ಮಹಾರಾಷ್ಟ್ರ: ವಾಣಿಜ್ಯ ನಗರಿ ಮುಂಬಯಿಯಲ್ಲಿ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದ ಪರಿಣಾಮ ಶುಕ್ರವಾರ (ಜೂನ್ 11) ಬೆಳಗ್ಗೆ ಮುಂಬಯಿನ ಹಲವು ತಗ್ಗುಪ್ರದೇಶಗಳು ಜಲಾವೃತಗೊಂಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಒಂದು ಕಡೆ ಖುಷಿ ಮತ್ತೊಂದು ಕಡೆ ಬೇಜಾರು: ಸಂಗೀತಾ ಶೃಂಗೇರಿ ಲಾಕ್ ಡೌನ್ ಡೈರಿ
ಭಾರೀ ಮಳೆಯ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಈಗಾಗಲೇ ಆರೆಂಜ್ ಅಲರ್ಟ್ ಹೊರಡಿಸಿತ್ತು. ಕಳೆದ 24ಗಂಟೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಎಚ್ಚರಿಸಿತ್ತು.
ಕಳೆದ 24ಗಂಟೆಯಲ್ಲಿ ಮುಂಬಯಿನ ಕೊಲಾಬಾ ಪ್ರದೇಶದಲ್ಲಿ 23,4 ಮಿಲಿ ಮೀಟರ್ ಮಳೆಯಾಗಿದ್ದು, ಸಾಂತಾಕ್ರೂಝ್ ನಲ್ಲಿ ದಾಖಲೆ ಪ್ರಮಾಣದ 107.4 ಮಿಲಿ ಮೀಟರ್ ಮಳೆಯಾಗಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಳೆದ ಗುರುವಾರ ರಾತ್ರಿಯಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಶುಕ್ರವಾರ ಮಧ್ಯಾಹ್ನ 12.54ರ ಹೊತ್ತಿಗೆ ಸಮುದ್ರದಲ್ಲಿ ಭಾರೀ ಗಾತ್ರದ ಅಲೆಗಳು ಅಪ್ಪಳಿಸುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ.
ಭಾರೀ ಮಳೆಯಿಂದಾಗಿ ಮುಂಬಯಿಯ ಮಾಟುಂಗಾದ ಕಿಂಗ್ಸ್ ಸರ್ಕಲ್, ಪೂರ್ವ ಅಂಧೇರಿ, ಕೊಲಾಬಾ, ಮಾಹೀಂ ಪ್ರದೇಶದಲ್ಲಿ ಜನರು ರಸ್ತೆ ತುಂಬಾ ಹರಿಯುತ್ತಿರುವ ನೀರಿನಲ್ಲಿಯೇ ಸಂಚರಿಸುತ್ತಿರುವ ದೃಶ್ಯಗಳು ಸೆರೆಯಾಗಿದೆ ಎಂದು ವರದಿ ವಿವರಿಸಿದೆ.