Advertisement

ಐಪಿಎಲ್‌ ಫೈನಲ್‌-2020: ಮೊದಲ ಸಲ ಕಪ್‌ ಉಳಿಸಿಕೊಂಡ ಮುಂಬೈಇಂಡಿಯನ್ಸ್‌

11:46 PM Apr 23, 2022 | Team Udayavani |

ಶ್ರೇಯಸ್‌ ಅಯ್ಯರ್‌ ಸಾರಥ್ಯದ ಡೆಲ್ಲಿ ಕ್ಯಾಪಿಟಲ್ಸ್‌ 2020ರ ಐಪಿಎಲ್‌ನಲ್ಲಿ ಕಪ್‌ ಗೆಲ್ಲುವ ನೆಚ್ಚಿನ ತಂಡವಾಗಿ ಹೊರಹೊಮ್ಮಿತ್ತು. ಮೊದಲ ಸಲ ಫೈನಲ್‌ ಪ್ರವೇಶಿಸಿದ ಹೆಗ್ಗಳಿಕೆಗೂ ಪಾತ್ರವಾಯಿತು.

Advertisement

ಆದರೆ ಮುಂಬೈ ಇಂಡಿಯನ್ಸ್‌ನ ಅದೃಷ್ಟಕ್ಕೆ ಡೆಲ್ಲಿ ಸಾಟಿಯಾಗಲಿಲ್ಲ. ಮುಂಬೈ ಮೊದಲ ಸಲ ಕಪ್‌ ಉಳಿಸಿಕೊಂಡರೆ, ಡೆಲ್ಲಿ ರನ್ನರ್ ಅಪ್‌ಗೆ ತೃಪ್ತಿಪಡಬೇಕಾಯಿತು.

ದುಬಾೖಯಲ್ಲಿ ನಡೆದ ಹಣಾಹಣಿಯಲ್ಲಿ ಡೆಲ್ಲಿ ಫೈನಲ್‌ ಜೋಶ್‌ ತೋರುವಲ್ಲಿ ವಿಫಲವಾಯಿತು. ಗಳಿಸಿದ್ದು 7ಕ್ಕೆ 156 ರನ್‌ ಮಾತ್ರ. ಜವಾಬಿತ್ತ ಮುಂಬೈ 18.4 ಓವರ್‌ಗಳಲ್ಲಿ 5 ವಿಕೆಟಿಗೆ 157 ರನ್‌ ಬಾರಿಸಿ ಜಯಭೇರಿ ಮೊಳಗಿಸಿತು. ಚೆನ್ನೈ ಹೊರತುಪಡಿಸಿದರೆ ಐಪಿಎಲ್‌ ಇತಿಹಾಸದಲ್ಲಿ ಟ್ರೋಫಿ ಉಳಿಸಿಕೊಂಡ ಮೊದಲ ತಂಡವೆಂಬ ಹಿರಿಮೆಗೆ ಪಾತ್ರವಾಯಿತು. ಅಷ್ಟೇ ಅಲ್ಲ, ಸರ್ವಾಧಿಕ 5 ಸಲ ಕಪ್‌ ಎತ್ತಿ ಮೆರೆದಾಡಿತು.

