Advertisement
ಚಿನ್ನದ ದರ ಏರಿಕೆ: ದಿಲ್ಲಿ ಶನಿವಾರ ಮಾರುಕಟ್ಟೆಯಲ್ಲಿ ಚಿನ್ನದ ದರ 514 ರೂ. ಹೆಚ್ಚಳವಾಗಿದ್ದು, 10 ಗ್ರಾಂಗೆ 48,847ಕ್ಕೇರಿಕೆಯಾಗಿದೆ. ಬೆಳ್ಳಿ ದರ 1046 ರೂ. ಹೆಚ್ಚಳವಾಗಿ, ಕೆಜಿಗೆ 63,612 ರೂ.ಗೆ ತಲುಪಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಮಂಗಳವಾರ 8 ಪೈಸೆ ಇಳಿಕೆಯಾಗಿ, 73.63 ಆಗಿದೆ.
ನವೆಂಬರ್ ತಿಂಗಳಲ್ಲಿ ದೇಶದ ರಫ್ತು ಪ್ರಮಾಣ ಶೇ.8.74ರಷ್ಟು ಇಳಿಕೆ ಯಾಗಿದ್ದು, 23.52 ಶತಕೋಟಿ ಡಾಲರ್‌ಗೆ ತಲುಪಿದೆ ಎಂದು ಅಧಿಕೃತ ಅಂಕಿಅಂಶ ತಿಳಿಸಿದೆ. ಪೆಟ್ರೋಲಿಯಂ, ಎಂಜಿನಿಯರಿಂಗ್, ರಾಸಾ ಯನಿಕ, ಆಭರಣ ಕ್ಷೇತ್ರಗಳ ಮೇಲೆ ಕೊರೊನಾ ಲಾಕ್‌ಡೌನ್‌ನಿಂದಾದ ಪ್ರತಿಕೂಲ ಪರಿಣಾಮವೇ ರಫ್ತು ಇಳಿಕೆಗೆ ಕಾರಣ ಎನ್ನಲಾಗಿದೆ. ಆರ್ಥಿಕ ಪ್ರಗತಿ ಹೆಚ್ಚಳದ ನಿರೀಕ್ಷೆ
ಎಸ್ ಆ್ಯಂಡ್ ಪಿ ಜಾಗತಿಕ ರೇಟಿಂಗ್ಸ್ ಸಂಸ್ಥೆಯು ಪ್ರಸ್ತುತ ಹಣಕಾಸು ವರ್ಷದ ಭಾರತದ ಆರ್ಥಿಕ ಪ್ರಗತಿ ದರದ ನಿರೀಕ್ಷೆಯನ್ನು ಹೆಚ್ಚಳ ಮಾಡಿದೆ. ಈ ಹಿಂದೆ ಜಿಡಿಪಿ ದರವನ್ನು ಮೈನಸ್ 9 ಎಂದು ಅಂದಾಜಿಸಿದ್ದ ಸಂಸ್ಥೆ ಈಗ ಅದನ್ನು ಮೈನಸ್ 7ಕ್ಕೆ ಏರಿಸಿದೆ. ಉತ್ಪನ್ನಗಳು ಹಾಗೂ ಸೇವೆಗಳ ಬೇಡಿಕೆ ಹೆಚ್ಚಳ ಮತ್ತು ಕೊರೊನಾ ಪ್ರಕರಣಗಳ ಇಳಿಕೆಯಿಂದಾಗಿ ಆರ್ಥಿಕತೆ ಬೇಗನೆ ಚೇತರಿಸಿಕೊಳ್ಳಲಿದೆ ಎಂದು ಸಂಸ್ಥೆ ಹೇಳಿದೆ. 2021-22ರಲ್ಲಿ ಜಿಡಿಪಿ ಶೇ.10ಕ್ಕೇರಲಿದೆ ಎಂದೂ ಅಂದಾಜಿಸಿದೆ.