Advertisement

ಮುಂಬಯಿ ವಿವಿ ಕನ್ನಡ ವಿಭಾಗ: ಸಾಹಿತ್ಯ ಸಂವಾದ ಕಾರ್ಯಕ್ರಮ

04:21 PM Feb 16, 2018 | Team Udayavani |

ಮುಂಬಯಿ: ನೆಲದ ಜನಪದದಲ್ಲಿ ಶ್ರೇಷ್ಠತೆಯಿದೆ. ಇವತ್ತು ನಾವು ಪ್ರೀತಿ ಗೌರವ ವನ್ನು ಕಳೆದುಕೊಳ್ಳುತ್ತಿದ್ದೇವೆ. ಅದನ್ನು ಬರೆಯು ತ್ತಿದ್ದೇವೆ, ಆದರೆ ಬದುಕುತ್ತಿಲ್ಲ. ಬಾಂಧವ್ಯಕ್ಕೆ ಗೋಡೆಯನ್ನು ಕಟ್ಟಿಕೊಳ್ತಾ ಇದ್ದೇವೆ. ಆ ಪ್ರೀತಿ ಕಟ್ಟುವ ಕ್ಷೇತ್ರ ಅಂದರೆ ಅದು ಸಾಹಿತ್ಯ ಕ್ಷೇತ್ರ ಮಾತ್ರ. ರಾಜಕೀಯ ಮನಸನ್ನು ಕೆಡಿಸುತ್ತದೆ ಆದರೆ ಸಂಗೀತ ಮನಸ್ಸನ್ನು ಕಟ್ಟುತ್ತದೆ. ನಾವು ನೈಜತೆಯ ಕಾಲವನ್ನು ಮರೆಯುತ್ತಿದ್ದೇವೆ. ತಾಂತ್ರಿಕತೆಯನ್ನು ಅಳವಡಿಸುತ್ತಿದ್ದೇವೆ. ಎದೆಯಿಂದ ಎದೆಗೆ ಬರುವುದು ಜಾನಪದ ಸಂಸ್ಕೃತಿ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಅಂತಾರಾಷ್ಟ್ರೀಯ ಜಾನಪದ ಕಲಾವಿದ ಡಾ| ಅಪ್ಪಗೆರೆ ತಿಮ್ಮರಾಜು ಅವರು ನುಡಿದರು.

Advertisement

ಇತ್ತೀಚೆಗೆ ಕನ್ನಡ ವಿಭಾಗ, ಮುಂಬಯಿ ವಿಶ್ವವಿದ್ಯಾಲಯ ಆಯೋಜಿಸಿದ್ದ ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಇವರು, ಜಾನಪದ ಎದೆಯ ಸಂಸ್ಕೃತಿ,  ನಾವು ಇಂದು ಸಂಸ್ಕೃತಿಯನ್ನು ತಲೆಯಿಂದ ತಲೆಗೆ ದಾಟಿಸುತ್ತಿದ್ದೇವೆ. ಇದು ಕಿವಿಯಿಂದ ಎದೆಗೆ, ಎದೆಯಿಂದ ಎದೆಗೆ ಆದಿಕಾಲದ ಸಂಸ್ಕೃತಿ ಅನಂತಕಾಲದ ಸಂಸ್ಕೃತಿಯಾಗಬೇಕು. ಮೂಲ ನಂಬಿಕೆಗಳು ಬೇಕು. ಮೂಢನಂಬಿಕೆಗಳು ಬೇಡ. ಪ್ರೀತಿ-ಗೌರವವನ್ನು ಕಟ್ಟಿದವರು ಜನಪದರು ಎಂಬುದಾಗಿ ಅನೇಕ ಜಾನಪದ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಅವುಗಳ ಮಹತ್ವವನ್ನು ಕುರಿತು ತಿಳಿ ಹೇಳಿದರು.