ರಕ್ಷಣೆಗೆ ನಿಂತ ಅಯ್ಯರ್‌
ಡೆಲ್ಲಿ ಸರದಿಯಲ್ಲಿ ನಾಯಕ ಶ್ರೇಯಸ್‌ ಅಯ್ಯರ್‌ (65) ಮತ್ತು ಕೀಪರ್‌ ರಿಷಭ್‌ ಪಂತ್‌ (56) ಉಳಿದವರ್ಯಾರಿಂದಲೂ ದೊಡ್ಡ ಮೊತ್ತ ಸಂದಾಯವಾಗಲಿಲ್ಲ. ಟ್ರೆಂಟ್‌ ಬೌಲ್ಟ್ ಆರಂಭದಲ್ಲೇ ಘಾತಕ ದಾಳಿ ಸಂಘಟಿಸಿ ಮುಂಬೈಗೆ ಮೇಲುಗೈ ಒದಗಿಸಿದರು. ಸ್ಟೋಯಿನಿಸ್‌, ಧವನ್‌, ರಹಾನೆ ವಿಕೆಟ್‌ 22 ರನ್‌ ಆಗುವಷ್ಟರಲ್ಲಿ ಉರುಳಿದ ಬಳಿಕ ಅಯ್ಯರ್‌-ಪಂತ್‌ 96 ರನ್‌ ಜತೆಯಾಟ ನಿಭಾಯಿಸಿ ಹೋರಾಟವನ್ನು ಜಾರಿಯಲ್ಲಿರಿಸಿದರು. ಈ ಜೋಡಿ ಬೇರ್ಪಟ್ಟ ಬಳಿಕ ಮತ್ತೆ ಬೌಲ್ಟ್ ಘಾತಕವಾಗಿ ಪರಿಣಮಿಸಿದರು. ಹೆಟ್‌ಮೈರ್‌ ಐದೇ ರನ್ನಿಗೆ ಔಟಾದುದು ಡೆಲ್ಲಿಗೆ ಭಾರೀ ಹೊಡೆತವಾಗಿ ಪರಿಣಮಿಸಿತು.

ನಿರಾಯಾಸದ ಗೆಲುವು
ಈ ಸಾಮಾನ್ಯ ಮೊತ್ತವನ್ನು ಬೆನ್ನಟ್ಟುವ ಹಾದಿಯಲ್ಲಿ ಮುಂಬೈ ಎಲ್ಲೂ ಒತ್ತಡಕ್ಕೆ ಸಿಲುಕಲಿಲ್ಲ. ಕಪ್ತಾನನ ಆಟವಾಡಿದ ರೋಹಿತ್‌ ಶರ್ಮ 68 ರನ್‌ ಬಾರಿಸಿ ಡೆಲ್ಲಿಗೆ ಸವಾಲಾಗಿ ಉಳಿದರು. ಡಿ ಕಾಕ್‌ (20), ಸೂರ್ಯಕುಮಾರ್‌ (19), ಇಶಾನ್‌ ಕಿಶನ್‌ (ಅಜೇಯ 33) ಉಪಯುಕ್ತ ದೇಣಿಗೆ ಸಲ್ಲಿಸಿದರು. ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಐಪಿಎಲ್‌ ಟ್ರೋಫಿಯನ್ನು ಮಂಬೈ ನಾಯಕ ರೋಹಿತ್‌ ಶರ್ಮ ಅವರಿಗೆ ಹಸ್ತಾಂತರಿಸಿದರು.

Advertisement

ಲೀಗ್‌ ಹಂತದಲ್ಲೂ ಮುಂಬೈ ಇಂಡಿಯನ್ಸ್‌ ಅಮೋಘ ಪ್ರದರ್ಶನ ಕಾಯ್ದುಕೊಂಡು ಬಂದಿತ್ತು. ಅಂಕಪಟ್ಟಿಯಲ್ಲಿ ಅಗ್ರಸ್ಥಾನದ ಗೌರವ ಸಂಪಾದಿಸಿತ್ತು.

ಈ ಪಂದ್ಯಾವಳಿಯಲ್ಲಿ ಮುಂಬೈ ಕೇವಲ 15 ಆಟಗಾರರನ್ನಷ್ಟೇ ಆಡಿಸಿತ್ತು. ಇದು ತಂಡದ ಸ್ಥಿರತೆಗೆ ಸಾಕ್ಷಿ. ಕೂಟದಲ್ಲಿ ಸರ್ವಾಧಿಕ 670 ರನ್‌ ಬಾರಿಸಿದ ಕೆ.ಎಲ್‌. ರಾಹುಲ್‌ ಆರೇಂಜ್‌ ಕ್ಯಾಪ್‌ ಏರಿಸಿಕೊಂಡರು.

