Advertisement

ಮುಂಡ್ಕೂರು ಕಜೆ ಕುಕ್ಕುದಡಿ ಶ್ರೀ ಮಹಾಮ್ಮಾಯಿ ಕ್ಷೇತ್ರ; ಬ್ರಹ್ಮಕಲಶ-ಧಾರ್ಮಿಕ ಸಭೆ

10:20 AM Feb 29, 2024 | Team Udayavani |

ಬೆಳ್ಮಣ್‌: ಕಜೆ ಕುಕ್ಕುದಡಿ ಶ್ರೀ ಮಹಾಮ್ಮಾಯಿ ದೇವಸ್ಥಾನ ಹಾಗೂ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇಗುಲ ಇನ್ನಾ -ಮುಂಡ್ಕೂರು-ಮುಲ್ಲಡ್ಕದ ಎರಡು ಕಣ್ಣುಗಳಂತಿದ್ದು ಈಗ ಕಜೆ ದೇಗುಲ ಸಂಪೂರ್ಣ ಶಿಲಾಮಯಗೊಂಡು ತನ್ನ ಪಾವಿತ್ರತೆಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಧಾರ್ಮಿಕ ವಿದ್ವಾಂಸ ಕಡಂದಲೆ ಸ್ಕಂದ ಪ್ರಸಾದ ಭಟ್‌ ಹೇಳಿದರು.

Advertisement

ಅವರು ಮಂಗಳವಾರ ಸಚ್ಚೇರಿಪೇಟೆಯಲ್ಲಿ ಕಜೆ ಶ್ರೀ ಮಹಾಮ್ಮಾಯಿ ಸಾಂಸ್ಕೃತಿಕ ವೇದಿಕೆಯ ನೇತೃತ್ವದಲ್ಲಿ ಕುಕ್ಕುದಡಿ ಕ್ಷೇತ್ರವೆಂದೇ ಪ್ರಸಿದ್ಧಿ ಹೊಂದಿರುವ ಐತಿಹಾಸಿಕ ಮುಂಡ್ಕೂರು ಕಜೆ ಶ್ರೀ ಮಹಾಮ್ಮಾಯಿ ದೇವಸ್ಥಾನ ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.

ಸೇವಾ ಸಮಿತಿಯ ಸ್ಥಾಪಕ ಅಧ್ಯಕ್ಷ ಸತ್ಯಶಂಕರ ಶೆಟ್ಟಿ ಆಧ್ಯಕ್ಷತೆ ವಹಿಸಿದ್ದು ಸಚ್ಚೇರಿಪೇಟೆಯ ಮಹಾಮ್ಮಾಯೀ ಕಟ್ಟೆಯ ನವೀಕರಣದ ರೂವಾರಿ ರವೀಂದ್ರ ಡಿ. ಪೂಂಜ ಹಾಗೂ ಅವರ ಪುತ್ರ ರೂಪಲ್‌ ಆರ್‌. ಪೂಂಜಾ ಅವರನ್ನು ಸಮ್ಮಾನಿಸಲಾಯಿತು.

ಬ್ರಹ್ಮಕಲಶೋತ್ಸವದ ಮುಂಬಯಿ ಸಮಿತಿಯ ಅಧ್ಯಕ್ಷ ಮುಂಡ್ಕೂರು ಮುಲ್ಲಡ್ಕ ಗುರುಪ್ರಸಾದ್‌ ಸುಧಾಕರ ಶೆಟ್ಟಿ , ಮುಂಬಯಿಯ ಎಲ್‌.ವಿ. ಅಮೀನ್‌, ಕಡಂದಲೆ ಹರಿಶ್ಚಂದ್ರ ಶೆಟ್ಟಿ, ಪ್ರಕಾಶ್‌ಸಪಳಿಗ, ಸಮಿತಿಯ ಅಧ್ಯಕ್ಷ ರಾಜಾರಾಮ ಶೆಟ್ಟಿ, ಮುಂಡ್ಕೂರು ಗ್ರಾಮ ಪಂಚಾಯತ್‌ ಅಧ್ಯಕ್ಷ ದೇವಪ್ಪ ಸಪಳಿಗ, ರಾಮಚಂದ್ರ ನಾಯಕ್‌ ಮತ್ತಿತರರಿದ್ದರು. ಕ್ಷೇತ್ರದ ಗೌರವಾಧ್ಯಕ್ಷ , ಬ್ರಹ್ಮಕಲಶೋತ್ಸವದ ರೂವಾರಿ ಎಂ.ಜಿ. ಕರ್ಕೇರ ಅವರನ್ನು ಹಾಗೂ ಪ್ರಾಯೋಜಕರನ್ನು ಸಮ್ಮಾನಿಸಲಾಯಿತು.

ಸಚ್ಚೇರಿಪೇಟೆ ಸುಧೀರ್‌ ನಾಯಕ್‌ ಹಾಗೂ ಕಡಂದಲೆ ಸುರೇಂದ್ರ ಭಟ್‌ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಬೋಳ ಸುಪ್ರೀತ್‌
ಸಪಳಿಗ ಮತ್ತು ಬಳಗದವರಿಂದ ಭಕ್ತಿಗಾನ ವೈಭವ ನಡೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next