Advertisement
ಡೆಲ್ಲಿ ತಂಡವನ್ನು 4 ವಿಕೆಟಿಗೆ 174 ರನ್ನಿಗೆ ನಿಯಂತ್ರಿಸಿದ್ದ ಮುಂಬೈ ತಂಡ ಆ ಬಳಿಕ ಹಠಾತ್ ಕುಸಿತ ಕಂಡು ಸೋಲಿನಂಚಿಗೆ ಬಿತ್ತು. ಅಂತಿಮ ಹಂತದಲ್ಲಿ ಕಟ್ಟಿಂಗ್ ಬಿರುಸಿನ ಆಟವಾಡಿ ಗೆಲುವಿನ ಆಸೆ ಮೂಡಿಸಿದರು. ಆದರೆ ಅಂತಿಮ ಓವರಿನಲ್ಲಿ ಅವರು ಔಟಾದ ಕಾರಣ ಮುಂಬೈ 19.3 ಓವರ್‌ಗಳಲ್ಲಿ 163 ರನ್ನಿಗೆ ಆಲೌಟಾಗಿ 11 ರನ್ನಿನಿಂದ ಶರಣಾಯಿತು. ಈ ಸೋಲಿನಿಂದ ಮುಂಬೈ ಒಟ್ಟಾರೆ 12 ಅಂಕಗಳೊಂದಿಗೆ ಐದನೇ ಸ್ಥಾನ ಪಡೆಯಿತು. ಹೈದರಾಬಾದ್, ಚೆನ್ನೈ ಮತ್ತು ಕೋಲ್ಕತಾ ಈಗಾಗಲೇ ಪ್ಲೇ ಆಫ್ಗೆ ತೇರ್ಗಡೆಯಾಗಿವೆೆ. ಇನ್ನೊಂದು ತಂಡ ಯಾವುದೆಂದು ನಿರ್ಧಾರವಾಗಬೇಕಿದೆ. ಚೆನ್ನೈ ವಿರುದ್ಧ ಪಂಜಾಬ್ ಭಾರೀ ಅಂತರದಿಂದ ಗೆದ್ದರೆ ಮಾತ್ರ ಅದಕ್ಕೆ ಮುನ್ನಡೆಯುವ ಅವಕಾಶವಿದೆ. ಇಲ್ಲದಿದ್ದರೆ ಸದ್ಯ 14 ಅಂಕ ಹೊಂದಿರುವ ರಾಜಸ್ಥಾನ್ ನಾಲ್ಕನೇ ತಂಡವಾಗಿ ಪ್ಲೇ ಆಫ್ಗೆ ಪ್ರವೇಶಿಸಲಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ತಂಡ ಉತ್ತಮವಾಗಿ ಆಡಿತು. ಆರಂಭದಲ್ಲಿ ನಿಧಾನಗತಿಯಲ್ಲಿ ಆಡಿದರೂ ಉತ್ತಮ ಜತೆಯಾಟದ ಮೂಲಕ ವಿಕೆಟ್ ಉಳಿಸಿಕೊಳ್ಳಲು ಪ್ರಯತ್ನಿಸಿತು. ನಾಯಕ ಶ್ರೇಯಸ್ ಅಯ್ಯರ್ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದರೆ ರಿಷಬ್ ಪಂತ್, ಶಂಕರ್ ಭರ್ಜರಿ ಆಟವಾಡಿದರು. ರಿಷಬ್ ಪಂತ್ ಮತ್ತು ವಿಜಯ್ ಶಂಕರ್ ನಾಲ್ಕನೇ ವಿಕೆಟಿಗೆ 64 ರನ್ ಪೇರಿಸಿ ತಂಡದ ಉತ್ತಮ ಮೊತ್ತಕ್ಕೆ ಕಾರಣರಾದರು. ಪಂತ್ 44 ಎಸೆತ ಎದುರಿಸಿ 4 ಬೌಂಡರಿ ಮತ್ತು 4 ಸಿಕ್ಸರ್ ನೆರವಿನಿಂದ 64 ರನ್ ಹೊಡೆದರು. ರನ್ನಿಗಾಗಿ ಒದ್ದಾಡಿದ ಮುಂಬೈ
ಪ್ಲೇ ಆಫ್ಗೆ ತೇರ್ಗಡೆಯಾಗಬೇಕಿದ್ದರೆ ಮುಂಬೈ ಈ ಪಂದ್ಯ ಗೆಲ್ಲಬೇಕಿತ್ತು. ಆದರೆ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ ಮುಂಬೈ ಈ ಅವಕಾಶ ಕಳೆದುಕೊಂಡಿತು.
