Advertisement

ಅಭಿವೃದ್ದಿಗೆ ಶ್ರಮಿಸದ ಪುರಸಭೆ ಅಧಿಕಾರಿಗಳು

01:01 PM Sep 27, 2017 | |

ಎಚ್‌.ಡಿ.ಕೋಟೆ: ಅಧ್ಯಕ್ಷರೇ ವಾರ್ಡ್‌ಗಳು ಸ್ವಚ್ಚತೆಯಿಲ್ಲದೆ ಆನೈರ್ಮಲ್ಯ ತಾಣಗಳಾಗಿವೆ, ಸಾವಿರಾರು ರೂ ಖರ್ಚು ಮಾಡಿ ಬೋರ್‌ ಕೊರಿಸಿದ್ದರೂ ಇನ್ನು ವಿದ್ಯುತ್‌ ಸಂಪರ್ಕ ಕೋಡಿಸಿಲ್ಲ, ಇದರಿಂದಾಗಿ ಮನೆ ನಲ್ಲಿಗಳಿಗೆ ನೀರು ಸರಬರಾಜಾಗುತ್ತಿಲ್ಲ, ವಾರ್ಡ್‌ ಬೀದಿ ದೀಪ ಅಳವಡಿಸಿಲ್ಲ ಓಟು ಹಾಕಿದ ಜನರು ನಮ್ಮನ್ನು ನಿಂದಿಸುತ್ತಿದ್ದಾರೆ ಎಂದು ಸದಸ್ಯರು ಕೆಂಡಾಮಂಡಲವಾದರು.

Advertisement

ಅಭಿವೃದ್ಧಿಗೆ ಶ್ರಮಿಸದ ಅಧಿಕಾರಿಗಳು ನಮಗೆ ಬೇಡವೇ ಬೇಡ ಎಂದು ಸದಸ್ಯರು ಸಭೆ ಬಹಿಷ್ಕರಿಸಲು ಮುಂದಾದ ಘಟನೆ ಪುರಸಭೆ ಸಭಾಂಗಣದಲ್ಲಿ ನಡೆಯಿತು.
ವಾರ್ಡ್‌ ಸದಸ್ಯರ ಸಮಸ್ಯೆ ಆಲಿಸಿದ ಅಧ್ಯಕ್ಷೆ ಮಂಜುಳಾ ಮುಖ್ಯಾಧಿಕಾರಿ ಸೇರಿದಂತೆ ಪುರಸಭೆಯ ಎಲ್ಲ ಅಧಿಕಾರಿಗಳನ್ನು ಹಿಗ್ಗಾ ಮುಗ್ಗಾ ತರಟೆ ತಗೆದುಕೊಂಡರು.

ಅಭಿವೃದ್ದಿ ವಿಚಾರದಲ್ಲಿ ಯಾವುದೇ ಕಾರಣಕ್ಕೂ ನಾನು ಸುಮ್ಮನಿರಲ್ಲ. ತಾತ್ಕಾಲಿಕ ಪುಟ್‌ಬಾತ್‌ ನಿರ್ಮಾಣ ಎಸ್ಟಿಮೇಟ್‌ ಎಲ್ಲಿ ಎಂದು ಕೇಳಿದ್ದಕ್ಕೆ ಅಧಿಕಾರಿ ಮೇಡಂ ಅದು ಇದು ಎಂದು ತಡವಾರಿಸಿದ್ದರಿಂದ ಕೆಂಡಮಂಡಲರಾದ ಅಧ್ಯಕ್ಷೆ  ನೋಡ್ರಿ ನೀವು ಕೆಲ್ಸ ಮಾಡಿ, ಇಲ್ಲ ಬೇರೆ ಕಡೆ ವರ್ಗಾವಣೆ ಮಾಡಿಸಿಕೊಂಡು ಹೋಗಿ ಎಂದು ಗುಡುಗಿದರು.

