ಮುಂಬಯಿ : ಎಪ್ರಿಲ್ ತಿಂಗಳ ವಾಯಿದೆ ವಹಿವಾಟು ಚುಕ್ತಾ ಮಾಡುವ ತಿಂಗಳ ಕೊನೇ ಗುರುವಾರಕ್ಕೆ ಇನ್ನು ಎರಡೇ ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಹಾಗೂ ಏಶ್ಯನ್ ಶೇರು ಮಾರುಕಟ್ಟೆಗಳಲ್ಲಿ ಮಿಶ್ರ ಪ್ರವೃತ್ತಿ ತೋರಿ ಬಂದಿರುವುದನ್ನು ಅನುಸರಿಸಿ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 78 ಅಂಕಗಳ ಮುನ್ನಡೆಯನ್ನು ದಾಖಲಿಸಿತು. ಸೆನ್ಸೆಕ್ಸ್ ಕಳೆದ ಶುಕ್ರವಾರದ ವಹಿವಾಟಿನಲ್ಲಿ 11.71 ಅಂಕಗಳ ನಷ್ಟಕ್ಕೆ ಗುರಿಯಾಗಿತ್ತು.
ಬೆಳಗ್ಗೆ 10.51ರ ಹೊತ್ತಿಗೆ ಸೆನ್ಸೆಕ್ಸ್ 126.91 ಅಂಕಗಳ ಮುನ್ನಡೆಯನ್ನು ಸಾಧಿಸಿ 34,542.49 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯ,ಕ 42.90 ಅಂಕಗಳ ಮುನ್ನಡೆಯೊಂದಿಎ 10,606.90 ಅಂಕಗಳ ಮಟ್ಟದಲ್ಲೂ ಆಶಾದಾಯಕವಾಗಿ ವ್ಯವಹಾರ ನಿರತವಾಗಿದ್ದವು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಟಿಸಿಎಸ್, ಎಚ್‌ಸಿಎಲ್ ಟೆಕ್, ಟೆಕ್ ಮಹೀಂದ್ರ, ಎಸ್ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್ ಶೇರುಗಳು ಟಾಪ್ ಗೇನರ್ ಎನಿಸಿಕೊಂಡರೆ, ಭಾರ್ತಿ ಇನ್‌ಫ್ರಾಟೆಲ್, ಒಎನ್‌ಜಿಸಿ, ಹೀರೋ ಮೋಟೋ ಕಾರ್ಪ್, ಹಿಂಡಾಲ್ಕೊ, ಎಚ್‌ಯುಎಲ್ ಶೇರುಗಳು ಟಾಪ್ ಲೂಸರ್‌ಗಳಾಗಿ ಹಿನ್ನಡೆಗೆ ಗುರಿಯಾದವು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಒಟ್ಟು 2,309 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; 1,276 ಶೇರುಗಳು ಮುನ್ನಡೆ ಸಾಧಿಸಿದವು; 899 ಶೇರುಗಳು ಹಿನ್ನಡೆಗೆ ಗುರಿಯಾದವು; 134 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.
ಡಾಲರ್ ಎದುರು ರೂಪಾಯಿ ನಿರಂತರ ಆರನೇ ದಿನದ ಕುಸಿತವಾಗಿ ಇಂದಿನ ವಹಿವಾಟಿನಲ್ಲಿ ನಾಲ್ಕು ಪೈಸೆ ಕುಸಿದು 66.16ರೂ. ಮಟ್ಟದಲ್ಲಿ ಸ್ಥಿತವಾಯಿತು.