Advertisement

8 ರಂದು ಸಚಿವ ಖಂಡ್ರೆ ಮನೆಗೆ ಮುತ್ತಿಗೆಗೆ ನಿರ್ಧಾರ

12:43 PM Jan 02, 2018 | Team Udayavani |

ಬೀದರ: ಕಬ್ಬಿನ ಹಣ ಬಾಕಿ ಪಾವತಿ ಸೇರಿದಂತೆ ರೈತರ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಜ.8ರಂದು ಜಿಲ್ಲಾ ಉಸ್ತುವಾರಿ ಸಚಿವರ ಮನೆಗೆ ಮುತ್ತಿಗೆ ಹಾಕಿ ಧರಣಿ ನಡೆಸಲು ಜಿಲ್ಲಾ ರೈತ ಸಂಘ ನಿರ್ಧರಿಸಿದೆ. ನಗರದ ಗಾಂಧಿಗಂಜ್‌ ರೈತ ಭವನದಲ್ಲಿ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ನೇತೃತ್ವದಲ್ಲಿ ನಡೆದ ಪದಾಧಿಕಾರಿಗಳ ಮತ್ತು ರೈತ ಮುಖಂಡರ ಸಭೆಯಲ್ಲಿ ಈ ಕುರಿತು ತೀರ್ಮಾನಿಸಲಾಯಿತು.

Advertisement

ಸಚಿವ ಈಶ್ವರ ಖಂಡ್ರೆ ಅವರು ಈ ಹಿಂದೆ ಸಂಘ ಪ್ರತಿಭಟನೆಗೆ ಮುಂದಾದಾಗ ಕಬ್ಬಿಗೆ 2000 ರೂ. ಮುಂಗಡವಾಗಿ ಕೊಡಿಸುವ ವಾಗ್ಧಾನ ಮಾಡಿದ್ದರು. ಆದರೆ, ಈವರೆಗೆ ಕಾರ್ಖಾನೆಗಳು ಕಬ್ಬು ನುರಿಸುವ ಕಾರ್ಯ ಆರಂಭಿಸಿ ಎರಡು ತಿಂಗಳಾದರೂ ಹಣ ಪಾವತಿಯಾಗಿಲ್ಲ. ಹಾಗಾಗಿ ಈ ಹೋರಾಟ ನಡೆಸಲು ನಿರ್ಣಯಿಸಲಾಯಿತು.
 
ಬಿಎಸ್‌ಎಸ್‌ಕೆ ಕಾರ್ಖಾನೆಗೆ ಬ್ಯಾಂಕ್‌ ಸಾಲ ತಕ್ಷಣ ಕೊಡಬೇಕು. ಕೆಲವು ರೈತರಿಗೆ ಎಂಟಿ ಸಾಲದ ಬಡ್ಡಿ ಮನ್ನಾ ಲಾಭ ಸಿಕ್ಕಿಲ್ಲ. ಅತಿವೃಷ್ಟಿ- ಅನಾವೃಷ್ಟಿ ಹಿನ್ನೆಲೆಯಲ್ಲಿ ರೈತರಿಗೆ ಸಾಲ ಪಾವತಿಸಲು ಸಾಧ್ಯವಾಗಿಲ್ಲ. ಹಾಗಾಗಿ ಅಸಲು ಕಟ್ಟಿದ ಬಡ್ಡಿ ಮನ್ನಾ ಅವಧಿಯನ್ನು ಮಾರ್ಚ್‌ ವರೆಗೆ ಮುಂದೂಡಿ ರೈತರಿಗೆ ನೆರವಾಗಬೇಕು. ರೈತರಿಗೆ ಹೊಸ ಸಾಲ ತಕ್ಷಣ ಕೊಡಿಸಬೇಕು ಎಂದು ಆಗ್ರಹಿಸಲಾಯಿತು.

ಜಿಲ್ಲೆಯ ರೈತರ 10 ಲಕ್ಷ ಕ್ವಿಂಟಲ್‌ ತೊಗರಿ ಖರೀದಿಸಲು ಮತ್ತು ತೊಗರಿ ರಾಶಿಗೆ ಸಮಯಾವಕಾಶ ಇರುವುದರಿಂದ ಮಾರ್ಚ್‌ ವರೆಗೆ ಖರೀದಿ ಚಲಾವಣೆಯಲ್ಲಿಡಲು ಕ್ರಮ ಕೈಗೊಳ್ಳಬೇಕು. ಖರೀದಿ ಕೇಂದ್ರಗಳನ್ನು ಇನ್ನಷ್ಟು ಹೆಚ್ಚಿಸಬೇಕು. ಉದ್ದು, ಹೆಸರು ಮಾರಾಟ ಮಾಡಿರುವ ರೈತರಿಗೆ 2 ತಿಂಗಳಿಂದ ಬಾಕಿ ಉಳಿದಿರುವ ಹಣ ತಕ್ಷಣ ಪಾವತಿಸಬೇಕು ಎಂದು ಒತ್ತಾಯಿಸಲಾಗಿದೆ.

ಸಭೆಯಲ್ಲಿ ಪ್ರಮುಖರಾದ ವೈಜಿನಾಥ ನೌಬಾದೆ, ಸಿದ್ರಾಮಪ್ಪ ಆಣದೂರೆ, ಕೊಂಡಿಬಾರಾವ್‌ ಪಾಂಡ್ರೆ, ಶೇಷರಾವ್‌ ಕಣಜಿ,
ಶೋಭಾದೇವಿ ಕಾರಬಾರಿ, ಶಾಂತಮ್ಮ, ಶ್ರೀಮಂತ ಬಿರಾದಾರ, ವಿಠಲರೆಡ್ಡಿ, ಖಾಸೀಮ್‌ ಅಲಿ, ಬಾಬುರಾವ್‌ ಜೋಳದಾಪಕಾ, ಶಿವಾನಂದ ಹುಡಗಿ, ಶಂಕ್ರೆಪ್ಪ ಪಾರಾ, ಶಿವಶೆಟ್ಟಿ ಚೆಲುವಾ, ಅಮೃತಪ್ಪ, ಪ್ರಕಾಶ ಅಲ್ಮಾಜೆ, ಭವರಾವ್‌ ಪಾಟೀಲ, ಪ್ರವೀಣ ಕುಲಕರ್ಣಿ, ಶಿವಕಾಂತ ನಾಗೂರ, ಮೋಹನರಾವ್‌ ಮರಖಲ್‌, ಸಿದ್ರಾಮ ಬಾಲಕುಂದ, ಶಾಮಣ್ಣ ಬಾವಗಿ, ಶಿವಾನಂದ ಹುಡಗೆ ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next