ಗೈರು…?: ಇನ್ನು ಮಾಜಿ ಅಧ್ಯಕ್ಷ ಹಾಲಿ ಸದಸ್ಯರಾದ ಪುಟ್ಟಬಸವನಾಯ್ಕ, ರಾಜಣ್ಣ, ಅನಿಲ್‌, ತಾಜ್‌ ಅವರುಗಳಂತು ಸಭೆಯ ಉದ್ದಕ್ಕೂ ಅಧಿಕಾರಿಗಳ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರೆ, ಇಷ್ಟೇಲ್ಲಾ ಸಭೆಗಳಲ್ಲಿ ಅಧಿಕಾರಿಗಳಿಗೆ ಬೇವರಿಳಿಸುತ್ತಿದ್ದ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಉಮಾಶಂಕರ್‌ ಮಾತ್ರ ಇಂದು ಇವರನ್ನು ಸರಿಪಡಿಸಲು ಆಗಲ್ಲ ಬೀಡಿ ಎಂದು ಮೌನ ವಹಿಸಿದರು. ಇನ್ನು ಉಪಾಧ್ಯಕ್ಷೆ ಸುಮಾ ಸಂತೋಷ್‌ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್‌.ಸಿ.ನರಸಿಂಹಮೂರ್ತಿ ಸಬೆಗೆ ಗೈರಾದರು.

ಆರೋಪ: ಸದಸ್ಯ ತಾಜ್‌ ಬರ ಪರಿಹಾರ ನಿಧಿಯಿಂದ ಕೋರೆದ ಬೋರ್‌ ಗಳಿಗೆ ಕಳಪೆ ವೈರ್‌ ಬಳಸಲಾಗಿದ್ದು, ಬೋರ್‌ಗಳು ತಿಂಗಳಲ್ಲಿ ಎರಡೂ¾ರು ಬಾರಿ ಕೇಡುತ್ತಿವೆ, ಅಧಿಕಾರಿಗಳಾದ ನೀವು ಏನ್‌ ಕೆಲ್ಸ ಮಾಡ್ತಿದ್ದೀರಿ ನೀವು ಹೋಗ್‌ ನೋಡ್‌ ಬೇಕು, ಪದೇ ಪದೇ ಬೋರ್‌ ಕೇಡುತ್ತಿರುವುದರಿಂದ ವಾರ್ಡ್‌ಗಳಲ್ಲಿ ನೀರು ಸರಬರಾಜಿಗೂ ತೊಂದರೆಯಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.

Advertisement

ಕ್ರಮ: ಸದಸ್ಯ ಪುಟ್ಟಬಸವನಾಯ್ಕ ಮಾತನಾಡಿ, ಕಂದಾಯ ಅಧಿಕಾರಿಗಳೇ ಕಳೆದ ಬಾರಿ ಸಂತೆ ಹಾಗೂ ಪುಟ್‌ಬಾತ್‌ ಸುಂಕ ವಸೂಲಿ ಪಡೆದು ಸುಮಾರು 2.5 ಲಕ್ಷ ಪುರಸಭೆಗೆ ವಂಚಿಸಿರುವವರ ಮೇಲೆ ಏನ್‌ ಕ್ರಮ ಆಯ್ತು ಎಂದು ಪ್ರಶ್ನಿಸಿದರು, ಕಂದಾಯ ಅಧಿಕಾರಿ ಸುರೇಶ್‌ ಪೋಲಿಸ್‌ ಠಾಣೆಗೆ ದೂರು ನೀಡಲಾಗಿದೆ ಎಂದರು ಅದಕ್ಕೆ ಸುಮ್ಮನಾಗದ ಸದಸ್ಯರು ಮೂರು ತಿಂಗಳಾಗಿದೆ ಏಕೆ ಇನ್ನು ಕ್ರಮ ಆಗಿಲ್ಲ ಸಮಾನ್ಯ ಜನ ಏನಾದರೂ ಹೀಗೆ ಮಾಡಿದ್ದರೇ ಬಿಡ್ತಿದ್ದರಾ ಎಂದು ಸಿಟ್ಟಾದರು.

