ಲಕ್ನೋ: ಖ್ಯಾತ ಉರ್ದು ಕವಿ ಮುನವ್ವರ್ ರಾಣಾ ಅವರು ಭಾನುವಾರ ಲಕ್ನೋದ ಪಿಜಿಐ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನಹೊಂದಿದರು. ಅವರಿಗೆ 71 ವರ್ಷ ವಯಸ್ಸಾಗಿತ್ತು.
ಮೂತ್ರಪಿಂಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದ ಅವರನ್ನು ಪಿಜಿಐ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತಿತ್ತು ಆದರೆ ಭಾನುವಾರ ಚಿಕಿತ್ಸೆ ಫಲಿಸದೆ ನಿಧನ ಹೊಂದಿದರು ಎಂದು ರಾಣಾ ಅವರ ಪುತ್ರಿ ಸುಮೈಯಾ ರಾಣಾ ಮಾಹಿತಿ ನೀಡಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ತಂದೆಯವರನ್ನು ಮೊದಲು ಲಕ್ನೋದ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿತ್ತು ನಂತರ ಎಸ್‌ಜಿಪಿಜಿಐಗೆ ದಾಖಲಿಸಲಾಯಿತು ಆದರೆ ಭಾನುವಾರ ನಿಧನ ಹೊಂದಿದರು ಎಂದು ಪುತ್ರ ತಬ್ರೇಜ್ ರಾಣಾ ಹೇಳಿದ್ದಾರೆ.
ರಾಣಾ ಅವರು ಪತ್ನಿ, ನಾಲ್ವರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.
ಮುನವ್ವರ ರಾಣಾ ನವೆಂಬರ್ 26, 1952ರಲ್ಲಿ ಉತ್ತರ ಪ್ರದೇಶದ ರಾಯ್ಬರೇಲಿಯಲ್ಲಿ ಜನಿಸಿದ್ದರು. ಅವರ ತಂದೆಯ ಹೆಸರು ಸೈಯದ್ ಅನ್ವರ್ ಅಲಿ ಮತ್ತು ತಾಯಿಯ ಹೆಸರು ಆಯೇಶಾ ಖಾತೂನ್. ದೇಶ ವಿಭಜನೆಯ ಸಮಯದಲ್ಲಿ, ಅವರ ಹೆಚ್ಚಿನ ಸಂಬಂಧಿಕರು ಪಾಕಿಸ್ತಾನಕ್ಕೆ ಹೋಗಿದ್ದರು, ಆದರೆ ಅವರ ತಂದೆ ಭಾರತದಲ್ಲಿ ಉಳಿಯಲು ನಿರ್ಧರಿಸಿದರು.
ಇವರು ಉರ್ದು ಸಾಹಿತ್ಯ, ಕವನಗಳ ಮೂಲಕ ಹೆಚ್ಚು ಜನಪ್ರಿಯತೆಗಳಿಸಿದ್ದರು. ಅದರಲ್ಲೂ ವಿಶೇಷವಾಗಿ ಘಜಲ್ಸ್ ಮೂಲಕ ಖ್ಯಾತಿ ಗಳಿಸಿದ್ದರು. ಅವರ ಅತ್ಯಂತ ಪ್ರಸಿದ್ಧ ಕವಿತೆ ‘ಮಾ’, ಇದು ಸಾಂಪ್ರದಾಯಿಕ ಗಜಲ್ ರೂಪದಲ್ಲಿದ್ದು ತಾಯಿಯ ಸದ್ಗುಣಗಳನ್ನು ಸೂಚಿಸುವಂತ್ತಿದೆ.
ಇದನ್ನೂ ಓದಿ: Vijayanagara ಜಿಲ್ಲೆ: ಎರಡನೇ ಅವಧಿಗೂ ಮುಂದುವರೆದ ಚನ್ನಬಸವನಗೌಡ ಪಾಟೀಲ್