ಉಪಯೋಗ ಪಡೆಯಲು ಕರೆ 
ಕನ್ನಡ ಸಾಹಿತ್ಯ ಪರಿಷತ್ತಿನ ಸಂಯೋಜನಾ ಧಿಕಾರಿಯಾಗಿರುವ ಬಿ. ಎಸ್‌. ಪರಡ್ಡಿ ಅವರು ಮಾತನಾಡಿ, ಸರಕಾರದ ವಿವಿಧ ಕಾರ್ಯಕ್ರಮಗಳ, ಯೋಜನೆಗಳ ವಿವಿಧ ಹಂತಗಳು, ಸೌಲಭ್ಯಗಳ ಕುರಿತು ತಿಳಿಸಿದರು. ಹೊರನಾಡ ಕನ್ನಡಿಗರಿಗೆ ಲಭ್ಯವಿರುವ ಸವಲತ್ತುಗಳ ಬಗ್ಗೆ ತಿಳಿಸುತ್ತಾ ಅದರ ಉಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಂಘಟಕ, ಕುವೆಂಪು  ಅವರ ಅಭಿಮಾನಿ ಕುವೆಂಪು ಪ್ರಕಾಶ್‌  ಅವರು ಮಾತನಾಡಿ, ವಿದೇಶದಲ್ಲಿ ನಮ್ಮ ಸಂಸ್ಕೃತಿಗೆ  ಹೆಚ್ಚು ಬೇಡಿಕೆ ಇದೆ. ಕನ್ನಡಿಗರಿಗೆ, ಕಲಾಸಕ್ತರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವೇದಿಕೆ ಕಲ್ಪಿಸಿಕೊಡುವ ಕಾರ್ಯದಲ್ಲಿ ಕಳೆದ ಹಲವಾರು ವರ್ಷಗಳಿಂದ ನಿರತನಾಗಿದ್ದೇನೆ. ನಮ್ಮ ಸಂಸ್ಕೃತಿಯನ್ನು ವಿದೇಶದ ನೆಲದಲ್ಲಿ ಬಿತ್ತರಿಸಿ ಅವರಿಗೆ ನಮ್ಮ ಸಾಹಿತ್ಯ, ಕಲೆಯ ಮೇಲೆ ಪ್ರೀತಿ ಮೂಡಿಸುವ ಕಾರ್ಯವನ್ನು ಮಾಡುವುದು ನಮ್ಮ ಉದ್ದೇಶ ಎಂದು ನುಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ| ಜಿ. ಎನ್‌. ಉಪಾಧ್ಯ ಅವರು ಮಾತನಾಡಿ,  ಹೊರನಾಡಾದ ಮುಂಬಯಿ ಕನ್ನಡ ಭಾಷೆ, ಸಾಹಿತ್ಯ ಸಂಸ್ಕೃತಿಗೆ ಮುಂಬಯಿ ಮಹತ್ವದ ಕಾಣಿಕೆಯನ್ನು ಕೊಟ್ಟಿದೆ. ಮುಂಬಯಿ ಒಂದು ಸಾಂಸ್ಕೃತಿಕ ನಗರ. ಇಲ್ಲಿನದು ನಗರ ಜಾನಪದ. ವಲಸೆ ಬಂದ ಕನ್ನಡಿಗರು ತಮ್ಮ ಅಸ್ಮಿತೆಯನ್ನು ಉಳಿಸಿಕೊಂಡಿದ್ದಾರೆ. ಕನ್ನಡ ವಿಭಾಗ ಕಳೆದ ನಾಲ್ಕು ದಶಕಗಳಿಂದ ವಿಭಾಗದಲ್ಲಿ ಕನ್ನಡ ಪ್ರಸಾರ ಪ್ರಚಾರದಲ್ಲಿ ನಿರತವಾಗಿದೆ. ಡಾ| ಅಪ್ಪಗೆರೆ ತಿಮ್ಮರಾಜು ಅವರಂತಹ ಅಪ್ಪಟ ಕಲಾವಿದರು ಸಂಘಟಕರು ವಿಭಾಗದ ಮೇಲಿನ ಪ್ರೀತಿಯಿಂದ ವಿಭಾಗಕ್ಕೆ ಭೇಟಿ ನೀಡಿರುವುದು ಸಂತೋಷದ ಸಂಗತಿ ಎಂದು ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು.

Advertisement

ಇದೇ ಸಂದರ್ಭದಲ್ಲಿ ಕನ್ನಡ ಪರಿಚಾರಿಕೆಗೈದ ಮೇರಿ ಪಿಂಟೊ ಅವರನ್ನು ಡಾ| ಅಪ್ಪಗೆರೆ ತಿಮ್ಮರಾಜು ಅವರು ಸಮಸ್ತ ಕನ್ನಡಿಗರ ಪರವಾಗಿ ಗೌರವಿಸಿದರು. ವಿಭಾಗದ ಸಹಪ್ರಾಧ್ಯಾಪಕರಾದ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. 

ವಿಭಾಗದ ಸಂಶೋಧನ ಸಹಾಯಕರಾದ ಶಿವರಾಜ್‌ ಎಂ. ಜಿ, ನಳಿನಾ ಪ್ರಸಾದ್‌, ದಿನಕರ ನಂದಿ ಚಂದನ್‌, ಸುರೇಖಾ ಶೆಟ್ಟಿ, ಅಮೃತಾ ಶೆಟ್ಟಿ, ಸುಧೀರ್‌ ದೇವಾಡಿಗ, ಗಣಪತಿ ಮೊಗವೀರ, ಅನಿತಾ ಪೂಜಾರಿ, ಉದಯ ಶೆಟ್ಟಿ, ಲಕ್ಷಿ¾à ಪೂಜಾರಿ, ಜಯಕರ್‌ ಪಾಲನ್‌ ಮೊದಲಾದವರು ಸಂವಾದದಲ್ಲಿ ಪಾಲ್ಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next