ಮುಂಬಯಿ : ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರಿಗೆ ಬೆದರಿಕೆ ಕರೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಭದ್ರತೆಯನ್ನು ಮತ್ತಷ್ಟು ಬಲಪಡಿಸಲು ಮುಂಬೈ ಪೊಲೀಸರು ನಿರ್ಧರಿಸಿದ್ದಾರೆ. ಅದರಂತೆ ಬಾಲಿವುಡ್ ನಟ ಸಲ್ಮಾನ್‌ಗೆ ಈಗ Y+ ವರ್ಗದ ಭದ್ರತೆಯನ್ನು ಒದಗಿಸಲಾಗಿದೆ.
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ನಟ ಸಲ್ಮಾನ್ ಖಾನ್ ಅವರಿಗೆ ಕೊಲೆ ಬೆದರಿಕೆಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು Y+ ಭದ್ರತೆಯನ್ನು ನೀಡಿದ್ದಾರೆ.
Y+ ಭದ್ರತೆಯಲ್ಲಿ ಇಬ್ಬರು ಶಸ್ತ್ರಸಜ್ಜಿತ ಕಾವಲುಗಾರರು ಸಲ್ಮಾನ್ ಜೊತೆಯಲ್ಲಿರುತ್ತಾರೆ. ಅವರ ನಿವಾಸಕ್ಕೆ ಇಬ್ಬರು ಕಾವಲುಗಾರರನ್ನೂ ನಿಯೋಜಿಸಲಾಗಿರುತ್ತದೆ.
ಈ ವರ್ಷದ ಮೇ 29 ರಂದು ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ಹತ್ಯೆ ಮಾಡಲಾಗಿತ್ತು. ಇದಾದ ನಂತರ ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಂ ಖಾನ್ ಅವರಿಗೆ ಬೆದರಿಕೆ ಪತ್ರಗಳು ಬಂದಿತ್ತು. ಅದರಲ್ಲಿ ಸಲ್ಮಾನ್ ಅವರನ್ನು ಸಿದ್ದು ಮೂಸೆವಾಲಾ ರೀತಿಯಲ್ಲೇ ಹತ್ಯೆಗೀಡಾಗಲಿದ್ದಾರೆ ಎಂದು ಬರೆಯಲಾಗಿತ್ತು. ಅಲ್ಲದೆ ಸಿದ್ದು ಮೂಸೆವಾಲಾನನ್ನು ಕೊಂದಿರುವುದಾಗಿ ಒಪ್ಪಿಕೊಂಡ ಬಿಷ್ಣೋಯ್ ಗ್ಯಾಂಗ್‌ನ ಹಲವು ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ. ಬೆದರಿಕೆ ಪತ್ರವನ್ನು ಗಂಭೀರವಾಗಿ ಪರಿಗಣಿಸದ ಮುಂಬೈ ಪೊಲೀಸರು ಹೆಚ್ಚಿನ ಭದ್ರತೆ ನೀಡಲು ಮುಂದಾಗಿದ್ದಾರೆ.
ಇದನ್ನೂ ಓದಿ : ಎಚ್ಚರ: ರಸ್ತೆ ದಾಟುವ ಭರದಲ್ಲಿ ಈ ತಪ್ಪನ್ನು ಎಂದೂ ಮಾಡದಿರಿ… ಬೆಚ್ಚಿಬೀಳಿಸುತ್ತೇ ಈ ವಿಡಿಯೋ