Advertisement

ಭಾರೀ ಮೊತ್ತದ ಷೇರುಗಳ ಹೊರಹರಿವು

12:49 AM Apr 25, 2022 | Team Udayavani |

ಹೊಸದಿಲ್ಲಿ: ಅಮೆರಿಕದ ಫೆಡರಲ್‌ ರಿಸರ್ವ್‌ ಸಾಲದ ಮೇಲಿನ ಬಡ್ಡಿ ದರ ಏರಿಕೆ ಮಾಡಲಿದೆ ಎಂಬ ಭೀತಿಯು ವಿದೇಶಿ ಹೂಡಿಕೆದಾರರನ್ನು ಗೊಂದಲಕ್ಕೀಡು ಮಾಡಿದೆ. ಪರಿಣಾಮ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಒಂದೇ ಸಮನೆ ಭಾರತೀಯ ಷೇರುಪೇಟೆಯಲ್ಲಿರುವ ಷೇರುಗಳನ್ನು ಮಾರಾಟ ಮಾಡುತ್ತಿದ್ದು, ಎಪ್ರಿಲ್‌ ತಿಂಗಳೊಂದರಲ್ಲೇ 12,300 ಕೋಟಿ ರೂ. ಮೌಲ್ಯದ ಹೂಡಿಕೆಯ ಹೊರಹರಿವಿಗೆ ಮುಂಬಯಿ ಷೇರುಪೇಟೆ ಸಾಕ್ಷಿಯಾಗಿದೆ.

Advertisement

ಇದರೊಂದಿಗೆ ರಷ್ಯಾ- ಉಕ್ರೇನ್‌ ಯುದ್ಧ, ಕಚ್ಚಾ ತೈಲದ ದರ ಏರಿಕೆ, ಏರುತ್ತಿರುವ ಹಣ ದುಬ್ಬರ, ಕಂಪೆನಿಗಳ ತ್ತೈಮಾಸಿಕ ಫ‌ಲಿತಾಂಶಗಳು ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿರುವುದು ಕೂಡ ವಿದೇಶಿ ಹೂಡಿಕೆ ಹೊರ ಹರಿವಿಗೆ ಕಾರಣವಾಗುತ್ತಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ಇನ್ನೂ ಕೆಲವು ತಿಂಗಳುಗಳಕಾಲ ಇದೇ ಸ್ಥಿತಿ ಮುಂದುವರಿಯುವ ಸಾಧ್ಯತೆಯಿದೆ ಎಂದೂ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next