ಮುಂಬಯಿ : ಜನವರಿ ತಿಂಗಳ ಗ್ರಾಹಕ ಬೆಲೆ ಸೂಚ್ಯಂಕ ಆಶಾದಾಯಕವಾಗಿರುವುದೆಂಬ ನಂಬಿಕೆಯಲ್ಲಿ ಇಂದು ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 17.37 ಅಂಕಗಳ ಅಲ್ಪ ಮುನ್ನಡೆಯನ್ನು ಸಾಧಿಸಿ ಸೋಮವಾರದ ವಹಿವಾಟನ್ನು 28,351.62 ಅಂಕಳ ಮಟ್ಟದಲ್ಲಿ ಕೊನೆಗೊಳಿಸಿದೆ.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 11.50 ಅಂಕಗಳ ಮುನ್ನಡೆಯನ್ನು ಸಾಧಿಸಿ ದಿನದ ವಹಿವಾಟನ್ನು 8,805.05 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಮಹೀಂದ್ರ, ಇನ್ಫೋಸಿಸ್, ಎಚ್‌ಯುಎಲ್, ವಿಪ್ರೋ, ಎನ್‌ಟಿಪಿಸಿ, ಈಶರ್ ಮೋಟರ್, ಎಸ್ ಬ್ಯಾಂಕ್, ಟಾಟಾ ಪವರ್ ಮತ್ತು ಕೋಟಕ್ ಮಹೀಂದ್ರ ಬ್ಯಾಂಕ್ ಶೆàರುಗಳ ಧಾರಣೆ ಶೇ.1ರಿಂದ 3.5 ರಷ್ಟು ಏರಿತು.
ಆದರೆ ಎಸ್‌ಬಿಐ, ಬಿಎಚ್‌ಇಎಲ್, ಮಾರುತಿ ಸುಜುಕಿ, ಹೀರೋ ಮೋಟೋ ಕಾರ್ಪ್, ಕೋಲ್ ಇಂಡಿಯಾ, ಐಡಿಯಾ ಸೆಲ್ಯುಲರ್ ಮತ್ತು ಅರಬಿಂದೋ ಫಾರ್ಮಾ ಶೇರುಗಳು ಶೇ.1ರಿಂದ ಶೇ.3ರಷ್ಟು ಕುಗ್ಗಿದವು.
ಬ್ಯಾಂಕ್ ಆಫ್ ಬರೋಡಾ ಶೇರುಗಳು ಇಂದು ಶೇ.10ರಷ್ಟು ಕುಸಿದದ್ದು ಗಮನಾರ್ಹವೆನಿಸಿತು.