Advertisement

ಮುಂಬಯಿಗೆ ದಟ್ಟ ಮಂಜಿನ ಮುಸುಕು; ರೈಲುಗಳು ವಿಳಂಬ

11:21 AM Dec 09, 2017 | Team Udayavani |

ಮುಂಬಯಿ : ಇಂದು ಶನಿವಾರ ಬೆಳಗ್ಗಿನ ಜಾವ ಸಿಹಿ ನಿದ್ದೆಯಿಂದ ಎದ್ದ ಮುಂಬಯಿಗರಿಗೆ ಅತ್ಯಾಶ್ಚರ್ಯಕರವಾಗಿ ಇಡಿಯ ನಗರವನ್ನು ಮುಸುಕಿರುವ ದಟ್ಟನೆಯ ಮಂಜು ಸುಪ್ರಭಾತ ಹೇಳಿತು. 

Advertisement

ಚಳಿಗಾಲದ ಈ ದಿನಗಳಲ್ಲಿ ದೇಶದ ವಿವಿಧೆಡೆ ಬೆಳಗ್ಗಿನ ಜಾವ ಮಂಜು ಮುಸುಕಿದ ವಾತಾವರಣ ಇರುವುದು ಸಹಜ ಮತ್ತು ಸಾಮಾನ್ಯ. ವ್ಯತಿರಿಕ್ತವಾಗಿ ಮುಂಬಯಿ ಮಾತ್ರ ಬೆಳಗ್ಗೆ ಪ್ರಖರ ಸೂರ್ಯನನ್ನು ಕಾಣುವುದೇ ಸಾಮಾನ್ಯ. ಆದರೆ ಇಂದು ಮಾತ್ರ ದಟ್ಟನೆ ಮಂಜು ಮುಸುಕಿದ ವಾತಾವರಣವನ್ನು ಕಂಡು ದಿಗ್ಭ್ರಮೆಗೊಂಡರು.

ದಟ್ಟನೆಯ ಮಂಜಿನಿಂದಾಗಿ ಗೋಚರತೆಯ ಅತ್ಯಂತ ನಿಕೃಷ್ಟ ಮಟ್ಟದಲ್ಲಿ ಇದ್ದುದರಿಂದ ಹಲವಾರು ಲೋಕಲ್‌ ರೈಲುಗಳು ವಿಳಂಬಿತವಾಗಿ ಓಡಾಡುತ್ತಿದ್ದು ಇದರಿಂದ ಪ್ರಯಾಣಿಕರು ತೀವ್ರ ಬವಣೆಗೆ ಗುರಿಯಾದರು. ಕೆಲವೆಡೆ ರೈಲು ಪ್ರಯಾಣಿಕರು ಮಿಂಚಿನ ಪ್ರತಿಭಟನೆಯನ್ನೂ ನಡೆಸಿದರು. ರಸ್ತೆಗಳಲ್ಲಿ ಮೋಟಾರು ವಾಹನಗಳ ಸರತಿಯ ಸಾಲಲ್ಲಿ ನಿಧಾನಗತಿಯಲ್ಲಿ ಸಾಗುತ್ತಿದ್ದುದ್ದು ಕಂಡು ಬಂತು.

“ದಟ್ಟನೆಯ ಮಂಜಿನಿಂದಾಗಿ ರೈಲುಗಳು ನಿಧಾನಗತಿಯಲ್ಲಿವೆ; ದಯವಿಟ್ಟು ತಾಳ್ಮೆ ವಹಿಸಿ ಸಹಕರಿಸಿ’ ಎಂದು ರೈಲ್ವೇ ಇಲಾಖೆ ಮುಂಬಯಿಗರಲ್ಲಿ ಪ್ರಾರ್ಥಿಸಿತು.

ದಟ್ಟನೆಯ ಮಂಜಿನ ಪರಿಣಾಮವಾಗಿ ವಡಾಲಾ ಮತ್ತು ಸಯಾನ್‌ನಲ್ಲಿ ತಾಪಮಾನ ತೀವ್ರವಾಗಿ ಕುಸಿದಿದೆ. ಇಂತಹ ಸ್ಥಿತಿಯಲ್ಲಿ ವಿಮಾನಗಳ ಅವತರಣಕ್ಕಾಗಿ ನಿಲ್ದಾಣ ಅಧಿಕಾರಿಗಳು ವಿಶೇಷ ಉಪಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಯಿತು. 

Advertisement

“ಹೊರವಲಯದ ಕಲ್ಯಾಣ್‌ ಮತ್ತು ಅದಾರಚೆಗಿನ ಪ್ರದೇಶಗಳಲ್ಲಿ ಗೋಚರತೆ ತುಂಬ ಕನಿಷ್ಠ ಮಟ್ಟದಲ್ಲಿದೆ; ಹಾಗಾಗಿ ಹೊರ ವಲಯದ ರೈಲುಗಳು ವಿಳಂಬಿತವಾಗಿ ಓಡಾಡುತ್ತಿವೆ’ ಎಂದು ಸೆಂಟ್ರಲ್‌ ರೈಲ್ವೇಸ್‌ನ ಸಿಪಿಆರ್‌ಓ ಸುನೀಲ್‌ ಉದಾಸಿ ಹೇಳಿದರು. 

ಅನೇಕ ಮುಂಬಯಿ ನಿವಾಸಿಗಳು, ಮಹಾನಗರದ ವಾಯು ಗುಣಮಟ್ಟ ದಿಲ್ಲಿಯಂತೆ ಕುಸಿಯುತ್ತಿರುವುದು ಕಳವಳಕಾರಿಯಾಗಿದೆ; ವಾಯು ಮಾಲಿನ್ಯ ಅತ್ಯಧಿಕ ಮಟ್ಟದಲ್ಲಿದೆ; ಗಗನ ರೇಖೆ ಕಳೆದ ತಿಂಗಳಲ್ಲಿ ಪೂರ್ತಿಯಾಗಿ ಕಪ್ಪನೆಯ ಬಣ್ಣದಲ್ಲಿತ್ತು ಎಂದು ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next