Advertisement

ಮುಂಬೈ ಹೈ ಪ್ರೊಫೈಲ್ ಸೆಕ್ಸ್ ರಾಕೆಟ್; ಅಪ್ರಾಪ್ತೆ ಸೇರಿದಂತೆ ನಟಿಯರ ರಕ್ಷಣೆ

10:12 AM Jan 18, 2020 | Nagendra Trasi |

ಮುಂಬೈ:ಐಶಾರಾಮಿ ತ್ರಿಸ್ಟಾರ್ ಹೋಟೆಲ್ ನಲ್ಲಿ ನಡೆಯುತ್ತಿದ್ದ ಹೈ ಪ್ರೊಫೈಲ್ ಸೆಕ್ಸ್ ರಾಕೆಟ್ ವಿರುದ್ಧ ದಿಢೀರ್ ಕಾರ್ಯಾಚರಣೆ ನಡೆಸಿದ ಮುಂಬೈ ಪೊಲೀಸರು 29 ವರ್ಷದ ಮಹಿಳೆ ಸೇರಿದಂತೆ ಮೂವರು ನಟಿಯರನ್ನು ರಕ್ಷಿಸಿರುವ ಘಟನೆ ಅಂಧೇರಿಯಲ್ಲಿ ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಸೋಶಿಯಲ್ ಸರ್ವಿಸ್ ನ ಮುಂಬೈ ನಗರ ಪೊಲೀಸರು ಪೂರ್ವ ಅಂಧೇರಿಯಲ್ಲಿರುವ ತ್ರಿಸ್ಟಾರ್ ಹೋಟೆಲ್ ಮೇಲೆ ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಅಪ್ರಾಪ್ತೆ ಸೇರಿದಂತೆ ಮೂವರು ನಟಿಯರನ್ನು ವೇಶ್ಯಾವಾಟಿಕೆಗೆ ತಳ್ಳಲು ಯತ್ನಿಸುತ್ತಿದ್ದರೆಂದು ವರದಿ ವಿವರಿಸಿದೆ.

ಮೂವರನ್ನು ರಕ್ಷಿಸಿದ್ದು, ಸೆಕ್ಸ್ ರಾಕೆಟ್ ನ ಸೂತ್ರಧಾರಿ ಪ್ರಿಯಾ ಶರ್ಮಾ ಎಂಬಾಕೆಯನ್ನು ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪೂರ್ವ ಕಾಂದಿವಲಿಯಲ್ಲಿ ಪ್ರಿಯಾ ಶರ್ಮಾ ಟ್ರಾವೆಲೆ ಏಜೆನ್ಸಿ ನಡೆಸುತ್ತಿದ್ದು, ಈಕೆ ಅನೈತಿಕ ಚಟುವಟಿಕೆಯಲ್ಲಿ ಶಾಮೀಲಾಗಿರುವುದಾಗಿ ಹಿರಿಯ ಪೊಲೀಸ್ ಇನ್ಸ್ ಪೆಕ್ಟರ್ ಸಂದೇಶ್ ರೇವಾಳೆ ತಿಳಿಸಿದ್ದಾರೆ.

ಬಂಧಿತರಲ್ಲಿ ಒಬ್ಬಾಕೆ ನಟಿ ಮತ್ತು ಹಾಡುಗಾರ್ತಿಯಾಗಿದ್ದು, ಈಕೆ ಸಾವಧಾನಾ ಇಂಡಿಯಾ ಟಿವಿಯ ಕ್ರೈಂ ಶೋನಲ್ಲಿ ಕಾರ್ಯನಿರ್ವಹಿಸುತ್ತಿರುವುದಾಗಿ ವರದಿ ತಿಳಿಸಿದೆ. ಮತ್ತೊಬ್ಬಾಕೆ ಮರಾಠಿ ಸಿನಿಮಾದ ನಟಿ, ಅಪ್ರಾಪ್ತೆ ವೆಬ್ ಸೀರೀಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವುದಾಗಿ ಸಂದೇಶ್ ತಿಳಿಸಿದ್ದಾರೆ ಎಂದು ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next