ಮುಂಬೈ: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ, ಬರಹಗಾರ ಪ್ರಿತೀಶ್ ನಂದಿ ಬುಧವಾರ (ಜ.8) ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ ಎಂದು ಕುಟುಂಬ ಮೂಲಗಳು ಮಾಹಿತಿ ನೀಡಿವೆ. ಅವರಿಗೆ 73 ವರ್ಷ ವಯಸ್ಸಾಗಿತ್ತು.
ಝಂಕಾರ್ ಬೀಟ್ಸ್, ಚಮೇಲಿ, ಹಜಾರೋನ್ ಖ್ವಾಯಿಶೆ ಐಸಿ, ಏಕ್ ಖಿಲಾಡಿ ಏಕ್ ಹಸೀನಾ, ಪ್ಯಾರ್ ಕೆ ಸೈಡ್ ಎಫೆಕ್ಟ್ಸ್, ಬೋ ಬ್ಯಾರಕ್ಸ್ ಫಾರೆವರ್, ಮುಂತಾದ ಹಲವಾರು ಯಶಸ್ವಿ ಚಲನಚಿತ್ರಗಳನ್ನು ನಿರ್ಮಿಸಿದ್ದರು.
ನಂದಿ ಅವರ ಅಗಲಿಕೆಗೆ ಅವರ ಆತ್ಮೀಯ ಗೆಳೆಯ ನಟ ಅನುಪಮ್ ಖೇರ್ ದುಃಖ್ಖ ವ್ಯಕ್ತಪಡಿಸಿದ್ದಾರೆ ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ‘ನನ್ನ ಆತ್ಮೀಯ ಸ್ನೇಹಿತರಲ್ಲೊಬ್ಬರಾದ ಪ್ರಿತೀಶ್ ನಂದಿ ಅವರ ನಿಧನದ ಬಗ್ಗೆ ತಿಳಿದು ನನಗೆ ತುಂಬಾ ದುಃಖವಾಗಿದೆ ಮತ್ತು ಆಘಾತವಾಗಿದೆ. ನಂದಿ ಅವರೊಬ್ಬ ಅದ್ಭುತ ಕವಿ, ಬರಹಗಾರ, ಚಲನಚಿತ್ರ ನಿರ್ಮಾಪಕ ಮತ್ತು ಕೆಚ್ಚೆದೆಯ ಪತ್ರಕರ್ತ ಎಂದು ಸ್ಮರಿಸಿದ್ದಾರೆ.
1990 ರ ಅವಧಿಯಲ್ಲಿ ಪತ್ರಕರ್ತರಾಗಿದ್ದ ನಂದಿ ಅವರು ದೂರದರ್ಶನದಲ್ಲಿ ‘ದಿ ಪ್ರಿತಿಶ್ ನಂದಿ ಶೋ’ ಎಂಬ ಟಾಕ್ ಶೋ ಅನ್ನು ಆಯೋಜಿಸಿದ್ದರು ಈ ಕಾರ್ಯಕ್ರಮದಲ್ಲಿ ಅವರು ಹಲವು ಸೆಲೆಬ್ರಿಟಿಗಳನ್ನು ಕರೆದು ಸಂದರ್ಶಿಸುತ್ತಿದ್ದರು. ಇದಾದ ಬಳಿಕ 2000 ರ ಆರಂಭದಲ್ಲಿ ಪ್ರಿತೀಶ್ ನಂದಿ ಕಮ್ಯುನಿಕೇಷನ್ಸ್ ಬ್ಯಾನರ್ ಅಡಿಯಲ್ಲಿ ಹಲವು ಸಿನಿಮಾಗಳನ್ನು ನಿರ್ಮಿಸಿದ್ದರು ಅಷ್ಟುಮಾತ್ರವಲ್ಲದೆ, ‘ಫೋರ್ ಮೋರ್ ಶಾಟ್ಸ್ ಪ್ಲೀಸ್’ ಮತ್ತು ‘ಮಾಡರ್ನ್ ಲವ್ ಮುಂಬೈ’ ವೆಬ್ ಸರಣಿಯನ್ನೂ ನಿರ್ಮಿಸಿದ್ದರು.