Advertisement

AdnaanShaik: ಸೋದರಿಗೆ ಹಿಗ್ಗಾಮುಗ್ಗಾ ಥಳಿತ; ಬಿಗ್‌ಬಾಸ್‌ ಮಾಜಿ ಸ್ಪರ್ಧಿ ವಿರುದ್ದ ಎಫ್ಐಆರ್

10:48 AM Sep 30, 2024 | Team Udayavani |

ಮುಂಬಯಿ: ಸಹೋದರಿಯ ಮೇಲೆ ಹಿಗ್ಗಾಮುಗ್ಗಾ ಥಳಿಸಿದ ಆರೋಪದ ಕೇಳಿ ಬಂದ ಹಿನ್ನೆಲೆ ಜನಪ್ರಿಯ ಯೂಟ್ಯೂಬರ್ ಮತ್ತು ಬಿಗ್ ಬಾಸ್  ಓಟಿಟಿ-3 ( Bigg Boss OTT 3) ಖ್ಯಾತಿಯ ಅದ್ನಾನ್ ಶೇಖ್ (Adnaan Shaikh) ವಿರುದ್ಧ ಎಫ್‌ಐಆರ್ ದಾಖಲಾಗಿದೆ.

Advertisement

ಅದ್ನಾನ್‌ ಶೇಖ್‌ ಸಹೋದರಿ ಆಯೇಷಾ ಗೋರೆಗಾಂವ್‌ನ ಬಂಗೂರ್ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

“ಕೊನೆಗೆ ನನ್ನ ದೂರನ್ನು ಪೊಲೀಸರು ದಾಖಲಿಸಿದ್ದಾರೆ ಮತ್ತು ನನ್ನನ್ನು ಥಳಿಸಿದ ನನ್ನ ಸಹೋದರನ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ” ಎಂದು ಅದ್ನಾನ್ ಸಹೋದರಿ ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡು ಹೇಳಿದ್ದಾರೆ.

ಇದನ್ನೂ ಓದಿ: BBK-11: ಮೊದಲ ದಿನವೇ ಬಿಗ್ ಮನೆಯಲ್ಲಿ ಚಿನ್ನಾಭರಣ ಕಳಚಿಟ್ಟ ‘ಗೋಲ್ಡ್ ಸುರೇಶ್’

ಕೆಲ ಸಮಯದಿಂದ ಹಿಂದೆ ಅದ್ನಾನ್‌ ತನ್ನ ಸಹೋದರಿ ಆಯೇಷಾ ಹಾಗೂ ಅವರ ಮಾವನ ಮೇಲೆ ಹಲ್ಲೆ ನಡೆಸಿದ್ದಾರೆ. ಸಹೋದರಿಗೆ ಹಿಗ್ಗಾಮುಗ್ಗಾವಾಗಿ ಥಳಿಸಿದ್ದಾರೆ. ಮೊದಮೊದಲು ಕುಟುಂಬಕ್ಕೆ ಸಂಬಂಧಿಸಿದ ವಿಚಾರವಾಗಿ ಮನೆಯಲ್ಲೇ ಸಮಸ್ಯೆ ಬಗೆಹರಿಸಿಕೊಳ್ಳಲು ಪ್ರಯತ್ನಿಸಲಾಗಿದೆ ಆದರೆ ಆದಾದ ಬಳಿಕವೂ ಅದ್ನಾನ್‌ ಅದೇ ರೀತಿಯಾಗಿ ವರ್ತಿಸಿದ್ದು ಸಹೋದರಿ ಈ ಸಂಬಂಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ವರದಿ ತಿಳಿಸಿದೆ.

Advertisement

ಮೊದಲಿಗೆ ಪೊಲೀಸರು ಅದ್ನಾನ್‌ ಮೇಲೆ ದೂರು ದಾಖಲಿಸಲು ಹಿಂಜರಿದಿದ್ದು, ಅವರು ಪ್ರಭಾವಿ ವ್ಯಕ್ತಿಗಳನ್ನು ಬಳಸಿಕೊಳ್ಳಲು ಯತ್ನಿಸಿದ್ದಾರೆ ಎಂದು ಆಯೇಷಾ ಹೇಳಿದ್ದಾರೆ. ಆ ಬಳಿಕ ಆಯೇಷಾ ಸಾಮಾಜಿಕ ಕಾರ್ಯಕರ್ತರೊಬ್ಬರ ಜತೆ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

ಯಾವ ಕಾರಣಕ್ಕಾಗಿ ಅದ್ನಾನ್‌ ಸಹೋದರಿ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನುವುದರ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ.

ಅದ್ನಾನ್ ಶೇಖ್ ಟಿಕ್‌ಟಾಕ್‌ನಲ್ಲಿ ಟೀಮ್ 07 ಗುಂಪಿನ ಭಾಗವಾಗಿ ಖ್ಯಾತಿ ಆಗಿದ್ದರು. ಇದು ಸಾಮಾಜಿಕ ಮಾಧ್ಯಮದಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಗಳಿಸಿದೆ. ಬಿಗ್‌ ಬಾಸ್‌ ಓಟಿಟಿ-3 ಮೂಲಕ ಖ್ಯಾತಿಯಾದ ಅವರು ಇತ್ತೀಚೆಗೆ ಬಹುಕಾಲದ ಗೆಳತಿ ರಿದ್ಧಿ ಅವರನ್ನು ಮದುವೆಯಾಗಿದ್ದರು. ರಿದ್ದಿ ಮದುವೆ ಬಳಿಕ ಇಸ್ಲಾಂಗೆ ಮತಾಂತರಗೊಂಡಿದ್ದಾರೆ. ಅವರ ಹೆಸರನ್ನು ಆಯೇಷಾ ಶೇಕ್‌ ಎಂದು ಬದಲಾಯಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next