ಮಧ್ಯ ಪ್ರವೇಶಿದ ಮುಖ್ಯಾಧಿಕಾರಿ ವಿಜಯ್‌ಕುಮಾರ್‌, ಠಾಣೆಗೆ ದೂರು ನೀಡಲಾಗಿದೆ ಅವರೇ ಬಂದು ಪರಿಶೀಲುಸುವದಾಗಿ ತಿಳಿಸಿದರು. ಸಿಟ್ಟಾದ ಸದಸ್ಯರು ಪೋಲಿಸರು ಅವರನ್ನು ಕರೆದು ವಿಚಾರಣೆ ಕೂಡ ಮಾಡಿಲ್ಲ ನೀವೇ ದೂರು ಪ್ರತಿಗೆ ಪೋಲಿಸ್‌ ಠಾಣೆ ಸಿಲ್‌ ಹಾಕಿಕೊಂಡು ಬಂದಿದ್ದೀರಿ ಇದು ಕಳ್ಳ ಸಿಲೇ ಇರಬೇಕು ಎಂದರು. ಆಗ ಮುಖ್ಯಾಧಿಕಾರಿಗಳು ನಿಮ್ಮನ್ನು ಸೇರಿ 16 ಜನ ಸವಜಾಯಿಸಿ ನೀಡಿದರು.

ಅನ್ಸಾರ್‌ ಅಹಮದ್‌, ವಿವೇಕ್‌, ಉಮಾಶಂಕರ್‌, ತೋಟದ ರಾಜಣ್ಣ, ಮಹೇಶ್ವರಿ ಗುರುಮಲ್ಲು, ಪುಟ್ಟಬಸವನಾಯ್ಕ, ತಾಜ್‌, ರತ್ನಮ್ಮ ಚಲುವನಾಯ್ಕ, ಸುಹಾಸಿನಿ, ಅನಿಲ್‌, ನಾಮ ನಿರ್ದೇಶಿತ ಸದಸ್ಯರಾದ ಜಾnನೇಶ್ವರಿ ಬಾಯಿ, ಕಾರ್‌ ಮಂಜು, ಅಧಿಕಾರಿಗಳಾದ ವೀಣಾ, ಸಿದ್ದಯ್ಯ, ರಘು, ತೇಜಸ್ವಿನಿ, ಹರೀಶ್‌, ಸುರೇಶ್‌ ಇತರರು ಇದ್ದರು.

ಬಾಗಿಲ ಬಳಿ ಕೂತ ಪತಿ: ಇಂದು ಪುರಸಭೆ ಸಬಾಂಗಣದಲ್ಲಿ ಅಧ್ಯಕ್ಷೆ ಮಂಜುಳಾ ಸಮಾನ್ಯ ಸಬೆಯಲ್ಲಿ ಅಧಿಕಾರಿಗಳನ್ನು ಹಿಗ್ಗಾ ಮುಗ್ಗಾ ತರಾಟೆ ತೆಗೆದುಕೊಳ್ಳುತ್ತಿದ್ದರೇ, ಇತ್ತ ಅವರ ಪತಿ ಗೋವಿಂದಚಾರಿ ತಮ್ಮ ಪತ್ನಿ ಆಡಳಿತ ವೈಖರಿಯನ್ನು ಕಚೇರಿಯ ಬಾಗಿಲ ಬಳಿ ಕೂತು ವಿಕ್ಷಿಸುತ್ತಿದ್ದ ದೃಶ್ಯ ವಿಶೇಷವಾಗಿತ್ತು.

ವಾರ್ಡ್‌ಗಳಲ್ಲಿ ಕೆಲ್ಸ ಆಗುತ್ತಿಲ್ಲ ಜನ ನಮ್ಮನ್ನು ಕಂಡ ಕಂಡಲ್ಲಿ ಬೈಯುತ್ತಿದ್ದಾರೆ, ಅಧಿಕಾರಿಗಳಾದ ನೀವು ಪ್ರಮಾಣಿಕವಾಗಿ ಕರ್ತವ್ಯ ನಿರ್ವಹಿಸಿ ಪಟ್ಟಣದ ಅಭಿವೃದ್ಧಿ ಅದಾಗಿಯೇ ಆಗುತ್ತದೆ.
-ತಾಜ್‌, ಸದಸ್ಯರು.

Advertisement

Udayavani is now on Telegram. Click here to join our channel and stay updated with the latest news.

Next