Related Articles
Advertisement
ಮೊದಲ ಎಸೆತದಲ್ಲಿ ಕಟ್ಟಿಂಗ್ ಸಿಕ್ಸರ್ ಬಾರಿಸಿದರು. ಆದರೆ ದ್ವಿತೀಯ ಎಸೆತ ದಲ್ಲಿ ಮ್ಯಾಕ್ಸ್‌ವೆಲ್‌ಗೆ ಕ್ಯಾಚಿತ್ತು ನಿರ್ಗಮಿಸುವುದರೊಂದಿಗೆ ಸೋಲು ಖಚಿತವಾಯಿತು. ಪ್ಲೇ ಆಫ್ ಗೆ ವಿಫಲ
ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿದ್ದರೂ ಮುಂಬೈ ತಂಡ 175 ರನ್ ಗಳಿಸಲು ವಿಫಲವಾಯಿತು. ಗೆದ್ದರೆ ಸುಲಭವಾಗಿ ಪ್ಲೇ ಆಫ್ಗೆ ಪ್ರವೇಶಿಸಬಹುದಿತ್ತು. ಐಪಿಎಲ್ ಇತಿಹಾಸವನ್ನು ಗಮನಿಸಿದರೆ ಮುಂಬೈ ಪ್ರತಿ ಬಾರಿಯೂ ಆರಂಭದಲ್ಲಿ ಹೀನಾಯವಾಗಿ ಆಡಿದ್ದರೂ ಕೂಟದ ಅಂತಿಮ ಹಂತದಲ್ಲಿ ಸತತ ಗೆಲುವು ಸಾಧಿಸಿ ಪ್ಲೇ ಆಫ್ಗೆ ತೇರ್ಗಡೆಯಾಗುತ್ತಿತ್ತು. ಕಳೆದ ನಾಲ್ಕು ವರ್ಷಗಳಲ್ಲಿ ಮುಂಬೈ ಅಂತಿಮ ಹಂತದಲ್ಲಿ ಗರಿಷ್ಠ 4ಕ್ಕಿಂತ ಹೆಚ್ಚಿನ ಪಂದ್ಯಗಳಲ್ಲಿ ಜಯಭೇರಿ ಬಾರಿಸಿ ಪ್ಲೇ ಆಫ್ಗೆ ತೇರ್ಗಡೆಯಾಗಿತ್ತಲ್ಲದೇ ಮೂರು ಬಾರಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿತ್ತು. ಆದರೆ ಈ ಬಾರಿ ಮುಂಬೈ ಸುಲಭ ಅವಕಾಶ ಪಡೆದಿದ್ದರೂ ಇಶಾನ್ ಕಿಶನ್, ಪೊಲಾರ್ಡ್, ಸ್ವತಃ ನಾಯಕ ರೋಹಿತ್ ಅವರ ಬ್ಯಾಟಿಂಗ್ ವೈಫಲ್ಯದಿಂದಾಗಿ ಪ್ಲೇ ಆಫ್ಗೆ ತೇರ್ಗಡೆಯಾಗಲು ವಿಫಲವಾಯಿತು. ಸ್ಕೋರ್‌ಪಟ್ಟಿ
ಡೆಲ್ಲಿ ಡೇರ್‌ಡೆವಿಲ್ಸ್
ಪೃಥ್ವಿ ಶಾ ರನೌಟ್ 12
ಗ್ಲೆನ್ ಮ್ಯಾಕ್ಸ್‌ವೆಲ್ ಬಿ ಬುಮ್ರಾ 22
ಶ್ರೇಯಸ್ ಅಯ್ಯರ್ ಸಿ ಕೃಣಾಲ್ ಬಿ ಮಾರ್ಕಂಡೆ 6
ರಿಷಬ್ ಪಂತ್ ಸಿ ಪೊಲಾರ್ಡ್ ಬಿ ಕೃಣಾಲ್ 64
