Advertisement

ಮುಂಬಯಿ ವಿವಿ: ಶ್ರೀ ನಾರಾಯಣಗುರು ಕುರಿತು ವಿಶೇಷ ಉಪನ್ಯಾಸ

03:56 PM Aug 23, 2018 | |

ಮುಂಬಯಿ: ನಾರಾಯಣ ಗುರುಗಳ ಸಾಧನಾ ಕಾಲಘಟ್ಟದಲ್ಲಿ ಕೇರಳವು ಹತಾಶ ಸ್ಥಿತಿಯಲ್ಲಿತ್ತು. ನಮ್ಮದು ಹಿಂದೂ, ಸನಾತನ ಧರ್ಮ, ಸರ್ವ ಶ್ರೇಷ್ಠ ಧರ್ಮ, ವಿಶ್ವದಲ್ಲೇ ನಮ್ಮದು ಕುಟುಂಬಸ್ತ ಎಂದೆಲ್ಲಾ ಹೇಳಿಕೊಳ್ಳಬಹುದು.  ಆದರೆ ಧರ್ಮದ ಸೂತ್ರಗಳು ಮಾನವೀಯತೆ ಕಳಕೊಂಡಾಗ ಅದು ಧರ್ಮಗಳಾಗಲ್ಲ. ಎಲ್ಲಿ ತನಕ ದ್ವೇಷ, ಮತ್ಸರ, ಅಸಮಾನತೆ ರಹಿತ ಧರ್ಮಗಳು ಸಾಧ್ಯ ವಿಲ್ಲವೋ ಅಲ್ಲಿ ತನಕ‌ ಯಾವುದೇ ಸಮಾಜದ ಉದ್ಧಾರ ಸಾಧ್ಯವಿಲ್ಲ. ಆದ್ದರಿಂದಲೇ ಉಪನಿಷತ್ತುಗಳನ್ನು ನಾರಾಯಣ ಗುರುಗಳು ಆಯ್ಕೆ ಮಾಡಿ ಸಮಾಜ ಸುಧಾರಣೆಗೆ ನಿಷ್ಠಾವಂತರಾಗಿದ್ದರು ಎಂದು ನಾಡಿನ ಹೆಸರಾಂತ ವಿದ್ವಾಂಸ, ಸಂಶೋಧಕ ಬಾಬು ಶಿವ ಪೂಜಾರಿ ತಿಳಿಸಿದರು.

Advertisement

ಆ. 18ರಂದು ಸಾಂತಾಕ್ರೂಜ್‌ ಪೂರ್ವದ ವಿದ್ಯಾನಗರಿಯ ಜೆ. ಪಿ. ನಾಯಕ್‌ ಸಭಾ ಭವನದಲ್ಲಿ ಪೂರ್ವಾಹ್ನ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದಿಂದ, ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠ ಆಶ್ರಯದಲ್ಲಿ ನಡೆದ ಶ್ರೀ ನಾರಾಯಣ ಗುರು ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಶ್ರೀ ನಾರಾಯಣಗುರು ಸಾಧನಾ ಪಥ ವಿಷಯದಲ್ಲಿ ಮಾತನಾಡಿದ ಅವರು, ಕೇರಳದಲ್ಲಿ ಬಹುಮುಖ್ಯ ಶೋಷಣೆ ಮೇಲುವರ್ಗದಿಂದ ತಳವರ್ಗದವರೆಗೆ ನಡೆಯುತ್ತಿರುವಂತಹ ಕಾಲ. ಕೇರಳ ಹತಾಶ ಸ್ಥಿತಿಗೆ ತಲುಪುವಂತಹ ಕಾಲದಲ್ಲೇ ನಾರಾಯಣ ಗುರುಗಳು ಜನಿಸಿದರು. ವಿಶ್ವವೇ ಒಂದು ಕುಟುಂಬ ಎನ್ನುವಂತಹ ಧರ್ಮ ಅಂದು ಇತ್ತು. ಆದರೂ ಅಂತಹ ಸ್ಥಿತಿ ಏಕಾಯ್ತು ಎಂದು ಚಿಂತಿಸತಕ್ಕ ವಿಷಯವಾಗಿದೆ. ಧರ್ಮದ ಸೂತ್ರ ಎಷ್ಟು ಘನತರವಾಗಿದ್ದರೂ ಮಾನವೀಯತೆ ಇಲ್ಲದೆ ಹೋದಾಗ ಯಾವುದೇ ಸಮುದಾಯ ಅಥವಾ ವ್ಯಕ್ತಿ ಉದ್ಧಾರವಾಗದು. ಇದನ್ನೆಲ್ಲಾ ಅರಿತ ಅವರು ಉಪನಿಷತ್ತನ್ನು ಆಳವಾಗಿ ಅಧ್ಯಯನ ಮಾಡಲು ತೊಡಗಿದರು. ದ್ವೈತವೇ ಆಗಲಿ ಅದ್ವೈತವೇ ಆಗಲಿ ಉಪನಿಷತ್ತು ಯಾವುದರಲ್ಲೂ ಭೇದವನ್ನು ಮಾಡಲ್ಲ. ನಾರಾಯಣ ಗುರುಗಳ ಈ ಅಧೆÌ$çತವನ್ನು ಬೇರೆಬೇರೆ ಮೂಲಗಳಿಂದ ಕಲಿತುಕೊಂಡರು. ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು ಎಂಬುದನ್ನು ನಾರಾಯಣ ಗುರುಗಳು ಪ್ರತಿಪಾದಿಸಿದರು ಎಂದು ನುಡಿದರು.

ಮುಂಬಯಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ. ಎನ್‌. ಉಪಾಧ್ಯ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತದ ಸಾಮಾಜಿಕ ಸುಧಾರಕರಾಗಿದ್ದ ನಾರಾಯಣಗುರು ಕೇರಳದಲ್ಲಿ ಸುಧಾರಣೆ ಚಳುವಳಿ ನಡೆಸಿದ್ದರು.  ಹಿಂದುಳಿದ ಸಮಾಜಗಳು ಸಹಿಸಲಾಗದ ಅನ್ಯಾಯ ಎದುರಿಸುತ್ತಿದ್ದಾಗ ನಾರಾಯಣ ಗುರು ಹೇಗೆ ಸಮಾಜ ಬದಲಾವಣೆಗೆ ಪಣತೊಟ್ಟರು ಎನ್ನುವುದು ತಿಳಿಯುವ ಅಗತ್ಯ ಸದ್ಯಕ್ಕಿದೆ. ಜಾತಿ ತಣ್ತೀವನ್ನು ತಿರಸ್ಕರಿಸಿ ಆಧ್ಯಾತ್ಮಿಕ ಸ್ವಾತಂತ್ರÂ ಮತ್ತು ಸಾಮಾಜಿಕ ಸಮಾನತೆಯ ಹೊಸ ಮೌಲ್ಯಗಳನ್ನು ಪ್ರೋತ್ಸಾಹಿಸಿದ ಇಂತಹ ಮಹಾನ್‌ ಪುರುಷರ ಅಧ್ಯಯನ ಪ್ರಸಕ್ತ ಯುವ ಜನತೆಗೆ ಅಗತ್ಯವಾಗಬೇಕು ಎಂದರು.

ಬ್ರಹ್ಮಶ್ರೀ ನಾರಾಯಣಗುರು  ಅಧ್ಯಯನ ಪೀಠ ಮಂಗಳೂರು ವಿಶ್ವವಿದ್ಯಾಲಯದ ನಿರ್ದೇಶಕ ಮುದ್ದು ಮೂಡುಬೆಳ್ಳೆ ಪ್ರಸ್ತಾವನೆಗೈದು, ನಾರಾಯಣಗುರು ಬರೇ ಸಂತ ಸನ್ಯಾಸಿಯಲ್ಲ, ಬದಲಾವಣೆಗಳ ಹರಿಕಾರರಾಗಿ ಸಮಾಜ ಸುಧಾರಕರಾಗಿ ಶ್ರಮಿಸಿದ್ದರು. ಮಹಾನ್‌ ದಾರ್ಶನಿಕರಾಗಿದ್ದ ಅವರ ಜೀವನ ಉತ್ತರ ಭಾರತದಲ್ಲೂ ನಾರಾಯಣ ಉಲ್ಲೇಖವಾಗಿವೆ. ಗುರುವರ್ಯರು ಹಲವಾರು ಭಾಷೆಗಳಲ್ಲಿ ಸಾಹಿತ್ಯ ರಚಿಸಿ ಸಮಾಜಕ್ಕೆ ನ್ಯಾಯ ಒದಗಿಸಿದ್ದರು. ಸಾಮರಸ್ಯದ ಬಾಳಿಗಾಗಿ ಒಳಿತನ್ನು ಯುವ ಸಮಾಜಕ್ಕೆ ವಿಸ್ತರಿಸಿದವರು. ತಳಸ್ಪರ್ಶಿಯಾಗಿ ಸುಧಾರೀಕರಿಸಿದ  ಅವರ ಪಾಂಡಿತ್ಯವೂ ಅನನ್ಯವಾದುದು ಎಂದರು.

ಆಳ್ವಾಸ್‌ ಕಾಲೇಜು ಮೂಡಬಿದ್ರೆ ಇದರ ಪ್ರಾಧ್ಯಾಪಕ ಡಾ| ಯೋಗೀಶ್‌ ಕೈರೋಡಿ, ವಿವಿ ಪೀಠಗಳ ಸಂಯೋಜಕ ಮತ್ತು ಉಪ ಕುಲಸಚಿವ ಪ್ರಭಾಕರ ನೀರುಮಾರ್ಗ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ| ಉಪಾಧ್ಯ ಅವರು ಬಾಬು ಶಿವ ಪೂಜಾರಿ ಅವರನ್ನು ಶಾಲು ಹೊದೆಸಿ ಗ್ರಂಥಗೌರವ ಪ್ರದಾನಿಸಿ ಗೌರವಿಸಿದರು. ಮುಂಬಯಿ ವಿಶ್ವವಿದ್ಯಾಲಯ ಕನ್ನಡ  ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಸುಧಾಕರ್‌ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. 

Advertisement

ಚಿತ್ರ -ವರದಿ : ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next