Advertisement
ರೋಹಿತ್ ಶರ್ಮ ನೇತೃತ್ವದ ಮುಂಬೈ ನಿಜವಾಗಿಯೂ ಅದೃಷ್ಟದ ಬಲದಿಂದಲೇ ಈ ಬಾರಿ ಪ್ಲೇ ಆಫ್ಗೆ ತೇರ್ಗಡೆಯಾಗಿದೆ. ಕಳೆದ ವರ್ಷ ಶೋಚನೀಯ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದ್ದ ಮುಂಬೈ ಈ ಬಾರಿ ಆರಂಭ ದಲ್ಲಿ ಸಾಧಾರಣ ನಿರ್ವಹಣೆ ನೀಡಿತು. ಕೊನೆ ಹಂತದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ತಂಡವು ಪ್ಲೇ ಆಫ್ಗೆ ತೇರ್ಗಡೆಗೆ ಹಾತೊರೆಯುತ್ತಿತ್ತು. ಅಂತಿಮ ಲೀಗ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವು ರಾಯಲ್ ಚಾಲೆಂಜರ್ ಬೆಂಗಳೂರು ತಂಡವನ್ನು ಮಣಿಸುವ ಮೂಲಕ ಮುಂಬೈ ಪ್ಲೇ ಆಫ್ಗೆ ತೇರ್ಗಡೆಯಾಯಿತು.
ಕೆಎಲ್ ರಾಹುಲ್ ಅವರ ಅನು ಪಸ್ಥಿತಿಯ ಹೊರತಾಗಿಯೂ ಲಕ್ನೋ ತಂಡದ ಬ್ಯಾಟಿಂಗ್ ಬಲಿಷ್ಠವಾಗಿದೆ. 14 ಪಂದ್ಯಗಳಿಂದ 368 ರನ್ ಪೇರಿಸಿರುವ ಮಾರ್ಕಸ್ ಸ್ಟೋಯಿನಿಸ್ ಸ್ಫೋಟಕ ಆಟಕ್ಕೆ ಹೆಸರುವಾಸಿ. ಅವರಲ್ಲದೇ ಕೈಲ್ ಮೇಯರ್ (361 ರನ್) ಮತ್ತು ನಿಕೋರಾಸ್ ಪೂರಣ್ (358 ರನ್) ಅವರ ಅಮೋಘ ಆಟದಿಂದಾಗಿ ಲಕ್ನೋ ಸುಲಭವಾಗಿ ಪ್ಲೇ ಆಫ್ಗೆ ತೇರ್ಗಡೆಯಾಯಿತು.
Related Articles
Advertisement
ಮುಂಬೈಯ ಬ್ಯಾಟಿಂಗ್ ಶಕ್ತಿಗೆ ಕಡಿವಾಣ ಹಾಕುವ ಬಗ್ಗೆಯೂ ಲಕ್ನೋ ಚಿಂತಿಸಬೇಕಾಗಿದೆ. ತಂಡದ ಪರ ಗರಿಷ್ಠ ವಿಕೆಟ್ ಪಡೆದಿರುವ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯಿ (16 ವಿಕೆಟ್) ಈ ಮಹತ್ವದ ಪಂದ್ಯದಲ್ಲೂ ಪ್ರಮುಖ ಪಾತ್ರ ವಹಿಸಬೇಕಾಗಿದೆ. ಅವರಿಗೆ ನಾಯಕ ಕೃಣಾಲ್ ಪಾಂಡ್ಯ ಅವರಲ್ಲದೇ ನವೀನ್ ಉಲ್ ಹಕ್ ಮತ್ತು ಆವೇಶ್ ಖಾನ್ ನೆರವಾಗುವ ಸಾಧ್ಯತೆಯಿದೆ. ಅನುಭವಿ ಅಮಿತ್ ಮಿಶ್ರಾ ಕೂಡ ಉತ್ತಮ ದಾಳಿ ಸಂಘಟಿಸಲು ಸಮರ್ಥರಿದ್ದಾರೆ.
ಲೀಗ್ ಹಂತದಲ್ಲಿ ಮುಂಬೈ ತಂಡ ಈ ಪಿಚ್‌ನಲ್ಲಿ ಒದ್ದಾಡಿರುವುದನ್ನು ಲಕ್ನೋ ಗಮನಿಸಿದೆ. ಹೀಗಾಗಿ ನಿಯಂತ್ರಿತ ಬೌಲಿಂಗ್ ಮೂಲಕ ಮುಂಬೈಯನ್ನು ಕಟ್ಟಿಹಾಕಲು ಲಕ್ನೋ ಯೋಚಿಸುತ್ತಿದೆ.
ಮುಂಬೈ ಶ್ರೇಷ್ಠಮುಂಬೈಯ ಬ್ಯಾಟಿಂಗ್ ಮತ್ತು ಬೌಲಿಂಗ್ ಬಲಿಷ್ಠವಾಗಿದೆ. ಆಸ್ಟ್ರೇಲಿ ಯದ ಆಲ್‌ರೌಂಡರ್ ಕ್ಯಾಮರಾನ್ ಗ್ರೀನ್ ಅವರ ಕೊಡುಗೆಯನ್ನು ಮುಂಬೈ ಮರೆಯಲು ಸಾಧ್ಯವಿಲ್ಲ. ಕೊನೆಯ ಲೀಗ್‌ನಲ್ಲಿ ಮುಂಬೈ ತಂಡವು ಹೈದರಾಬಾದ್ ವಿರುದ್ಧ ಗೆಲ್ಲುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅವರ ಅಜೇಯ ಶತಕದಿಂದಾಗಿ ಮುಂಬೈ ಜಯಿಸಿತ್ತು. ಗ್ರೀನ್ (381 ರನ್) ಅವರಲ್ಲದೇ ಸೂರ್ಯಕುಮಾರ್ ಯಾದವ್ (511 ರನ್) ನಾಯಕ ರೋಹಿತ್ ಶರ್ಮ (313 ರನ್), ಇಶಾನ್ ಕಿಶನ್ (439) ಅವರ ಬ್ಯಾಟಿಂಗ್ ವೈಭವ ಮುಂಬೈಯ ಶಕ್ತಿಯಾಗಿದೆ. ಇವರನ್ನು ಕಟ್ಟಿಹಾಕಲು ಲಕ್ನೋ ಕಾರ್ಯತಂತ್ರ ರೂಪಿಸಬೇಕಾಗಿದೆ. ಬೌಲಿಂಗ್‌ನಲ್ಲಿ ಮುಂಬೈ ಪಿಯೂಷ್ ಚಾವ್ಲಾ ಅವರ ಅನುಭವವನ್ನು ಬಳಸಿಕೊಳ್ಳುವ ಸಾಧ್ಯತೆಯಿದೆ. ಇಷ್ಟರವರೆಗೆ 20 ವಿಕೆಟ್ ಪಡೆದಿರುವ ಅವರು ತಂಡದ ಗರಿಷ್ಠ ವಿಕೆಟ್ ಪಡೆದ ಸಾಧಕರಾಗಿದ್ದಾರೆ. ಅವರಿಗೆ ಜಾಸನ್ ಬೆಹ್ರನ್‌ಡಾಫ್ì (14 ವಿಕೆಟ್) ನೆರವಾಗುವ ಸಾಧ್ಯತೆಯಿದೆ.