ಮುಂಬಯಿ : ನಿರಂತರ ಮೂರನೇ ದಿನವೂ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಹಿನ್ನಡೆಯನ್ನು ಕಂಡಿದೆ.
ಇಂದು ಸೋಮವಾರದ ವಹಿವಾಟನ್ನು ಸೆನ್ಸೆಕ್ಸ್ 47.79 ಅಂಕಗಳ ನಷ್ಟದೊಂದಿಗೆ 29,413.66 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.
ಇದೆ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡ 11.50 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 9,139.30 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದು ಸೆನ್ಸೆಕ್ಸ್ ಕಂಡಿರುವ 29,414 ಅಂಕಗಳ ಮಟ್ಟವು ಕಳೆದ ಮೂರು ವಾರಗಳ ಕನಿಷ್ಠ ಮಟ್ಟವಾಗಿದೆ. ರಖಂ ಬೆಲೆ ಸೂಚ್ಯಂಕ ಸುಧಾರಿಸಿರುವ ಹೊರತಾಗಿರುವ ಶೇರು ಮಾರುಕಟ್ಟೆ ನಷ್ಟ ಕಂಡಿರುವುದು ಗಮನಾರ್ಹವಾಗಿದೆ. ಕೊರಿಯ, ಅಫ್ಘಾನಿಸ್ಥಾನ ಮತ್ತು ಸಿರಿಯದಲ್ಲಿನ ಹಿಂಸೆ, ಅಶಾಂತಿ ಹಾಗೂ ಅಸ್ಥಿರತೆಯ ಕರಿ ಛಾಯೆ ವಿಶ್ವಾದ್ಯಂತದ ಶೇರು ಮಾರುಕಟ್ಟೆಗಳ ಮೇಲೆ ಬಿದ್ದಿದೆ.
ನಿಫ್ಟಿಯಲ್ಲಿ ಇಂದಿನ ಟಾಪ್ ಗೇನರ್‌ಗಳು ಇಂತಿವೆ : ಗೇಲ್, ಗ್ರಾಸಿಂ, ರಿಲಯನ್ಸ್, ಪವರ್ ಗ್ರಿಡ್, ಕೋಟಕ್ ಮಹೀಂದ್ರ. ಟಾಪ್ ಲೂಸರ್‌ಗಳು : ಎನ್‌ಟಿಪಿಸಿ, ಭಾರ್ತಿ ಇನ್‌ಫ್ರಾಟೆಲ್, ಸನ್ ಫಾರ್ಮಾ, ಬಾಶ್ ಮತ್ತು ಟೆಕ್ ಮಹೀಂದ್ರ.
ಇಂದು ವಹಿವಾಟಿಗೆ ಒಳಪಟ್ಟ ಶೇರುಗಳ ಪೈಕಿ 1,505 ಶೇರುಗಳು ಮಾತ್ರವೇ ಮುನ್ನಡೆ ಸಾಧಿಸಿದ್ದು 1,409 ಶೇರುಗಳು ಹಿನ್ನಡೆಗೆ ಗುರಿಯಾದವು; 171 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.