ವಿಜಯ್ ಶಂಕರ್ ಔಟಾಗದೆ 43
ಅಭಿಷೇಕ್ ಶರ್ಮ ಔಟಾಗದೆ 15
ಇತರ: 12
ಒಟ್ಟು (20 ಓವರ್‌ಗಳಲ್ಲಿ 4 ವಿಕೆಟಿಗೆ) 174
ವಿಕೆಟ್ ಪತನ: 1-30, 2-38, 3-75, 4-139
ಬೌಲಿಂಗ್:
ಕೃಣಾಲ್ ಪಾಂಡ್ಯ 2-0-11-1
ಜಸ್‌ಪ್ರೀತ್ ಬುಮ್ರಾ 4-0-29-1
ಮುಸ್ತಾಫಿಜುರ್ ರೆಹಮಾನ್ 4-0-36-0
ಮಯಾಂಕ್ ಮಾರ್ಕಂಡೆ 2-0-21-1
ಬಿಜೆ ಕಟ್ಟಿಂಗ್ 4-0-36-0
ಮುಂಬೈ ಇಂಡಿಯನ್ಸ್
ಸೂರ್ಯಕುಮಾರ್ ಯಾದವ್ ಸಿ ಶಂಕರ್ ಬಿ ಲಮಿಚನೆ 12
ಎವಿನ್ ಲೆವಿಸ್ ಸ್ಟಂಪ್ಡ್ ಪಂತ್ ಬಿ ಮಿಶ್ರಾ 48
ಇಶಾನ್ ಕಿಶನ್ ಸಿ ಶಂಕರ್ ಬಿ ಮಿಶ್ರಾ 5
ಕೈರನ್ ಪೊಲಾರ್ಡ್ ಸಿ ಬೌಲ್ಟ್ ಬಿ ಲಮಿಚನೆ 7
ರೋಹಿತ್ ಶರ್ಮ ಸಿ ಬೌಲ್ಟ್ ಬಿ ಪಟೇಲ್ 13
ಕೃಣಾಲ್ ಪಾಂಡ್ಯ ಸಿ ಬದಲಿಗ ಬಿ ಲಮಿಚನೆ 4
ಹಾರ್ದಿಕ್ ಪಾಂಡ್ಯ ಸಿ ಬದಲಿಗ ಬಿ ಮಿಶ್ರಾ 27
ಬಿಜೆ ಕಟ್ಟಿಂಗ್ ಸಿ ಮ್ಯಾಕ್ಸ್‌ವೆಲ್ ಬಿ ಪಟೇಲ್ 37
ಮಯಾಂಕ್ ಮಾರ್ಕೆಂಡೆ ಬಿ ಬೌಲ್ಟ್ 3
ಜಸ್‌ಪ್ರೀತ್ ಬುಮ್ರಾ ಸಿ ಬೌಲ್ಟ್ ಬಿ ಪಟೇಲ್ 0
ಮುಸ್ತಾಫಿಜುರ್ ರೆಹಮಾನ್ ಔಟಾಗದೆ 0
ಇತರ: 7
ಒಟ್ಟು (19.3 ಓವರ್‌ಗಳಲ್ಲಿ ಆಲೌಟ್) 163
ವಿಕೆಟ್ ಪತನ: 1-12, 2-57, 3-74, 4-74, 5-78, 6-121, 7-122, 8-157, 9-163
ಬೌಲಿಂಗ್:
ಸಂದೀಪ್ ಲಮಿಚನೆ 4-0-36-3
ಟ್ರೆಂಟ್ ಬೌಲ್ಟ್ 4-0-33-1
ಗ್ಲೆನ್ ಮ್ಯಾಕ್ಸ್‌ವೆಲ್ 2-0-19-0
ಹರ್ಷಲ್ ಪಟೇಲ್ 2.3-0-28-3
ಲಿಯಮ್ ಪ್ಲಂಕೆಟ್ 3-0-27-0
ಅಮಿತ್ ಮಿಶ್ರಾ 4-0-19-3
ಪಂದ್ಯಶ್ರೇಷ್ಠ: ಅಮಿತ್ ಮಿಶ್ರಾ