Advertisement
ನವೆಂಬರ್ 18ರಂದು ಘಟನೆ ನಡೆದಿದ್ದು, ಅತ್ಯಾಚಾರ ಘಟನೆಯಿಂದ ಮಾನಸಿಕ ಖನ್ನತೆಗೆ ಒಳಗಾಗಿದ್ದ ಯುವತಿ, ವೈದ್ಯರ ಬಳಿ ಕೌನ್ಸೆಲಿಂಗ್ ಪಡೆದು ಚೇತರಿಸಿಕೊಂಡಿದ್ದು, ತಡವಾಗಿ ದೂರು ನೀಡಿದ್ದಾರೆ. ಯುವತಿ ದೂರು ಆಧರಿಸಿ ಕೇರಳ ಮೂಲದ ಹಯಾನ್ ಬಬೂಲ್ (33) ಎಂಬಾತನ್ನು ಬಂಧಿಸಿರುವ ಅಶೋಕ್ ನಗರ ಠಾಣೆ ಪೊಲೀಸರುತನಿಖೆ ಮುಂದುವರಿಸಿದ್ದಾರೆ.
Related Articles
ಹಯಾನ್ ನನ್ನ ಪಕ್ಕದಲ್ಲಿದ್ದ. ಗಾಬರಿಗೊಂಡು ಆತನಿಂದ ತಪ್ಪಿಸಿಕೊಳ್ಳಲು ಯತ್ನಿಸಿದೆ. ಆದರೆ ಆತ ನನ್ನನ್ನು ಬಿಡದೇ, ಬಲವಂತವಾಗಿ ಅತ್ಯಾಚಾರ ಎಸಗಿದ,’ ಎಂದು ಯುವತಿ ಆರೋಪಿಸಿದ್ದಾಳೆ ಎಂದು
ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
Advertisement
ಘಟನೆಯಿಂದ ಖನ್ನತೆ, ಕೌನ್ಸೆಲಿಂಗ್: “ತರಬೇತಿ ಪೂರ್ಣಗೊಂಡ ಬಳಿಕ ಕೆನಡಾಗೆ ತೆರಳಲು ಸಜ್ಜಾಗಿದ್ದ ನಾನು, ಹಯಾನ್ ಎಸಗಿದ ಕೃತ್ಯದಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದೆ. ಹೀಗಾಗಿ, ಅಂದಿನಿಂದ ಕೆಲಸಕ್ಕೆ ಹೋಗುವುದನ್ನೇ ನಿಲ್ಲಿಸಿಬಿಟ್ಟೆ. ಬಳಿಕ, ಆಪ್ತ ಸಮಾಲೋಚಕರ ಬಳಿ ತೆರಳಿ ಕೌನ್ಸೆಲಿಂಗ್‌ಗೆ ಒಳಗಾದೆ. ನಂತರ ಪೋಷಕರ ಜತೆ ಚರ್ಚಿಸಿ ದೂರು ನೀಡಿದೆ,’ ಎಂದು ಯುವತಿ ಹೇಳಿದ್ದಾರೆ.
ಆರೋಪಿ ಹಯಾತ್ ವಿರುದ್ಧ ಸಂತ್ರಸ್ತೆ ನೀಡಿದ ದೂರಿನ ಅನ್ವಯ ಹೋಟೆಲ್ ಆತನನ್ನು ಕೆಲಸದಿಂದ ತೆಗೆದು ಹಾಕಿತ್ತು. ಆರೋಪಿಗೆ ವಿವಾಹವಾಗಿದ್ದು, ಪತ್ನಿ ಹಾಗೂ ಎರಡು ತಿಂಗಳ ಮಗು ಇದ್ದು, ಅವರು ಕೇರಳಕ್ಕೆ ತೆರಳಿದ್ದರು. ಈ ಸಂಧರ್ಭದಲ್ಲಿ ಯುವತಿಯನ್ನು ಹಯಾತ್ ಮನೆಗೆ ಕರೆಸಿಕೊಂಡಿದ್ದ. ಪಾರ್ಟಿ ಬಳಿಕ ಮದ್ಯದ ಅಮಲಿನಲ್ಲಿ ತಪ್ಪು ನಡೆದಿದೆ ಎಂದು ಆರೋಪಿ ಹೇಳುತ್ತಿದ್ದಾನೆ ಎಂದು ಅಧಿಕಾರಿ ಹೇಳಿದರು.
ಯುವತಿ ಮೇಲಿನ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ.ಡಿ.ದೇವರಾಜು, ಕೇಂದ್ರ ವಿಭಾಗದ ಡಿಸಿಪಿ ಮಂಜುನಾಥ್ ಲಘುಮೇನಹಳ್ಳಿ