂಬ ಅವಕಾಶಗಳನ್ನು ಕಲ್ಪಿಸಿಕೊಟ್ಟಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.

ಹಂಪಿ ಉತ್ಸವ, ಮೈಸೂರು ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ವಿವಿಧ ಉತ್ಸವಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡಿರುವ ರೇಖಾ ಅಪ್ಪಾರಾವ್‌ ಸೌದಿ ಮತ್ತು ಅಮೀತ್‌ ಜನವಾಡಕರ್‌ ತಮ್ಮದೇಯಾದ ಛಾಪು ಮೂಡಿಸಿದ್ದಾರೆ. ಬಡಾವಣೆಯ ಜನ ಕಲಾವಿದರಿಗೆ ಅಭಿನಂದಿಸಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಇದೇ ವೇಳೆ ರೇಖಾ ಸೌದಿ ಮತ್ತು ಅಮೀತ್‌ ಜನವಾಡಕರ್‌ ಅವರನ್ನು ಸಾಯಿ ಗಣೇಶ ಮಂಡಳ ಟ್ರಸ್ಟ್‌ ವತಿಯಿಂದ ಸನ್ಮಾನಿಸಲಾಯಿತು. ನಂತರ ಸಂಗೀತ ಸಂಜೆ ಕಾರ್ಯಕ್ರಮ ನಡೆಯಿತು. ಶಾಸಕ ರಹೀಮ್‌ ಖಾನ್‌, ಪ್ರಥಮ ದರ್ಜೆ ಗುತ್ತಿಗೆದಾರ ಗುರುನಾಥ ಕೊಳ್ಳೂರ, ಟ್ರಸ್ಟ್‌ ಅಧ್ಯಕ್ಷ ಚಂದ್ರಕಾಂತ ಶೆಟಕಾರ ವೇದಿಕೆಯಲ್ಲಿದ್ದರು. ಶಶಿಕಾಂತ ಬಂಬುಳಗೆ ಸ್ವಾಗತಿಸಿದರು. ಬಳಗದ ಅಧ್ಯಕ್ಷ ವಿಜಯಕುಮಾರ ಸೋನಾರೆ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next