ಡೆಲ್ಲಿ ಕ್ಯಾಪಿಟಲ್ಸ್‌
ಮಾರ್ಕಸ್‌ ಸ್ಟೋಯಿನಿಸ್‌ ಸಿ ಡಿ ಕಾಕ್‌ ಬಿ ಬೌಲ್ಟ್ 0
ಶಿಖರ್‌ ಧವನ್‌ ಬಿ ಜಯಂತ್‌ 15
ಅಜಿಂಕ್ಯ ರಹಾನೆ ಸಿ ಡಿ ಕಾಕ್‌ ಬಿ ಬೌಲ್ಟ್ 2
ಶ್ರೇಯಸ್‌ ಅಯ್ಯರ್‌ ಔಟಾಗದೆ 65
ರಿಷಭ್‌ ಪಂತ್‌ ಸಿ ಪಾಂಡ್ಯ ಬಿ ನೈಲ್‌ 56
ಶಿಮ್ರನ ಹೆಟ್‌ಮೈರ್‌ ಸಿ ನೈಲ್‌ ಬಿ ಬೌಲ್ಟ್ 5
ಅಕ್ಷರ್‌ ಪಟೇಲ್‌ ಸಿ ರಾಯ್‌ ಬಿ ನೈಲ್‌ 9
ಕಾಗಿಸೊ ರಬಾಡ ರನೌಟ್‌ 0
ಇತರ 4
ಒಟ್ಟು (7 ವಿಕೆಟಿಗೆ) 156
ವಿಕೆಟ್‌ ಪತನ: 1-0, 2-16, 3-22, 4-118, 5-137, 6-149, 7-156.
ಬೌಲಿಂಗ್‌:
ಟ್ರೆಂಟ್‌ ಬೌಲ್ಟ್ 4-0-30-3
ಜಸ್‌ಪ್ರೀತ್‌ ಬುಮ್ರಾ 4-0-28-0
ಜಯಂತ್‌ ಯಾದವ್‌ 4-0-25-1
ನಥನ್‌ ಕೋಲ್ಟರ್‌ ನೈಲ್‌ 4-0-29-2
ಕೃಣಾಲ್‌ ಪಾಂಡ್ಯ 3-0-30-0
ಕೈರನ್‌ ಪೊಲಾರ್ಡ್‌ 1-0-13-0

ಮುಂಬೈ ಇಂಡಿಯನ್ಸ್‌
ರೋಹಿತ್‌ ಶರ್ಮ ಸಿ ಲಲಿತ್‌ ಬಿ ನೋರ್ಜೆ 68
ಕ್ವಿಂಟನ್‌ ಡಿ ಕಾಕ್‌ ಸಿ ಪಂತ್‌ ಬಿ ಸ್ಟೋಯಿನಿಸ್‌ 20
ಸೂರ್ಯಕುಮಾರ್‌ ರನೌಟ್‌ 19
ಇಶಾನ್‌ ಕಿಶನ್‌ ಔಟಾಗದೆ 33
ಕೈರನ್‌ ಪೊಲಾರ್ಡ್‌ ಬಿ ರಬಾಡ 9
ಹಾರ್ದಿಕ್‌ ಪಾಂಡ್ಯ ಸಿ ರಹಾನೆ ಬಿ ನೋರ್ಜೆ 3
ಕೃಣಾಲ್‌ ಪಾಂಡ್ಯ ಔಟಾಗದೆ 1
ಇತರ 4
ಒಟ್ಟು (18.4 ಓವರ್‌ಗಳಲ್ಲಿ 5 ವಿಕೆಟಿಗೆ) 157
ವಿಕೆಟ್‌ ಪತನ: 1-45, 2-90, 3-137, 4-147, 5-156.
ಬೌಲಿಂಗ್‌:
ಆರ್‌. ಅಶ್ವಿ‌ನ್‌ 4-0-28-0
ಕಾಗಿಸೊ ರಬಾಡ 3-0-32-1
ಆ್ಯನ್ರಿಚ್‌ ನೋರ್ಜೆ 2.4-0-25-2
ಮಾರ್ಕಸ್‌ ಸ್ಟೋಯಿನಿಸ್‌ 2-0-23-1
ಅಕ್ಷರ್‌ ಪಟೇಲ್‌ 4-0-16-0
ಪ್ರವೀಣ್‌ ದುಬೆ 3-0-29-0

Advertisement

Udayavani is now on Telegram. Click here to join our channel and stay updated with the latest news.

Next